ETV Bharat / state

ಬೆಳಗಾವಿಯಲ್ಲಿ ಮಂಗಳಮುಖಿಯರಿಂದ ವಿಶೇಷ ಮತದಾನ ಜಾಗೃತಿ ಜಾಥಾ - Voting Awareness By Transgenders - VOTING AWARENESS BY TRANSGENDERS

ಬೆಳಗಾವಿಯಲ್ಲಿ ಮಂಗಳಮುಖಿಯರಿಂದ ಮತದಾನ ಜಾಗೃತಿ ಜಾಥಾ ನಡೆದಿದೆ.

Voting Awareness by Transgenders
ಮಂಗಳಮುಖಿಯರಿಂದ ಮತದಾನ ಜಾಗೃತಿ ಜಾಥಾ
author img

By ETV Bharat Karnataka Team

Published : Apr 4, 2024, 10:12 AM IST

Updated : Apr 4, 2024, 10:29 AM IST

ಮಂಗಳಮುಖಿಯರಿಂದ ಮತದಾನ ಜಾಗೃತಿ ಜಾಥಾ

ಬೆಳಗಾವಿ: ನಗರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಮಾಜಿ ದೇವದಾಸಿಯರಿಂದ ಹಮ್ಮಿಕೊಂಡಿದ್ದ ಮತದಾನದ ಕುರಿತು ವಿಶೇಷ ಜಾಗೃತಿ ಜಾಥಾ ಗಮನ ಸೆಳೆಯಿತು.

ನಗರದ ಚನ್ನಮ್ಮ ವೃತ್ತದಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿ.ಪಂ ಸಿಇಒ ರಾಹುಲ್ ಶಿಂಧೆ, ಮಂಗಳಮುಖಿಯರ ಮೂಲಕ ಹೆಚ್ಚಿನ‌ ಸಂಖ್ಯೆಯಲ್ಲಿ ಜನರು ಮತದಾನ ಮಾಡುವಂತೆ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದೇವೆ. ಗ್ರಾಮೀಣ ಪ್ರದೇಶದಲ್ಲೂ ಸಣ್ಣ ರ್‍ಯಾಲಿ, ಕ್ಯಾಂಡಲ್ ಮಾರ್ಚ್ ಮತ್ತು ಮನೆ ಮನೆಗೂ ತೆರಳಿ ಮತದಾನದ ಮಹತ್ವ ತಿಳಿಸುತ್ತಿದ್ದೇವೆ. ಅದೇ ರೀತಿ, 2019 ಮತ್ತು 2021ರ ಚುನಾವಣೆಗಳಲ್ಲಿ ಎಲ್ಲೆಲ್ಲಿ ಕಡಿಮೆ ಮತದಾನ ಆಗಿದೆಯೋ ಅಲ್ಲೆಲ್ಲಾ ಪರೀಕ್ಷಿಸಿ, 339 ಮತಗಟ್ಟೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತೇವೆ. ಬೀದಿ ಬದಿ ವ್ಯಾಪಾರಿಗಳಲ್ಲೂ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ದಾಖಲಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Voting Awareness by Transgenders
ಮಂಗಳಮುಖಿಯರಿಂದ ಮತದಾನ ಜಾಗೃತಿ ಜಾಥಾ

ಸ್ವೀಪ್ ರಾಯಭಾರಿ ಚಿನ್ನು ತಳವಾರ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಮತದಾನದ ಜಾಗೃತಿ ಮೂಡಿಸಲು ಸ್ವೀಪ್ ರಾಯಭಾರಿಯಾಗಿ ನೇಮಿಸಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ.‌ ಸಮಾಜದಲ್ಲಿ ತೀರಾ ಹಿಂದುಳಿದಿರುವ, ನಿರ್ಲಕ್ಷ್ಯಕ್ಕೆ ಒಳಗಾಗಿರುವ ನಮ್ಮ ಸಮುದಾಯವನ್ನು ಸರ್ಕಾರ ಮುಖ್ಯವೇದಿಕೆಗೆ ತರುತ್ತಿರುವುದು ಹರ್ಷ ತಂದಿದೆ. ಮೇ.6ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಈ ವೇಳೆ ಕೋರಿದರು.

ಇದನ್ನೂ ಓದಿ: BMW ಖರೀದಿಸಿದ ಕಾಟೇರ ನಿರ್ದೇಶಕ: ತರುಣ್ ಸುಧೀರ್ ಕಾರ್ ಡ್ರೈವ್ ಮಾಡಿದ ದರ್ಶನ್ - Tarun Sudhir BMW car

ಚನ್ನಮ್ಮ ವೃತ್ತದಿಂದ ಪ್ರಾರಂಭವಾದ ಮತದಾನದ ಜಾಗೃತಿ ಜಾಥಾ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನದ ರಸ್ತೆ ಮೂಲಕ ಶ್ರೀ ಕೃಷ್ಣದೇವರಾಯ ವೃತ್ತದಿಂದ ಮಹಾನಗರ ಪಾಲಿಕೆವರೆಗೆ ನಡೆಯಿತು. ಸುಮಾರು 300ಕ್ಕೂ ಹೆಚ್ಚು ಜನರಿಂದ ಜಾಥಾ ನಡೆಯಿತು. ಮೆರವಣಿಗೆ ಉದ್ದಕ್ಕೂ ಮತದಾನದ ಘೋಷಣೆ ಕೂಗಿ, ಜಾಗೃತಿ ಫಲಕಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಮತದಾನ ಮಾಡುವ ಕುರಿತು ಅರಿವು ಮೂಡಿಸಲಾಯಿತು.

ಇದನ್ನೂ ಓದಿ: ಈ ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ: ಪ್ರಹ್ಲಾದ್​ ಜೋಶಿ - Pralhad Joshi

ಈ ಸಂದರ್ಭ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಡಾ.ಎಂ ಕೃಷ್ಣರಾಜು, ಲೆಕ್ಕಾಧಿಕಾರಿ ಗಂಗಾ ಹಿರೇಮಠ, ಮಹಾನಗರ ಪಾಲಿಕೆ ಆಯುಕ್ತ ಲೊಕೇಶ ಪಿ.ಎನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್. ನಾಗರಾಜ್, ಯುವಸಬಲೀಕರಣ ಮತ್ತು ಕ್ರಿಡಾ ಇಲಾಖೆ ಉಪ ನಿರ್ದೇಶಕ ಬಿ. ಶ್ರೀನಿವಾಸ, ನಗರ ಸಿಡಿಪಿಓ ರಾಮಮುರ್ತಿ ಕೆ.ವಿ, ಗ್ರಾಮೀಣ ಸಿಡಿಪಿಓ ಸುಮಿತ್ರಾ ಡಿ.ಬಿ, ಮಹಿಳಾ ಅಭಿವೃದ್ಧಿ ನಿಗಮ ನಿರೀಕ್ಷಕಿ ರೂಪಾ ಪವಾರ ಸೇರಿ ಮತ್ತಿತರರು ಇದ್ದರು.

Last Updated : Apr 4, 2024, 10:29 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.