ಹಾವೇರಿ: ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಹಣದಿಂದ ಮಹಿಳೆಯೊಬ್ಬರು ಮನೆಗೆ ಹೊಸ ವಾಷಿಂಗ್ ಮಷಿನ್ ಖರೀದಿಸಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಬಾಳಂಬೀಡ ಗ್ರಾಮದ ಚಂಪಾವತಿ ಕರೆವ್ವನವರ ಎಂಬ ಗೃಹಿಣಿ ತಮ್ಮ ಮನೆಗೆ ಹೊಸ ವಾಷಿಂಗ್ ಮಷಿನ್ ಖರೀದಿಸಿದ್ದು, ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
'ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯಲ್ಲಿ ಒಂದಾದ ಗೃಹ ಲಕ್ಷ್ಮೀಯ 9ನೇ ಕಂತಿನ ಹಣ ಬಂದಿದೆ. ಈ ಖುಷಿಯಲ್ಲಿ ವಾಷಿಂಗ್ ಮಷಿನ್ ಖರೀದಿಸಿರುವುದಾಗಿ' ಮಹಿಳೆ ಚಂಪಾವತಿ ಹೇಳಿಕೊಂಡಿದ್ದಾರೆ. ಶ್ರಾವಣ ಮಾಸ ಪ್ರಾರಂಭವಾಗಿದ್ದು, ಅಕ್ಕಪಕ್ಕದ ಮನೆಯ ಮಹಿಳೆಯರನ್ನು ಕರೆದು ಅದಕ್ಕೆ ಪೂಜೆ ಕೂಡ ಸಲ್ಲಿಸಿದ್ದಾರೆ.
'ಹೊಸ ವಾಷಿಂಗ್ ಮಷಿನ್ ಕೆಲಸದ ಒತ್ತಡ ಕಡಿಮೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧನ್ಯವಾದಗಳನ್ನು ಅರ್ಪಿಸುವೆ' ಎಂದಿದ್ದಾರೆ.
ಇದನ್ನೂ ಓದಿ: ಇಂದಿನಿಂದಲೇ ಎರಡೂ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮೆ: ಲಕ್ಷ್ಮಿ ಹೆಬ್ಬಾಳ್ಕರ್ - Gruha Lakshmi Scheme