ETV Bharat / state

ಕದ್ದ ಚಿನ್ನಾಭರಣ ಅಡಮಾನ; ಪರಿಣಾಮ, ಕ್ರಿಮಿನಲ್ ಪ್ರಕ್ರಿಯೆಗೆ ಮಾರ್ಗಸೂಚಿ ರಚಿಸಲು ಹೈಕೋರ್ಟ್ ಮನವಿ - STOLEN GOLD JEWELLERY MORTGAGE

ಕದ್ದ ಚಿನ್ನಾಭರಣಗಳನ್ನು ಗಿರವಿದಾರರಲ್ಲಿ ಅಡವಿಡುವುದರಿಂದ ಎದುರಾಗಬಹುದಾದ ಪರಿಣಾಮ ಹಾಗೂ ಕ್ರಿಮಿನಲ್ ಪ್ರಕ್ರಿಯೆ ಕಾರ್ಯವಿಧಾನ ಸಂಬಂಧ ಅಗತ್ಯ ಮಾರ್ಗಸೂಚಿ ರಚಿಸುವಂತೆ ಹೈಕೋರ್ಟ್ ಮನವಿ ಮಾಡಿದೆ.

high court
ಹೈಕೋರ್ಟ್ (ETV Bharat)
author img

By ETV Bharat Karnataka Team

Published : 19 hours ago

ಬೆಂಗಳೂರು: ಕದ್ದ ಚಿನ್ನಾಭರಣಗಳನ್ನು ಗಿರವಿದಾರರಲ್ಲಿ (ಫೈನಾನ್ಷಿಯಲ್ ಕಂಪೆನಿ) ಅಡವಿಡುವುದರಿಂದ ಎದುರಾಗಬಹುದಾದ ಪರಿಣಾಮಗಳು ಮತ್ತು ಈ ಸಂಬಂಧ ಕ್ರಿಮಿನಲ್ ಪ್ರಕ್ರಿಯೆ ಪ್ರಾರಂಭಿಸುವ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ಅಗತ್ಯ ಮಾರ್ಗಸೂಚಿಗಳನ್ನು ರಚಿಸುವಂತೆ ರಾಜ್ಯ ಕಾನೂನು ಆಯೋಗಕ್ಕೆ ಹೈಕೋರ್ಟ್ ಮನವಿ ಮಾಡಿದೆ.

ಕದ್ದ ಚಿನ್ನವನ್ನು ಗೋಲ್ಡ್ ಫೈನಾನ್ಸ್ ಕಂಪೆನಿಯಲ್ಲಿ ಅಡವಿಡುವ ಕುರಿತಂತೆ ಸಲ್ಲಿಕೆಯಾಗುತ್ತಿರುವ ಅರ್ಜಿಗಳು ಮತ್ತು ಕದ್ದ ಚಿನ್ನವನ್ನು ಅಡವಿಟ್ಟುಕೊಂಡ ಕುರಿತಂತೆ ನೋಟಿಸ್ ಜಾರಿ ಮಾಡಿದ್ದ ಬೇಗೂರು ಪೊಲೀಸರ ಕ್ರಮವನ್ನು ಪ್ರಶ್ನಿಸಿ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಕಂಪೆನಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಮನವಿ ಮಾಡಿದೆ.

''ಅಲ್ಲದೆ, ಕದ್ದ ಚಿನ್ನದ ಅಡಮಾನ ಇಡುವವರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ನಿಗಾ ಇಡಬೇಕು. ಅದರ ಮಾಲೀಕತ್ವವನ್ನು ಖಚಿತಪಡಿಸಿಕೊಳ್ಳಬೇಕು. ಅಡಮಾನ ಇಡುವುದಕ್ಕೆ ಬಂದ ವ್ಯಕ್ತಿಯ ಗುರುತು, ಕದ್ದ ಚಿನ್ನವನ್ನು ಅಡವಿಡುವುದರಿಂದ ಆಗುವ ಪರಿಣಾಮ ಹಾಗೂ ಅ ಸಂಬಂಧ ಕ್ರಿಮಿನಲ್ ವಿಚಾರಣೆ ನಡೆಸುವ ಸಂದರ್ಭದಲ್ಲಿ ಚಿನ್ನದೊಂದಿಗೆ ವ್ಯವಹರಿಸುವ ವಿಧಾನಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರಚನೆ ಮಾಡಬೇಕಾದ ಅಗತ್ಯವಿದೆ. ಹೀಗಾಗಿ, ರಾಜ್ಯ ಕಾನೂನು ಆಯೋಗ ಈ ವಿಷಯವನ್ನು ಪರಿಶೀಲಿಸಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಕೋರುತ್ತಿರುವುದಾಗಿ'' ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

''ಅರ್ಜಿದಾರ ಕಂಪೆನಿ ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ. ಆದರೆ, ಅವರು ಗಿರವಿದಾರರಾಗಿದ್ದು, ಈಗಾಗಲೇ ಅಡವಿಟ್ಟಿರುವ ಚಿನ್ನದ ಮೇಲೆ ತಮ್ಮ ಹಕ್ಕನ್ನು ಹೊಂದಿರಲಿದ್ದಾರೆ'' ಎಂಬುದಾಗಿ ಅರ್ಜಿದಾರರ ಪರ ವಕೀಲರ ವಾದವನ್ನು ತಳ್ಳಿ ಹಾಕಿರುವ ನ್ಯಾಯಪೀಠ, ''ಅರ್ಜಿದಾರರು ಗಿರವಿದಾರರಾಗಿದ್ದು, ಅಡವಿಟ್ಟಿರುವ ಒಡವೆಗಳ ಮೇಲೆ ಗಿರವಿ ಇಟ್ಟುಕೊಂಡಿರುವುದಕ್ಕೆ ಸೀಮಿತ ಹಕ್ಕನ್ನು ಮಾತ್ರ ಹೊಂದಿದ್ದಾರೆ. ಅದನ್ನು ಮೀರಿ ಇತರೆ ಹಕ್ಕುಗಳನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ, ಚಿನ್ನದ ನಿಜವಾದ ಮಾಲೀಕರಿಂದ ಕದ್ದ ನಂತರ ಚಿನ್ನದ ಹಣಕಾಸು ಕಂಪೆನಿಯಲ್ಲಿ ಅಡವಿಡಲಾಗುತ್ತದೆ ಎಂಬ ಕಾರಣಕ್ಕೆ ಚಿನ್ನದ ಮಾಲೀಕರು ಅದರ ಬಳಕೆಯಿಂದ ವಂಚಿತರಾಗಲು ಸಾಧ್ಯವಿಲ್ಲ'' ಎಂದಿತು.

