ETV Bharat / state

ಪತಿಯೊಂದಿಗೆ ಜಗಳವಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ದಾಖಲು - ಅತ್ಯಾಚಾರ

ಮಹಿಳೆ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.

ಪತಿಯೊಂದಿಗೆ ಜಗಳವಾಡುತ್ತಿದ್ದ ಪತ್ನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

author img

By ETV Bharat Karnataka Team

Published : Feb 11, 2024, 4:21 PM IST

ಗಂಗಾವತಿ: ಪ್ರೀತಿಸಿ ವಿವಾಹವಾಗಿದ್ದ ದಂಪತಿ ಮಧ್ಯೆ ಏರ್ಪಟ್ಟ ಕಲಹವನ್ನೇ ಲಾಭ ಮಾಡಿಕೊಂಡ ಮದ್ಯದ ನಶೆಯಲ್ಲಿದ್ದ ಕಿರಾತಕರ ಗುಂಪೊಂದು ಮಹಿಳೆಯ ಪತಿಯನ್ನು ಥಳಿಸಿದ್ದಾರೆ. ಇವರ ಪೈಕಿ ಓರ್ವ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

6 ಜನರ ಪೈಕಿ ಲಿಂಗರಾಜ ಎಂಬ ಯುವಕ ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪದಡಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಿಕ್ಕ ಐವರು ಮೌಲಹುಸೇನ್, ಶಿವಕುಮಾರಸ್ವಾಮಿ, ಪ್ರಶಾಂತ, ಮಹೇಶ ಮತ್ತು ಮಾದೇಶ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ಘಟನೆ ವಿವರ: ಬೆಂಗಳೂರಿನ ಗುರುಗುಂಟಾ ಪಾಳ್ಯದ 21 ವರ್ಷ ವಯಸ್ಸಿನ ಯುವತಿ, ಗಂಗಾವತಿ ತಾಲ್ಲೂಕಿನ ಗ್ರಾಮವೊಂದರ ಯುವಕನನ್ನು ಪ್ರೀತಿಸಿ ಮೂರು ತಿಂಗಳ ಹಿಂದೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಮಧ್ಯೆ ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಿದ್ದು, ಪತಿ ತನ್ನ ಪತ್ನಿಯನ್ನು ಬಿಟ್ಟು ಹೋಗಿದ್ದಾನೆ. ಪತಿಯನ್ನು ಹುಡುಕಿಕೊಂಡು ಪತ್ನಿ ಶುಕ್ರವಾರ ತಡರಾತ್ರಿ ಗಂಗಾವತಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ. ಇತ್ತ ಪತಿಯೂ ಬಸ್ ನಿಲ್ದಾಣಕ್ಕೆ ಬಂದಿದ್ದಾನೆ.

ಬಳಿಕ ಪತ್ನಿ ತನ್ನ ಪತಿಯೊಂದಿಗೆ ಜಗಳಕ್ಕೆ ಇಳಿದಿದ್ದಾಳೆ. ಇದನ್ನು ಗಮನಿಸಿದ ಆರು ಜನರ ಗುಂಪು ಅಲ್ಲಿಗೆ ಆಗಮಿಸಿದೆ. ಹುಡುಗಿಗೆ ಯುವಕ ಚುಡಾಯಿಸುತ್ತಿದ್ದಾನೆ ಎಂದು ಭಾವಿಸಿ ಆಕೆಯ ಪತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯುವತಿ, ಆತ ನನ್ನ ಗಂಡ ಎಂದು ಕೂಗಿ ಹೇಳಿದರೂ ಕೇಳಿಸಿಕೊಳ್ಳದ ಪಾನಮತ್ತ ಯುವಕರು, ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಗಾಬರಿಗೊಂಡ ಯುವತಿ, ತನ್ನ ರಕ್ಷಣೆಗಾಗಿ ಸಮೀಪದ ಪಾರ್ಕ್​ಗೆ ಓಡಿ ಹೋಗಿದ್ದಾಳೆ.

ಇದನ್ನು ಗಮನಿಸಿದ ಲಿಂಗಾರಜು ಎಂಬಾತ ಆಕೆಯನ್ನು ಹಿಂಬಾಲಿಸಿಕೊಂಡು ಪಾರ್ಕಿಗೆ ನುಗ್ಗಿ ಆಕೆ ಮೇಲೆರಗಿ ಅತ್ಯಾಚಾರ ಮಾಡಿದ್ದಾನೆ. ಅಷ್ಟೊತ್ತಿಗೆ ಹಲ್ಲೆಗೊಳಗಾದ ಪತಿಯು ಕೆಲ ಸ್ಥಳೀಯರು ಹಾಗೂ ಆಟೋ ರಿಕ್ಷಾ ಚಾಲಕರನ್ನು ಕರೆತರುವ ಹೊತ್ತಿಗೆ ಲಿಂಗರಾಜು ಅಲ್ಲಿಂದ ಪರಾರಿಯಾಗಿದ್ದಾನೆ. ಉಳಿದಂತೆ 5 ಜನ ತನ್ನ ಪತಿಯೊಂದಿಗೆ ಜಗಳವಾಡುವಾಗ ತನ್ನ ಮೈಕೈ ಮುಟ್ಟಿ ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ದಾಖಲಿಸಿದ್ದಾಳೆ.

ಇದನ್ನೂ ಓದಿ: ದಾವಣಗೆರೆ: ವೃದ್ಧೆ ಮೇಲೆ ಯುವಕನಿಂದ ಅತ್ಯಾಚಾರ; ಆರೋಪಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.