ETV Bharat / state

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪೊಲೀಸರ ಕೈ ಸೇರಿದ ಮರಣೋತ್ತರ ಪರೀಕ್ಷೆ ವರದಿ - RENUKASWAMY POST MORTEM REPORT - RENUKASWAMY POST MORTEM REPORT

ಕೊಲೆಗೀಡಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷಾ ವರದಿಯು ಹೊರಬಿದ್ದಿದೆ.

renukaswamy murder case
ರೇಣುಕಾಸ್ವಾಮಿ (ETV Bharat)
author img

By ETV Bharat Karnataka Team

Published : Jun 13, 2024, 1:28 PM IST

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಹತ್ಯೆಗೊಳಗಾಗಿದ್ದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷಾ ವರದಿಯು ಪೊಲೀಸರ ಕೈ ಸೇರಿದೆ. ಆತನನ್ನು ಬರ್ಬರವಾಗಿ ಕೊಲ್ಲಲಾಗಿದೆ ಎಂದು ವರದಿಯಲ್ಲಿ ನಮೂದಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೌರಿಂಗ್ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ವರದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ನೀಡಿದ್ದಾರೆ. ವರದಿಯಲ್ಲಿ ಮೃತದೇಹದ 15 ಕಡೆಗಳಲ್ಲಿ ಗಾಯಗಳಿದ್ದವು ಎಂದು ದೃಢಪಡಿಸಿದ್ದಾರೆ. ರೇಣುಕಾಸ್ವಾಮಿ ದೇಹದ ಯಾವ ಭಾಗದಲ್ಲಿ ರಕ್ತ ಬಂದಿತ್ತು? ಎಲ್ಲೆಲ್ಲಿ ಗಾಯಗಳಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಜೊತೆಗೆ, ಮರ್ಮಾಂಗದ ಮೇಲೆ ಹಲ್ಲೆ ಮಾಡಿರುವುದು ಗೊತ್ತಾಗಿದ್ದು, ಆ ಭಾಗದಲ್ಲಿ ರಕ್ತಸ್ರಾವವಾಗಿದೆ. ಮರ್ಮಾಂಗಕ್ಕೆ ಹೊಡೆದಿರೋದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಅಲ್ಲದೇ, ಹೊಟ್ಟೆ ಭಾಗದಲ್ಲಿಯೂ ರಕ್ತ ಸೋರಿಕೆಯಾಗಿದೆ. ತಲೆಗೂ ಬಲವಾದ ಪೆಟ್ಟು ಬಿದ್ದಿದೆ. ಆದರೆ, ರಕ್ತ ಸೋರಿಕೆಯಾಗಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.

ಕೈ ಮತ್ತು ಕಾಲುಗಳಲ್ಲಿ, ಬೆನ್ನು ಹಾಗೂ ಎದೆ ಭಾಗದಲ್ಲೂ ರಕ್ತ ಬಂದಿದೆ. ತೀವ್ರ ಹಲ್ಲೆಯಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟಿ ಸಾವಾಗಿದೆ. ಮರದ ಪೀಸ್, ಬೆಲ್ಟ್ ಬಳಸಿ ಹಲ್ಲೆ ಮಾಡಲಾಗಿದ್ದು, ದೇಹದಲ್ಲಿ 15 ಕಡೆ ಗಾಯಗಳಾಗಿವೆ. ಮೃತದೇಹದ ಮುಖ ಮತ್ತು ದವಡೆ ಭಾಗವನ್ನು ನಾಯಿಗಳು ಕಿತ್ತು ತಿಂದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ, ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ರಾಜ್ಯಾದ್ಯಂತ ಹೋರಾಟ: ವೀರಶೈವ ಮಹಾಸಭಾ - Veerashaiva Mahasabha

ETV Bharat Logo

Copyright © 2025 Ushodaya Enterprises Pvt. Ltd., All Rights Reserved.