''ಚಿನ್ನವನ್ನು ಅಡ ಇಟ್ಟುಕೊಂಡು ಸಾಲವನ್ನು ನೀಡುವ ಗೋಲ್ಡ್ ಫೈನಾನ್ಸ್ ಕಂಪೆನಿ ಚಿನ್ನ ಸ್ವೀಕರಿಸುವುದಕ್ಕೂ ಮುನ್ನ ಸರಿಯಾದ ಶ್ರದ್ಧೆಯಿಂದ ತನ್ನ ಕರ್ತವ್ಯವನ್ನು ನಿರ್ವಹಿಸಬೇಕು. ಈ ಪ್ರಕರಣದಲ್ಲಿ ಉದ್ದೇಶಿತ ಚಿನ್ನದ ಕುರಿತಂತೆ ಅರ್ಜಿದಾರ ಕಂಪೆನಿ ತನಿಖಾಧಿಕಾರಿಯೊಂದಿಗೆ ಸಂಪೂರ್ಣ ಸಹಕಾರ ನೀಡಬೇಕು. ಅಡಮಾನಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ದಾಖಲೆಗಳೊಂದಿಗೆ ವಿವರಗಳನ್ನು ನೀಡಬೇಕು. ತನಿಖಾಧಿಕಾರಿಗಳು ಚಿನ್ನದ ಮಾಲೀಕತ್ವ ಸೇರಿದಂತೆ ವಿವಿಧ ವಿಚಾರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ'' ಎಂದು ಪೀಠ ಹೇಳಿದೆ.

''ಅಲ್ಲದೆ, ಆ ಚಿನ್ನದ ತಪಾಸಣೆಗೆ ಅವಕಾಶ ನೀಡಬೇಕು. ಅಗತ್ಯವಿದ್ದಲ್ಲಿ ತನಿಖಾಧಿಕಾರಿ ರಸೀದಿಯನ್ನು ನ್ಯಾಯಾಲಯದಲ್ಲಿ ಠೇವಣಿ ಇಡಬಹುದು. ಈ ಚಿನ್ನವನ್ನು ಕಳವು ಮಾಡಲಾಗಿದೆ ಎಂಬ ತೀರ್ಮಾನಕ್ಕೆ ಬಂದ ಬಳಿಕ ಪೊಲೀಸ್ ಅಧಿಕಾರಿ ಚಿನ್ನವನ್ನು ತನ್ನ ವಶದಲ್ಲಿಟ್ಟುಕೊಳ್ಳುವುದಕ್ಕೆ ಅವಕಾಶವಿಲ್ಲ. ಆದರೆ, ಅದನ್ನು ವಶಪಡಿಸಿಕೊಂಡು ನ್ಯಾಯಾಲಯದಲ್ಲಿ ಠೇವಣಿ ಇಡಬೇಕು. ಆದರೆ, ತನಿಖೆ ಬಳಿಕ ಚಿನ್ನವನ್ನು ಯಾರ ಪರವಾಗಿ ಹಿಂದಿರುಗಿಸಬೇಕು ಎಂಬುದನ್ನು ನಿರ್ಧರಿಸಬೇಕಾಗಿರುವುದು ವಿಚಾರಣಾ ನ್ಯಾಯಾಲಯಕ್ಕೆ ಬಿಟ್ಟ ವಿಚಾರ'' ಎಂದು ಪೀಠ ತಿಳಿಸಿದೆ.

''ಜೊತೆಗೆ, ವಿಚಾರಣೆ ಬಳಿಕ ಚಿನ್ನ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ಪರಿಗಣಿಸುವ ಸಂದರ್ಭದಲ್ಲಿ ಇಲ್ಲವೇ, ನ್ಯಾಯಾಲಯ ಅದನ್ನು ಬಿಡುಗಡೆ ಮಾಡುವಾಗ ಅರ್ಜಿದಾರ ಕಂಪೆನಿಗೆ ನೋಟಿಸ್ ನೀಡಬೇಕಾಗುತ್ತದೆ ಮತ್ತು ಬಿಡುಗಡೆಗೆ ಆದೇಶಿಸುವ ಮೊದಲು ಅರ್ಜಿದಾರರ ವಿಚಾರಣೆಗೆ ಅವಕಾಶ ನೀಡಬೇಕಾಗುತ್ತದೆ'' ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಇದನ್ನೂ ಓದಿ: ಪದವಿ ಪ್ರಮಾಣಪತ್ರವಿದ್ದರೆ 3 ವರ್ಷದ ಎಲ್‌ಎಲ್‌ಬಿ ಕೋರ್ಸ್​ಗೆ ಪಿಯುಸಿ ಪ್ರಮಾಣಪತ್ರ ಅಗತ್ಯವಿಲ್ಲ: ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.