ETV Bharat / state

ಮಂಗಳೂರು: ಮತ ಚಲಾಯಿಸಲು ಬರುವವರು ಮೊಬೈಲ್ ತರುವಂತಿಲ್ಲ; ಚುನಾವಣಾಧಿಕಾರಿ - Mullai Mugilan

ಮತದಾನಕ್ಕೆ ಬರುವವರು ಮತಗಟ್ಟೆಗಳಿಗೆ ಮೊಬೈಲ್​ ತರದಂತೆ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಮಂಗಳೂರು: ಮತ ಚಲಾಯಿಸಲು ಬರುವವರು ಮೊಬೈಲ್ ತರುವಂತಿಲ್ಲ

author img

By ETV Bharat Karnataka Team

Published : Apr 24, 2024, 2:09 PM IST

ಮಂಗಳೂರು: ಮತ ಚಲಾಯಿಸಲು‌ ಮತಗಟ್ಟೆಗೆ ಬರುವ ಮತದಾರರು ಮೊಬೈಲ್ ಫೋನ್​ ಅನ್ನು ತರುವಂತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಏ.26 ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗದ ನಿಯಮದಂತೆ ಮತದಾರರು ಮತ ಚಲಾಯಿಸಲು ಬರುವಾಗ ತಮ್ಮ ಮೊಬೈಲ್ ಫೋನ್ ತರುವಂತಿಲ್ಲ. ಮೊಬೈಲ್ ನೊಂದಿಗೆ ಮತಗಟ್ಟೆಗೆ ತೆರಳಲು ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಮೊಬೈಲ್ ಮತದಾನ ಕೇಂದ್ರಕ್ಕೆ ತಂದರೆ ಅದನ್ನು ಸೇಫ್ ಡೆಪಾಸಿಟ್ ಮಾಡಲು ವ್ಯವಸ್ಥೆ ಮಾಡಲಾಗುವುದು. ಆದರೆ, ಅಲ್ಲಿ ಮತ್ತೊಂದು ಸರತಿ ಸಾಲು ಆಗುವ ಬದಲು ಮೊಬೈಲ್ ಅ​ನ್ನು ಮನೆಯಲ್ಲಿಯೆ ಬಿಟ್ಟು ಬರುವುದು ಉತ್ತಮ ಎಂದು ತಿಳಿಸಿದ್ದಾರೆ.

ಚುನಾವಣಾ ಬಹಿಷ್ಕಾರ ಇಲ್ಲ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಬಹಿಷ್ಕಾರ ಇಲ್ಲ. ಕೆಲವೆಡೆ ಚುನಾವಣಾ ಬಹಿಷ್ಕಾರಕ್ಕೆ ಕರೆ ಕೊಡಲಾಗಿತ್ತು. ಅಲ್ಲಿಗೆ ಹೋಗಿ ಪರಿಶೀಲಿಸಿದಾಗ ರಸ್ತೆ ಮೊದಲಾದ ಮೂಲ ಸೌಕರ್ಯಕ್ಕೆ ಆಗ್ರಹಿಸಿ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ಅವರನ್ನು ಮನವೊಲಿಸಿ ಚುನಾವಣಾ ಬಹಿಷ್ಕಾರಕ್ಕೆ ಕರೆ ವಾಪಸ್​ ಪಡೆಯಲಾಗಿದ್ದು, ಸದ್ಯ ಯಾವುದೇ ಚುನಾವಣಾ ಬಹಿಷ್ಕಾರ ಇಲ್ಲ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ 1,876 ಮತಗಟ್ಟೆಗಳಿದ್ದು, 524 ಸರ್ವಿಸ್ ವೋಟರ್​ಗಳು ಸೇರಿದಂತೆ ಒಟ್ಟು 18,18,127 ಮಂದಿ ಮತದಾರರಿದ್ದಾರೆ. 2,251 ಪ್ರಿಸೈಡಿಂಗ್ ಅಧಿಕಾರಿಗಳು, 2,251 ಎಪಿಆರ್‌ಓಗಳು, 4,502 ಪಿಓಗಳು, 2,251 ಗ್ರೂಪ್ ಡಿ ನೌಕರರು ಸೇರಿದಂತೆ ಒಟ್ಟಾರೆ 11,255 ಅಧಿಕಾರಿ, ಸಿಬ್ಬಂದಿ ಈ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

