ETV Bharat / state

ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜೆ ಹೇಗೆ ನಡೆಯುತ್ತದೆ? - AYUDHA POOJA

ಶರನ್ನವರಾತ್ರಿಯ 9ನೇ ದಿನ ರಾಜವಂಶಸ್ಥರಾದ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜೆ ನಡೆಸಲಿದ್ದಾರೆ.

yaduveer-krishnadatta-chamaraja-wadiyar
ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜೆ ಹೇಗೆ ನಡೆಯುತ್ತದೆ ಗೊತ್ತೇ? (ETV Bharat)
author img

By ETV Bharat Karnataka Team

Published : Oct 10, 2024, 10:30 PM IST

ಮೈಸೂರು: ಶರನ್ನವರಾತ್ರಿಯ ಒಂಬತ್ತನೇ ದಿನ ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜೆಯನ್ನು ರಾಜವಂಶಸ್ಥರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ನಡೆಸಲಿದ್ದಾರೆ. ರಾಜ ಪರಂಪರೆಯಂತೆ ಶುಕ್ರವಾರ ಬೆಳಗ್ಗೆ ಯದುವೀರ್, ದುರ್ಗಾಷ್ಟಮಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುವರು.

ಬೆಳಗ್ಗೆ 6ಕ್ಕೆ ಚಾಮುಂಡಿ ತೊಟ್ಟಿಯಲ್ಲಿ ಚಂಡಿಕಾ ಹೋಮ ನಡೆಯಲಿದೆ. ಆ ವೇಳೆಗೆ ಆನೆ ಬಾಗಿಲಿಗೆ ಪಟ್ಟದ ಹಸು ಆಗಮನವಾಗುತ್ತದೆ. ಬೆಳಗ್ಗೆ 6.40ರಿಂದ 7.10ರ ಸಮಯದಲ್ಲಿ ಅರಮನೆ ಕಲ್ಯಾಣ ಮಂಟಪದಿಂದ ಆನೆ ಬಾಗಿಲಿನ ಮೂಲಕ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಅವುಗಳನ್ನು ಸ್ವಚ್ಛಗೊಳಿಸಿ 7.30ರಿಂದ 8 ಗಂಟೆಯವರೆಗೆ ಕಲ್ಯಾಣ ಮಂಟಪಕ್ಕೆ ತರಲಾಗುತ್ತದೆ.

ಬೆಳಗ್ಗೆ 9.05ಕ್ಕೆ ಚಂಡಿಕಾ ಹೋಮ, ಪೂರ್ಣಾಹುತಿ ಆದ ಬಳಿಕ ಮಧ್ಯಾಹ್ನ 12.20ರಿಂದ 12.45ರವರೆಗೆ ಕಲ್ಯಾಣ ಮಂಟಪದಲ್ಲಿ ಯದುವೀರ್‌ ಆಯುಧಗಳಿಗೆ ಪೂಜೆ ಸಲ್ಲಿಸುವರು. ಬಳಿಕ ಆನೆ ತೊಟ್ಟಿಯಲ್ಲಿ ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಆನೆ, ಪಲ್ಲಕ್ಕಿ ಹಾಗೂ ರಾಜರು ಬಳಸುವ ದುಬಾರಿ ಬೆಲೆಯ ಕಾರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಅಲ್ಲಿಗೆ ನವರಾತ್ರಿಯ ಒಂಭತ್ತನೇ ದಿನದ ಆಯುಧ ಪೂಜೆ ಕೊನೆಗೊಳ್ಳುತ್ತದೆ.

ಸಂಜೆ ರತ್ನಖಚಿತ ಸಿಂಹಾಸನದಲ್ಲಿ ಖಾಸಗಿ ದರ್ಬಾರ್‌ ನಡೆಸಿ, ಬಳಿಕ ಸಿಂಹಾಸನದಲ್ಲಿ ಜೋಡಿಸಲಾದ ಸಿಂಹದ ತಲೆಯನ್ನು ನಿಮಜ್ಜನ ಮಾಡುತ್ತಾರೆ. ಇದಾದ ನಂತರ ದಫ್ತಾರ್‌ ಪೂಜೆ, ಅಂಬಾವಿಲಾಸ ಪೂಜೆ ನಡೆಸಿದ ನಂತರ ದೇವರ ದರ್ಶನ ಪಡೆಯಲಿರುವ ಯದುವೀರ್, ನವರಾತ್ರಿ ಪೂಜೆ ಸಮಾಪನಗೊಳಿಸುತ್ತಾರೆ.

ಇದನ್ನೂ ಓದಿ: ಮೈಸೂರು ದಸರಾ: ಜಂಬೂಸವಾರಿ ಪುಷ್ಪಾರ್ಚನೆಯ ಕೊನೆಯ ರಿಹರ್ಸಲ್- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.