ETV Bharat / state

ದಾವಣಗೆರೆ: ಯುವಕನ ಬರ್ಬರ ಹತ್ಯೆ - Davanagere Murder - DAVANAGERE MURDER

ದುಷ್ಕರ್ಮಿಗಳು ಯುವಕನೋರ್ವನನ್ನು ಬರ್ಬರವಾಗಿ ಕೊಲೆಗೈದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಯುವಕನ ಹತ್ಯೆ ನಡೆದ ಸ್ಥಳ
ಯುವಕನ ಹತ್ಯೆ ನಡೆದ ಸ್ಥಳ (ETV Bharat)
author img

By ETV Bharat Karnataka Team

Published : May 16, 2024, 12:50 PM IST

ದಾವಣಗೆರೆ: ದಾವಣಗೆರೆ ತಾಲೂಕಿನ ಓಬಜ್ಜಿಹಳ್ಳಿ ಹೊರವಲಯದಲ್ಲಿ ದುಷ್ಕರ್ಮಿಗಳು ಯುವಕನೋರ್ವನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ದಾವಣಗೆರೆ ನಗರದ ಬೂದಾಳ್ ನಿವಾಸಿ ಸುದೀಪ್ (24) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಎಸ್​ಪಿ ಉಮಾ ಪ್ರಶಾಂತ್, ಗ್ರಾಮಾಂತರ ಠಾಣೆ ಸಿಪಿಐ ಕಿರಣ್​ ಕುಮಾರ್​ ಹಾಗು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಬಂಧನಕ್ಕೆ ಶೋಧ ನಡೆಯುತ್ತಿದೆ.

'ಈಟಿವಿ ಭಾರತ್‌'ಗೆ ಪ್ರತಿಕ್ರಿಯಿಸಿದ ಸಿಪಿಐ ಕಿರಣ್​ ಕುಮಾರ್, "ನಿನ್ನೆ ರಾತ್ರಿ ಓಬಜ್ಜಿಹಳ್ಳಿ ಹೊರವಲಯದಲ್ಲಿ ಈ ಘಟನೆ ನಡೆದಿದೆ. ದಾವಣಗೆರೆಯ ಸುದೀಪ್ ಎಂಬಾತನ​ ಶವ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು: ಮನೆಯ ಬಾತ್‌ರೂಂನಲ್ಲಿ ದ್ವಿತೀಯ ಪಿಯು ಓದುತ್ತಿದ್ದ ವಿದ್ಯಾರ್ಥಿನಿಯ ಶವ ಪತ್ತೆ - Girl Found Dead

ETV Bharat Logo

Copyright © 2025 Ushodaya Enterprises Pvt. Ltd., All Rights Reserved.