ETV Bharat / state

ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಬರಾಕ್ ಒಬಾಮಾ ಅವರನ್ನೇ ರಾಜ್ಯ ಸರ್ಕಾರ ಆಹ್ವಾನಿಸಿದ್ದೇಕೆ? - CENTENARY OF BELAGAVI SESSION

ಬೆಳಗಾವಿ ಕಾಂಗ್ರೆಸ್​ ಅಧಿವೇಶನದ ಶತಮಾನೋತ್ಸವ ಸಂಭ್ರಮಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ ಅವರನ್ನು ಆಹ್ವಾನಿಸಿರುವುದರ ಹಿಂದಿರುವ ಉದ್ದೇಶವೇನು? ಎಂಬುದರ ವಿಶೇಷ ವರದಿ.

Barack Obama and Gandhi statue
ಬರಾಕ್ ಒಬಾಮಾ ಹಾಗೂ ಗಾಂಧೀಜಿ ಪ್ರತಿಮೆ (ETV Bharat)
author img

By ETV Bharat Karnataka Team

Published : Nov 7, 2024, 12:24 PM IST

ಬೆಳಗಾವಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂಭ್ರಮಕ್ಕೆ ಬೆಳಗಾವಿ ಸಾಕ್ಷಿಯಾಗುತ್ತಿದೆ. ಈ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಲು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರನ್ನು ರಾಜ್ಯ ಸರ್ಕಾರ ಆಹ್ವಾನಿಸಿದೆ. ಒಬಾಮಾಗೂ ಗಾಂಧೀಜಿಗೂ ಏನು ನಂಟು? ಗಾಂಧೀಜಿ ಬಗ್ಗೆ ಒಬಾಮಾ ಅವರಿಗಿರುವ ಅಭಿಮಾನ ಎಂಥದ್ದು ಎಂಬುದನ್ನು ನೋಡೋಣ.

ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನಕ್ಕೆ ಇದೇ ಡಿ.26, 27ಕ್ಕೆ ನೂರು ವಸಂತ. ಈ ಐತಿಹಾಸಿಕ ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಶತಮಾನೋತ್ಸವದ ಹಿನ್ನೆಲೆಯಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಒಬಾಮಾ ಅವರಿಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಆಹ್ವಾನಿಸಿದ್ದಾರೆ. ಸದ್ಯ ಈ ವಿಚಾರ ತೀವ್ರ ಚರ್ಚೆಗೂ ಗ್ರಾಸವಾಗಿದೆ. ಒಬಾಮಾ ಅವರನ್ನು ಆಹ್ವಾನಿಸುತ್ತಿರುವುದಕ್ಕೆ ಬೆಳಗಾವಿ ಜನ ಕೂಡ ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.

ಹಿರಿಯ ನಾಟಕಕಾರ ಡಾ.ಡಿ.ಎಸ್‌.ಚೌಗುಲೆ (ETV Bharat)

ಒಬಾಮಾ ಗಾಂಧೀಜಿ ಅವರ ಬಹುದೊಡ್ಡ ಅನುಯಾಯಿ. ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡವರು. ಅಲ್ಲದೇ ತಮ್ಮ ಸೆನೆಟ್ ಕಚೇರಿಯಲ್ಲೂ ಗಾಂಧೀಜಿ ಭಾವಚಿತ್ರವನ್ನೂ ಹಾಕುವ ಮೂಲಕ ಅಭಿಮಾನ ಪ್ರದರ್ಶಿಸಿದ್ದರು. ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಹಾತ್ಮಾ ಗಾಂಧೀಜಿ ಕೇವಲ ಭಾರತದ ನಾಯಕನಲ್ಲ. ಇಡೀ ವಿಶ್ವದ ನಾಯಕ. ಗಾಂಧಿಯೇ ನಿಜವಾದ ಹೀರೋ. ಅವರೇ ನನಗೆ ಸ್ಫೂರ್ತಿಯ ಸೆಲೆ ಎಂದಿದ್ದರು.

