ಹುಬ್ಬಳ್ಳಿ: ಸಾರ್ವಜನಿಕ ಸ್ಥಳದಲ್ಲಿ ಯುವತಿಯೊಂದಿಗೆ ಅಸಭ್ಯತೆ ತೋರಿದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಇತ್ತೀಚೆಗೆ ಹುಬ್ಬಳ್ಳಿಯ ಬೈರಿದೇವರಕೊಪ್ಪ ಹತ್ತಿರ ಕಾರಿನಲ್ಲಿ ಹೋಗುತ್ತಿದ್ದ ಯುವತಿಯೊಬ್ಬಳಿಗೆ ಬೈಕ್ನಲ್ಲಿ ಬರುತ್ತಿದ್ದ ವ್ಯಕ್ತಿಯು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಮಕದುಮ್ ಹುಸೇನ್ ನಡುವಿನಮನಿ ಎಂಬ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಹುಬ್ಬಳ್ಳಿಯ ಯುವತಿ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಕಾರಿನಲ್ಲಿ ತೆರಳುತ್ತಿದ್ದಳು. ಈ ಸಂದರ್ಭದಲ್ಲಿ ಬೈರಿದೇವರಕೊಪ್ಪದ ಸನಾ ಕಾಲೇಜು ಬಳಿಯಲ್ಲಿ ಸ್ಕೂಟಿಯಲ್ಲಿ ಬರುತ್ತಿದ್ದ ಯುವಕನೊಬ್ಬ ಕಾರನ್ನು ಓವರ್ ಟೆಕ್ ಮಾಡಿ ವಾಹನದಲ್ಲಿದ್ದ ಯುವತಿಗೆ ಚುಡಾಯಿಸಿದ್ದಾನೆ. ಹೀಗಾಗಿ, ಯುವತಿ ತನ್ನ ಮೊಬೈಲ್ ಕ್ಯಾಮರಾದಿಂದ ಯುವಕನ ವಿಡಿಯೋ ಮಾಡಲು ಪ್ರಾರಂಭಿಸಿದ್ದಾರೆ. ಅಷ್ಟರಲ್ಲಿ ಮತ್ತೆ ಪುನಃ ಯುವಕ ಏಕಾಏಕಿ ಕಾರನ್ನು ಓವರ್ ಟೆಕ್ ಮಾಡಿ ಯುವತಿಗೆ ಅಶ್ಲೀಲ ಪದಗಳಿಂದ ನಿಂದಿಸಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು.
ಆಗ ಯುವತಿ ಸ್ಕೂಟಿ ನಿಲ್ಲಿಸಲು ಹೇಳಿದ್ದಾಳೆ. ಆದರೂ ಕೂಡ ಯುವಕ, 'ಯುವತಿಗೆ ಮುಂದೆ ಕಮಿಷನರ್ ಆಫೀಸ್ ಇದೆ, ಅಲ್ಲಿ ಬಾ' ಎಂದು ಸ್ಕೂಟಿ ನಿಲ್ಲಿಸದೇ ಹೋಗಿದ್ದಾನೆ. ಇದೀಗ ಯುವತಿಯ ಜೊತೆಗೆ ಅಸಭ್ಯ ವರ್ತನೆ ತೋರಿದ ಯುವಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಯುವತಿ ದೂರಿನ ಆಧಾರದ ಮೇಲೆ ಎಪಿಎಂಸಿ ಠಾಣೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಓದಿ: ಜನ್ಮದಿನ ಆಚರಣೆ ವೇಳೆ ಗಾಳಿಯಲ್ಲಿ ಗುಂಡು: ರಿಯಲ್ ಎಸ್ಟೇಟ್ ಉದ್ಯಮಿ ಬಂಧನ - Air fire at Birthday Celebration