ETV Bharat / state

ಚಿಕ್ಕಮಗಳೂರು: ಭೀಕರ ಅಪಘಾತದಲ್ಲಿ ಬೈಕ್​ ಸವಾರ ಸಾವು, ಯುವತಿಯ ನಾಲಿಗೆ ಕಟ್​ - Road Accident - ROAD ACCIDENT

ರಸ್ತೆ ಅಪಘಾತದಲ್ಲಿ ಬೈಕ್​ ಸವಾರ ಸಾವನ್ನಪ್ಪಿದ್ದು, ಹಿಂಬದಿ ಕುಳಿತಿದ್ದ ಯುವತಿಯ ನಾಲಿಗೆ ತುಂಡಾಗಿದೆ.

ಅಪಘಾತಗೊಂಡ ಬೈಕ್​
ಅಪಘಾತಕ್ಕೀಡಾದ ಬೈಕ್​ (ETV Bharat)
author img

By ETV Bharat Karnataka Team

Published : May 28, 2024, 12:03 PM IST

ಚಿಕ್ಕಮಗಳೂರು: ಬೈಕ್-ಕ್ಯಾಂಟರ್ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಕುಳಿತಿದ್ದ ಯುವತಿಯ ನಾಲಿಗೆ ತುಂಡಾದ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ ಸೋಮವಾರ ನಡೆಯಿತು. 26 ವರ್ಷದ ಶಿವರಾಜ್ ಮೃತ ದುರ್ದೈವಿ. 20 ವರ್ಷದ ಲಾವಣ್ಯ ಗಾಯಾಳು ಎಂದು ಗುರುತಿಸಲಾಗಿದೆ.

ಯುವಕನ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಯುವತಿಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವರಾಜ್ ಮತ್ತು ಲಾವಣ್ಯ ಇಬ್ಬರೂ ಅರಸೀಕೆರೆ ತಾಲೂಕಿನ ಬಂದೂರಿನವರೆಂದು ತಿಳಿದುಬಂದಿದೆ. ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ನಡೆದ ಇತರೆ ಘಟನೆಗಳು- ನೀರಿನಲ್ಲಿ ಮುಳುಗಿ ಬಾಲಕ ಸಾವು: ಕೆರೆಯಲ್ಲಿ ಈಜಲು ಹೋದ ಬಾಲಕ ನೀರು ಪಾಲಾಗಿರುವ ಘಟನೆ ಸೋಮವಾರ ಚಿಕ್ಕಮಗಳೂರು ನಗರದ ಕೋಟೆ ಕೆರೆಯಲ್ಲಿ ನಡೆದಿದೆ. ಕೆರೆಯಲ್ಲಿ ಕಾಲು ಹೂತು 13 ವರ್ಷದ ಬಾಲಕ ಶಶಾಂಕ್ ಸಾವನ್ನಪ್ಪಿದ್ದಾನೆ. ನಾಲ್ವರು ಸ್ನೇಹಿತರು ಕೆರೆಯಲ್ಲಿ ಈಜು ಕಲಿಯಲು ತೆರಳಿದ್ದರು. ಶಶಾಂಕ್​ ಕಾಲು ಕೆಸರಲ್ಲಿ ಸಿಲುಕಿ ಹೊರಬರಲಾಗದೇ ಪ್ರಾಣ ಕಳೆದುಕೊಂಡಿದ್ದಾನೆ. ಕೆರೆಯಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ಬದುಕಿಸಲು ಇತರೆ ಸ್ನೇಹಿತರು ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ.

ಕೂಡಲೇ ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಸಿಬ್ಬಂದಿ, ಬಾಲಕನ ಶವ ಹೊರತೆಗೆದಿದ್ದಾರೆ. ನಗರ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

40 ಅಡಿ ಆಳದ ಬಾವಿಗೆ ಬಿದ್ದ ಕರು ರಕ್ಷಣೆ (ETV bharat)

40 ಅಡಿ ಆಳದ ಬಾವಿಗೆ ಬಿದ್ದ ಕರು ರಕ್ಷಣೆ: 40 ಅಡಿ ಆಳದ ಬಾವಿಗೆ ಬಿದ್ದ ಮೂರು ತಿಂಗಳ ಕರುವನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದರು. ಶೃಂಗೇರಿ ಪಟ್ಟಣದ ವಿಶ್ವನಾಥ್ ಎಂಬವರ ಮನೆಯ ಹಿಂಭಾಗದಲ್ಲಿದ್ದ ಬಾವಿಗೆ ಆಯತಪ್ಪಿ ಕರು ಬಿದ್ದಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದು ಕರು ಮೇಲೆತ್ತಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಹಾಡಹಗಲೇ ಡಾಕ್ಟರ್ ಮನೆ ಕಳ್ಳತನಕ್ಕೆ ಯತ್ನ: ಸಿಸಿಟಿವಿ ದೃಶ್ಯ - Thieves Attempt Theft

ETV Bharat Logo

Copyright © 2025 Ushodaya Enterprises Pvt. Ltd., All Rights Reserved.