ಕಳೆದ ಕೆಲವು ತಲೆಮಾರುಗಳಿಂದ ಇಡೀ ವಿಶ್ವಕ್ಕೆ ಸ್ಫೂರ್ತಿ ಕೊಟ್ಟ ವ್ಯಕ್ತಿ ಗಾಂಧಿ. ತಾವು ಸೇರಿ ಮಾರ್ಟಿನ್ ಲೂಥರ್ ಕಿಂಗ್ ಗಾಂಧಿಯಿಂದ ಪ್ರೇರಣೆ ಪಡೆದದ್ದನ್ನು ನೆನಪಿಸಿದ್ದರು. ಭಾರತದಲ್ಲಿ ಅಹಿಂಸಾತ್ಮಕ ಚಳವಳಿಯನ್ನು ಗಾಂಧೀಜಿ ರೂಪಿಸದಿದ್ದರೆ ಅಮೆರಿಕದಲ್ಲಿ ನಾಗರಿಕ ಹಕ್ಕುಗಳಿಗಾಗಿ ಶಾಂತಿಯುತ ಚಳವಳಿ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹಿಂಸೆಯಿಲ್ಲದೆ, ಧನಬಲವಿಲ್ಲದೆ, ಕೇವಲ ತಮ್ಮ ವ್ಯಕ್ತಿತ್ವ ಬಲ ಮತ್ತು ನೈತಿಕ ಮೌಲ್ಯಗಳನ್ನೇ ಅಸ್ತ್ರವಾಗಿಟ್ಟುಕೊಂಡು ಯಾರು ಬದಲಾವಣೆ ತರುವುದಕ್ಕೆ ಪ್ರಯತ್ನಿಸುತ್ತಾರೋ ಅಂಥವರ ಬಗ್ಗೆ ತಮಗೆ ಗೌರವವಿದೆ. ಅಂಥವರೊಂದಿಗೆ ಕುಳಿತು ಮಾತನಾಡುವುದಕ್ಕೆ ತಮಗಿಷ್ಟ ಎಂದು ಒಬಾಮಾ ಬಣ್ಣಿಸಿದ್ದು ಗಮನಿಸಬೇಕಾದ ಸಂಗತಿ.

'ಗಾಂಧಿ ವರ್ಸಸ್‌ ಗಾಂಧಿ' ನಾಟಕದ ಮೂಲಕ 80ರ ದಶಕದಲ್ಲೇ ಕನ್ನಡ ರಂಗಭೂಮಿಯ ಪ್ರಮುಖ ನಾಟಕಕಾರರಾಗಿ ಗುರುತಿಸಿಕೊಂಡಿರುವ ಡಾ.ಡಿ.ಎಸ್‌.ಚೌಗುಲೆ ಹಲವು ಮರಾಠಿ ನಾಟಕಗಳನ್ನು ಕನ್ನಡಕ್ಕೆ ತಂದವರು. ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, "ಮಹಾತ್ಮಾ ಗಾಂಧೀಜಿ ಅವರದ್ದು ಇಡೀ ವಿಶ್ವಕ್ಕೆ ನಂಟು ಹೊಂದಿರುವ ಮಹಾನ್ ವ್ಯಕ್ತಿತ್ವ. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಅಧ್ಯಯನ ಮಾಡುತ್ತಿದ್ದಾಗ ಆಶ್ರಮಗಳ ಪರಿಕಲ್ಪನೆ ಪ್ರಯೋಗಿಸಿದ್ದರು. ನೈತಿಕ ಮೌಲ್ಯಗಳನ್ನು ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಬೀಜ ಗಾಂಧೀಜಿಗೆ ಮೊಳಕೆಯೊಡೆದಿದ್ದು ಕೂಡ ಇಲ್ಲೇ. ಇನ್ನು ವರ್ಣದ ವಿಚಾರದಲ್ಲಿ ಆಫ್ರಿಕಾದಲ್ಲಿ ಗಾಂಧೀಜಿಗೆ ಅಪಮಾನ ಆಗುತ್ತದೆ. ನೀನು ಕರಿಯ ಎಂದು ಅಲ್ಲಿನ ಬಿಳಿಯರು ಅವರನ್ನು ನೂಕಿದಾಗ, ಗಾಂಧೀಜಿ ಅವರಲ್ಲಿದ್ದ ಪ್ರತಿಭಟನೆ ಕಿಚ್ಚು ಹೊರಹೊಮ್ಮುತ್ತದೆ. ಹಾಗಾಗಿ, ಆಫ್ರಿಕಾ ಮೂಲದಿಂದ ಬಂದು ಅಮೆರಿಕದ ಅಧ್ಯಕ್ಷರಾಗಿರುವ ಬರಾಕ್ ಒಬಾಮಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಚಳುವಳಿ ಮಾಡಿದ ಮಹಾತ್ಮಾ ಗಾಂಧೀಜಿಗೂ ಒಂದು ರೀತಿಯ ಸಂಬಂಧವಿದೆ" ಎಂದು ವಿವರಿಸಿದರು.