40 ಸಖಿ, ವಿಕಲಚೇತನರೇ ನಿರ್ವಹಿಸುವ 8, ವಿಷಯಾಧಾರಿತ 8, ಯುವ ಮತದಾರರ 8 ಹಾಗೂ ಪಾರಂಪರಿಕತೆ ಬಿಂಬಿಸುವ 8 ಬೂತ್​ಗಳು ಸೇರಿದಂತೆ ಒಟ್ಟಾರೆ 72 ಮಾದರಿ ಮತಗಟ್ಟೆಗಳನ್ನು ಈ ಬಾರಿ ನಿರ್ಮಿಸಲಾಗಿದೆ. ವಿಕಲಚೇತನರೇ ನಿರ್ವಹಿಸುವ ಮತಗಟ್ಟೆಗಳಿಗೆ ಪ್ರತ್ಯೇಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ, 1,876 ಮತಗಟ್ಟೆಗಳ ಪೈಕಿ 1,005 ಬೂತ್ ಗಳು ನಿರ್ದಿಷ್ಟ ಪ್ರದೇಶದಲ್ಲಿವೆ, 938 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ, 50 ಲೊಕೇಶನ್​ಗಳಲ್ಲಿ 132 ಪೋಲಿಂಗ್ ಸ್ಟೇಷನ್ ಬರಲಿದ್ದು, 200 ಮೈಕ್ರೋ ಅಬ್ಸರ್ವೆರ್​ಗಳನ್ನು ನೇಮಕ ಮಾಡಲಾಗಿದೆ, ಒಟ್ಟು 171 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

72 ಗಂಟೆಗಳ ಅವಧಿಯಲ್ಲಿ ಮಾದರಿ ನೀತಿ ಸಂಹಿತೆಗಾಗಿ 24 ವಿಡಿಯೋ ಸರ್ವೆಲೆನ್ಸ್ ತಂಡ, 72 ಫ್ಲೈಯಿಂಗ್ ಸ್ಕ್ವಾಡ್, 69 ಸ್ಟ್ಯಾಟಿಸ್ಟಿಕ್ಸ್ ಸರ್ವೆಲೆನ್ಸ್ ತಂಡ, 186 ಸೆಕ್ಟರ್ ಅಧಿಕಾರಿಗಳು, 8 ವಿಡಿಯೋ ವಿವಿಂಗ್ ಟೀಮ್, 8 ಮಾದರಿ ನೀತಿ ಸಂಹಿತೆ ತಂಡ, 8 ವೆಚ್ಚ ನಿರ್ವಹಣಾ ತಂಡ ಹಾಗೂ 8 ಸಹಾಯಕ ಖರ್ಚು ವೆಚ್ಚಗಳ ವೀಕ್ಷಕರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಚುನಾವಣಾ ಕಾರ್ಯಕ್ಕೆ 125% ಬ್ಯಾಲೆಟ್ ಯೂನಿಟ್, 125% 132% ವಿವಿಪ್ಯಾಟ್​ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಮನೆಮನೆ ಮತದಾನದಲ್ಲಿ 85 ವರ್ಷ ಮೇಲ್ಪಟ್ಟ 6,053 ಮತದಾರರ ಪೈಕಿ 5,878 ಮಂದಿ ಮತಚಲಾಯಿಸಿದ್ದರೆ. 1,975 ವಿಕಲಚೇತನ ಮತದಾರರ ಪೈಕಿ 1,929 ಮಂದಿ ಮತಚಲಾಯಿಸಿರುತ್ತಾರೆ. ಎವಿಇಎಸ್ ವರ್ಗದಲ್ಲಿ 15 ಇಲಾಖೆಗಳ ಅಗತ್ಯ ಸೇವೆಗಳು ಎಂದು ಗುರುತಿಸಲಾಗಿದ್ದು, ಆಯಾ ಇಲಾಖೆಗಳ ಅಧಿಕಾರಿಗಳು ಮತಚಲಾಯಿಸಲು ಪ್ರತಿ ಜಿಲ್ಲೆಯಲ್ಲಿ ಪೊಸ್ಟಲ್ ವೋಟಿಂಗ್ ಸೆಂಟರ್​ಗಳನ್ನು ಸ್ಥಾಪಿಸಲಾಗಿದೆ. ಈ ರೀತಿಯ ಒಟ್ಟು 182 ಮಂದಿ ಮತದಾರರ ಪೈಕಿ 100 ಮಂದಿ ಮತ ಚಲಾಯಿಸಿರುತ್ತಾರೆ ಎಂದರು.

