ETV Bharat / state

ಬೆಳಗಾವಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಭೂಪ - Snake Bite - SNAKE BITE

ಹಾವು ಕಚ್ಚಿ ಗಾಯಗೊಂಡ ಯುವಕ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಬಂದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ (ETV Bharat)
author img

By ETV Bharat Karnataka Team

Published : May 28, 2024, 11:34 AM IST

Updated : May 28, 2024, 12:23 PM IST

ಸ್ನೇಹಿತ ರಿಹಾನ್ ಮಾಹಿತಿ (ETV Bharat)

ಬೆಳಗಾವಿ: ಹಾವಿನೊಂದಿಗೆ ಚಿಕಿತ್ಸೆಗೆ ಆಗಮಿಸಿದ ಯುವಕನನ್ನು ನೋಡಿ ಆಸ್ಪತ್ರೆ ಸಿಬ್ಬಂದಿ ಕಕ್ಕಾಬಿಕ್ಕಿಯಾದ ಘಟನೆ ಸೋಮವಾರ ನಡೆದಿದೆ. ಬೆಳಗಾವಿ ತಾಲೂಕಿನ ಹುಂಚಾನಟ್ಟಿ ಗ್ರಾಮದ ಶಾಹಿದ್ ಎಂಬಾತನಿಗೆ ಹಾವು ಕಚ್ಚಿದೆ. ತನಗೆ ಕಚ್ಚಿದ ಹಾವಿನೊಂದಿಗೆ ಆತ ಬೀಮ್ಸ್ ಆಸ್ಪತ್ರೆಗೆ ಬಂದಿದ್ದಾನೆ. ಇದನ್ನು ನೋಡಿದ ಜನ ಮತ್ತು ಆಸ್ಪತ್ರೆ ಸಿಬ್ಬಂದಿ ಅರೆಕ್ಷಣ ಹೌಹಾರಿದರು.

ಮನೆ ಮುಂದೆ ಕಾಣಿಸಿಕೊಂಡ ಹಾವನ್ನು ಹಿಡಿದ ಶಾಹಿದ್ ಅದನ್ನು ಬೆಟ್ಟಕ್ಕೆ ‌ಬಿಡಲು ಸ್ನೇಹಿತರೊಂದಿಗೆ ತೆರಳಿದ್ದಾನೆ. ಈ ಸಂದರ್ಭದಲ್ಲಿ ಆತನಿಗೆ ಕಚ್ಚಿದೆ ಎಂದು ತಿಳಿದುಬಂದಿದೆ.

ಸ್ನೇಹಿತ ರಿಹಾನ್ ಪ್ರತಿಕ್ರಿಯಿಸಿ, "ತನ್ನ ಮನೆ ಕಡೆ ಬರುತ್ತಿದ್ದ ಹಾವು ಹಿಡಿಯಲು ಹೋದಾಗ ಆತನ ಕೈಗೆ ಕಚ್ಚಿದೆ. ಚಿಕಿತ್ಸೆ ನೀಡಲು ಸುಲಭವಾಗಲಿ ಎಂದು ಅದನ್ನು ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದೇವೆ" ಎಂದು ಹೇಳಿದರು.

ಚಿಕಿತ್ಸೆ ಪಡೆದ ಬಳಿಕ ಮನೆಗೆ ಮರಳಿದ ಶಾಹಿದ್, ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವುದಾಗಿ ತಿಳಿಸಿದ್ದಾನೆ.

ಇದನ್ನೂ ಓದಿ: ಚಿಕ್ಕಮಗಳೂರು: ಹಾವು ಕಚ್ಚಿದ್ದರೂ ಮುಳ್ಳು ಚುಚ್ಚಿದೆ ಎಂದು ಸುಮ್ಮನೆ ಮಲಗಿದ್ದ ವ್ಯಕ್ತಿ ಸಾವು

Last Updated : May 28, 2024, 12:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.