"ವಿಶ್ವ ನಾಯಕರಾಗಿದ್ದ ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಸೇರಿ ಅನೇಕರಿಗೆ ಗಾಂಧೀಜಿ ಮಾದರಿಯಾಗಿದ್ದರು. ಅದೇ ರೀತಿ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕಾ ದೇಶದ ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಕೂಡ ಗಾಂಧೀಜಿ ಅವರಿಂದ ತುಂಬಾ ಪ್ರೇರಿತರಾಗಿದ್ದರು. ಅವರ ಬಗ್ಗೆ ಅಧ್ಯಯನ ಮಾಡಿದ್ದರು. ಅಲ್ಲದೇ ವಿಶ್ವದ ಹಲವು ವೇದಿಕೆಗಳಲ್ಲಿ ಗಾಂಧೀಜಿ ಅವರಿಂದ ನಾನು ಸಾಕಷ್ಟು ಪ್ರೇರಿತನಾಗಿದ್ದೇನೆ ಎಂದು ಹೇಳಿಕೊಂಡಿದ್ದರು. ತಮ್ಮ ಅಧಿಕಾರಾವಧಿ ಮತ್ತು ನಂತರದಲ್ಲಿಯೂ ಗಾಂಧಿ ತತ್ವಗಳನ್ನು ಅವರು ಪಾಲಿಸುತ್ತಿದ್ದಾರೆ. ಅಮೆರಿಕ ಅಧ್ಯಕ್ಷರ ವಾಸಗೃಹ ವೈಟ್ ಹೌಸ್​ನಲ್ಲಿ ಭಾರತೀಯ ಹಬ್ಬಗಳನ್ನು ಆಚರಿಸುವ ಜೊತೆಗೆ ಗಾಂಧೀಜಿಯವರ ಆಲೋಚನೆಗಳನ್ನು ಅಳವಡಿಸಿಕೊಂಡಿರುವ ನಿದರ್ಶನ ಕಾಣಬಹುದಾಗಿದೆ. ಒಬಾಮಾ ಮೇಲೆ ದೊಡ್ಡ ಪ್ರಭಾವ ಬೀರಿರುವ ಮಹಾನ್ ವ್ಯಕ್ತಿತ್ವ ಗಾಂಧೀಜಿ ಅವರದ್ದು. ಹಾಗಾಗಿ, ಅವರನ್ನು ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಆಹ್ವಾನಿಸಿದ್ದು ಅತ್ಯಂತ ಸ್ತುತ್ಯಾರ್ಹ ಮತ್ತು ಸ್ವಾಗತಾರ್ಹ" ಎಂದರು.