ಏಪ್ರಿಲ್ 26ರ ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಈಗಾಗಲೇ ಮನೆ ಮನೆಗೆ ವೋಟರ್ ಸ್ಲಿಪ್​ ಅನ್ನು ವಿತರಿಸಲಾಗಿದೆ. ಅದರೊಂದಿಗೆ ಮತದಾರರು ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಮತದಾರರು ಎಪಿಕ್ ಕಾರ್ಡ್ ತೋರಿಸಿ ಮತದಾನ ಮಾಡಬಹುದು ಹಾಗೂ ಎಪಿಕ್ ಕಾರ್ಡ್ ಹೊರತುಪಡಿಸಿ ಕೇಂದ್ರ ಚುನಾವಣಾ ಆಯೋಗವು ನಿಗದಿಪಡಿಸಿರುವ ಆಧಾರ್ ಕಾರ್ಡ್, ಎಂಜಿ ನರೇಗಾ ಜಾಬ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಪಾಸ್ ಬುಕ್, ಅಂಚೆ ವಿಮೆ, ಚಾಲನ ಪರವಾನಗಿ, ಪಾನ್ ಕಾರ್ಡ್, ಆರ್​ಜಿಐ ನೀಡಿರುವ ಸ್ಮಾರ್ಟ್ ಕಾರ್ಡ್, ಪಾಸ್ಪೋರ್ಟ್, ಪಿಂಚಣಿ ದಾಖಲಾತಿ, ಕೇಂದ್ರ ಅಥವಾ ರಾಜ್ಯ ಸರ್ಕಾರದ ಸೇವಾ ಗುರುತಿನ ಚೀಟಿ, ಎಂಪಿ, ಎಂಎಲ್​ಎ, ಎಂಎಲ್ಸಿ ಅವರಿಗೆ ವಿತರಿಸಲಾಗಿರುವ ಅಧಿಕೃತ ಗುರುತಿನ ಚೀಟಿಗಳು, ಯುನಿಕ್ ಡಿಸಬೆಲಿಟಿ ಐಡಿ ಕಾರ್ಡ್ ತೋರಿಸಿ ಮತ ಚಲಾಯಿಸಬಹುದಾಗಿದೆ ಎಂದು ತಿಳಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರವಾರು ಮತಗಟ್ಟೆ ಕಾರ್ಯ ಪೂರ್ಣಗೊಂಡು ಡಿ ಮಾಸ್ಟರಿಂಗ್ ಕಾರ್ಯ ಪೂರ್ಣಗೊಂಡ ನಂತರ ಡಿ ಮಾಸ್ಟರಿಂಗ್ ಕೇಂದ್ರಗಳಿಂದ ಇವಿಎಂ, ವಿವಿಪ್ಯಾಟ್ ಮತ್ತು ದಾಖಲೆಗಳನ್ನು ಮತ ಎಣಿಕೆ ಕೇಂದ್ರವಾದ ಸುರತ್ಕಲ್​ನ ಎನ್ಐಟಿಕೆಯಲ್ಲಿ ದಾಸ್ತಾನು ಇರಿಸಲಾಗುವುದು ಎಂದು ಅವರು ಹೇಳಿದರು. ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪ್ರೊಬೇಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್, ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟ ಬೆಂಗಳೂರು ಕೇಂದ್ರ: ಮೋದಿ ಫ್ಯಾಕ್ಟರ್ Vs ಪಂಚ ಗ್ಯಾರಂಟಿ ಫೈಟ್! - Lok Sabha election 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.