ETV Bharat / state

"ರಾಜ್ಯಪಾಲರಿಗೆ ನಿಮ್ಮ ನಡೆ ಕಾನೂನುಬಾಹಿರ ಅಂತ ಮನವರಿಕೆ ಮಾಡುತ್ತೇವೆ": ಸಚಿವ ಜಿ.ಪರಮೇಶ್ವರ್ - G Parameshwara

ಬಿಜೆಪಿ ಶಾಸಕರು, ಸಂಸದರು, ರಾಜ್ಯಪಾಲರಿಗೆ ನಿಮ್ಮ ನಡೆ ಕಾನೂನುಬಾಹಿರ ಅಂತ ಮನವರಿಕೆ ಮಾಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್​ ಹೇಳಿದ್ದಾರೆ.​ ​

ಗೃಹ ಸಚಿವ ಜಿ. ಪರಮೇಶ್ವರ್
ಗೃಹ ಸಚಿವ ಜಿ. ಪರಮೇಶ್ವರ್ (ETV Bharat)
author img

By ETV Bharat Karnataka Team

Published : Aug 30, 2024, 2:17 PM IST

ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ (ETV Bharat)

ಬೆಂಗಳೂರು: "ಶಾಸಕರು, ಸಂಸದರು, ರಾಜ್ಯಪಾಲರಿಗೆ ನಿಮ್ಮ ನಡೆ ಕಾನೂನು ಬಾಹಿರ ಅಂತ ಮನವರಿಕೆ ಮಾಡಿ ಕೊಡುತ್ತೇವೆ" ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಸಚಿವರು, "ನಾಳೆ ರಾಜಭವನ ಚಲೋ ಮಾಡುತ್ತೇವೆ. ಹೈಕಮಾಂಡ್​ಗೂ ಇದರ ಬಗ್ಗೆ ತಿಳಿಸಿದ್ದೇವೆ. ನಾವು ರಾಜಭವನಕ್ಕೆ ಹೋಗುತ್ತೇವೆ, ಅಪಾಯಿಂಟ್‌ಮೆಂಟ್​ ಕೇಳುತ್ತೇವೆ. ಅವರು ಎಲ್ಲರಿಗೂ ಒಳಗೆ ಬಿಡಲ್ಲ. ರಾಜ್ಯಪಾಲರು ಶೋಕಾಸ್ ನೊಟೀಸ್​ ಕೊಟ್ಟಿರುವುದು ಕಾನೂನು ಬಾಹಿರ. ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ರಾಜ್ಯಪಾಲರಿಗೆ ಕಳುಹಿಸಿದ್ದೆವು. ಅವರು ಅದನ್ನು ಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ ‌ನಾವು ಕೋರ್ಟ್​ ಮೊರೆ ಹೋಗಿದ್ದೇವೆ. ಕೋರ್ಟ್​ನಲ್ಲಿ ವಿಚಾರಣೆ ನಡೀತಿದೆ. ಈಗ ಈ ಪ್ರಕರಣ ರಾಜಕೀಯಕರಣಗೊಂಡಿದೆ. ವಿಭಾಗವಾರು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಇದರ ಜತೆಗೆ ಕಾನೂನು ಸಮರವನ್ನೂ ಮುಂದುವರೆಸಿದ್ದೇವೆ. ಈಗ ರಾಜ್ಯಪಾಲರ ಭೇಟಿಯನ್ನೂ ನಾಳೆ ಮಾಡುತ್ತಿದ್ದೇವೆ. ಇದ್ಯಾವುದೂ ಆಗದಿದ್ದರೆ ರಾಷ್ಟ್ರಪತಿಗಳ ಭೇಟಿಯೂ ಮಾಡುತ್ತೇವೆ" ಎಂದರು.

"ಇವತ್ತು ಬಿಎಸ್​ವೈ ಅವರ ಪೋಕ್ಸೋ ಕೇಸ್​ ವಿಚಾರಣೆ ಇದೆ. ನಮ್ಮ ವಕೀಲರು ವಿಚಾರಣೆಗೆ ಹೋಗುತ್ತಾರೆ. ಏನಾಗುತ್ತೆ ಅಂತ ನೋಡೋಣ. ಕೋರ್ಟ್ ತೀರ್ಪು ಏನು ಬರುತ್ತೆ ಅಂತ ನೋಡಿಕೊಂಡು ಮುಂದಿನ ಕ್ರಮ" ಎಂದು ತಿಳಿಸಿದರು.

ಬಳಿಕ, ಡಿಕೆಶಿ ಪ್ರಕರಣದಲ್ಲಿ ಸರ್ಕಾರದ ತೀರ್ಮಾನಕ್ಕೆ ಹೈಕೋರ್ಟ್​ನಲ್ಲಿ ಗೆಲುವು ಸಿಕ್ಕ ವಿಚಾರವಾಗಿ ಪ್ರತಿಕ್ರಿಯಿಸಿ, "ಯತ್ನಾಳ್ ಅವರು ಸುಪ್ರೀಂಕೋರ್ಟ್​ಗೆ ಹೋದರೆ ಹೋಗಲಿ. ಅದು ಅವರ ತೀರ್ಮಾನ. ಕೇಂದ್ರ ಮತ್ತು ರಾಜ್ಯದ ಮಧ್ಯೆ ವ್ಯತ್ಯಾಸಗಳು ಇರುತ್ತವೆ. ಕೋರ್ಟ್ ಸುಪ್ರೀಂಕೋರ್ಟ್​ನಲ್ಲೇ ಪ್ರಶ್ನಿಸಿ ಅಂತ‌ ಹೇಳಿದೆ" ಎಂದರು.

ಮುಂದುವರೆದು, ಪರಮೇಶ್ವರ್​ಗೆ ಪ್ರಮೋಷನ್ ಸಿಕ್ಕಿದ್ರೆ ಖುಷಿ ಎಂಬ ಕೆ.ಎನ್​. ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಹೌದಾ.. ಅವರು ಹಾಗೆ ಹೇಳಿದಾರಾ?. ಹಾಗಾದರೆ ನನಗೂ ಖುಷಿ ಆಗುತ್ತೆ" ಎಂದರು.

ಇದನ್ನೂ ಓದಿ: ಸಿಎಂ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್: ಆ.31ಕ್ಕೆ ವಿಚಾರಣೆ ಮುಂದೂಡಿಕೆ, ಸಿದ್ದರಾಮಯ್ಯಗೆ ಮತ್ತೆರಡು ದಿನ ರಿಲೀಫ್ - Muda Scam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.