"ಎಲ್ಲೆಡೆ ಹಿಂಸೆ, ಯುದ್ಧದ ಕಾರ್ಮೋಡ ಆವರಿಸಿದೆ. ರಷ್ಯಾ-ಉಕ್ರೇನ್, ಇಸ್ರೇಲ್-ಇರಾನ್ ಸೇರಿ ಮತ್ತಿತರ ರಾಷ್ಟ್ರಗಳು ಯುದ್ಧೋನ್ಮಾದದಲ್ಲಿ ಮುಳುಗಿವೆ. ಹಿಂಸೆ ತಾಂಡವವಾಡುತ್ತಿರುವ ಈ ಕಾಲಘಟ್ಟದಲ್ಲಿ ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧೀಜಿ ಬಹಳ ಮುಖ್ಯ ಎನಿಸುವುದಿಲ್ಲವೇ? ಹಾಗಾಗಿ, ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ವೇದಿಕೆಯಲ್ಲಿ ಬರಾಕ್ ಒಬಾಮಾ ಅವರ ಮೂಲಕ ಗಾಂಧಿ ಅವರ ಶಾಂತಿ ಮತ್ತು ಅಹಿಂಸೆ ಸಂದೇಶ ಇಡೀ ಜಗತ್ತಿಗೆ ಹೋಗಬೇಕಿದೆ. ಅದು ಕರ್ನಾಟಕದ, ಬೆಳಗಾವಿಯ ಕಾಂಗ್ರೆಸ್ ಅಧಿವೇಶನ ನಡೆದ, ಗಾಂಧೀಜಿ ನಡೆದಾಡಿದ ಪುಣ್ಯ ಸ್ಥಳದಿಂದ ಗಾಂಧೀಜಿಯವರ ಸಂದೇಶ ಎಲ್ಲೆಡೆ ಹರಡಿ, ಜಗತ್ತಿನೆಲ್ಲೆಡೆ ಶಾಂತಿ ನೆಲೆಸಲಿ" ಎಂದು ಡಾ.ಡಿ.ಎಸ್.ಚೌಗುಲೆ ಆಶಿಸಿದರು‌.

ಸಚಿವ ಹೆಚ್​.ಕೆ.ಪಾಟೀಲ್​ (ETV Bharat)

ಶತಮಾನೋತ್ಸವ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಎಚ್.ಕೆ.ಪಾಟೀಲ್​ ಮಾತನಾಡಿ, "ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭ ರಾಜ್ಯ, ರಾಷ್ಟ್ರಕ್ಕೆ ಸೀಮಿತ ಆಗದೇ, ಅಂತಾರಾಷ್ಟ್ರೀಯ ಮಹತ್ವ ಪಡೆಯಬೇಕು ಎನ್ನುವ ಉದ್ದೇಶ ಹೊಂದಿದ್ದೇವೆ. ಆ ನಿಟ್ಟಿನಲ್ಲಿ ಅಮೆರಿಕದಲ್ಲಿ ಎರಡು ಅವಧಿಗೆ ಸ್ಮರಣೀಯ ಸೇವೆ ಸಲ್ಲಿಸಿರುವ ಗಾಂಧೀಜಿಯವರ ಬಹು ದೊಡ್ಡ ಅನುಯಾಯಿ ಬರಾಕ್ ಒಬಾಮಾ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದೇವೆ. ನಾವೆಲ್ಲ ಭಾರತದ ನಾಯಕ ಗಾಂಧೀಜಿ ಎಂದು ಕರೆಯುತ್ತೇವೆ. ಆದರೆ, ಒಬಾಮಾ ಅವರು ಗಾಂಧೀಜಿ ಇಡೀ ವಿಶ್ವದ ನಾಯಕ ಎಂದು ಅಭಿಮಾನ ವ್ಯಕ್ತಪಡಿಸಿದ್ದರು" ಎಂದು ಹೇಳಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಜಂಟಿ ಅಧಿವೇಶನ; ರಾಜ್ಯ ಸರ್ಕಾರದಿಂದ ಬರಾಕ್​ ಒಬಾಮಗೆ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.