ETV Bharat / state

ವಿಕ್ರಂ ಗೌಡ ಒಬ್ಬ ನಕ್ಸಲ್, ಅದು ನಕಲಿ ಎನ್​ಕೌಂಟರ್ ಅಲ್ಲ: ಗೃಹ ಸಚಿವ ಜಿ. ಪರಮೇಶ್ವರ್ - NAXAL ENCOUNTER CASE

ಆತನ ಚಟುವಟಿಕೆಗಳನ್ನು ಗಮನಿಸಿದ ನಂತರ ವಿಕ್ರಂ ಗೌಡನನ್ನು ಎನ್​ಕೌಂಟರ್​ ಮಾಡಲಾಗಿದೆ. ಅದು ನಕಲಿ ಎನ್​ಕೌಂಟರ್​ ಅಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.

Vikram Gowda and HOME MINISTER G PARAMESHWAR
ವಿಕ್ರಂ ಗೌಡ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ (ETV Bharat)
author img

By ETV Bharat Karnataka Team

Published : Nov 21, 2024, 12:36 PM IST

Updated : Nov 21, 2024, 1:35 PM IST

ಬೆಂಗಳೂರು: "ವಿಕ್ರಂ ಗೌಡ ಒಬ್ಬ ನಕ್ಸಲ್. ನಮ್ಮಲ್ಲಿ ನಕ್ಸಲ್ ನಿಗ್ರಹ ಪಡೆ ಇದೆ. ಇದು ನಕಲಿ ಎನ್​ಕೌಂಟರ್ ಅಲ್ಲ. 20 ವರ್ಷಗಳಿಂದ ಆತನ ಚಟುವಟಿಕೆ‌ಗಳನ್ನು ಗಮನಿಸಿದ್ದಾರೆ. 60ಕ್ಕೂ ಹೆಚ್ಚು ಕೇಸ್​ಗಳು ಆತನ ಮೇಲಿವೆ. ಕಾನೂನುಬಾಹಿರ ಮಷಿನ್ ಗನ್ ಕ್ಯಾರಿ ಮಾಡುತ್ತಿದ್ದ. ಅದಕ್ಕಾಗಿ ಈ ಘಟನೆ ನಡೆದಿದೆ" ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಕ್ರಂ ಗೌಡ ಅವರದ್ದು ನಕಲಿ ಎನ್​ಕೌಂಟರ್ ಎಂಬ ಟೀಕೆಗೆ ಪ್ರತಿಕ್ರಿಯಿಸಿ, "ನ್ಯಾಯಯುತ ಪ್ರತಿಭಟನೆಗೆ ಅವಕಾಶವಿದೆ. ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಕೈಜೋಡಿಸಿ. ಪಾವಗಡದಲ್ಲೂ ನಕ್ಸಲರು ಜನರನ್ನು ಕೊಂದಿದ್ದರು. ಆಗಲೂ ನಾವು ಮನವಿ ಮಾಡಿಕೊಂಡೆವು. ನೂರು ಜನ ಶಸ್ತ್ರ ತ್ಯಜಿಸಿ ಶರಣಾದರು" ಎಂದರು.

ಗೃಹ ಸಚಿವ ಜಿ. ಪರಮೇಶ್ವರ್ (ETV Bharat)

ಮಹಾರಾಷ್ಟ್ರದಲ್ಲಿ ಗೆಲ್ಲುತ್ತೇವೆ: ಮಹಾರಾಷ್ಟ್ರ ಎಕ್ಸಿಟ್ ಪೋಲ್ ಕುರಿತು ಮಾತನಾಡಿ, "ಕೆಲವರು ಮಹಾ ಅಘಾಡಿಗೆ 162 ಸೀಟು ಕೊಟ್ಟಿದ್ದಾರೆ. ಕೆಲವರು ಮಹಾಯುತಿಗೆ ಹೆಚ್ಚು ಸೀಟು ಕೊಟ್ಟಿದ್ದಾರೆ. ಯಾವುದನ್ನು ನಿಖರವಾಗಿ ಹೇಳಲಾಗಲ್ಲ. ಅಲ್ಲಿ ಆಂಬ್ಯುಲೆನ್ಸ್ ಖರೀದಿಯಲ್ಲಿ 8,000 ಕೋಟಿ ರೂ. ಅಕ್ರಮ ಆರೋಪ ಇದೆ. ಈ ಬಗ್ಗೆ ವರದಿಯಾಗಿದೆ. ಅಂಬೇಡ್ಕರ್ ಪ್ರತಿಮೆ ಮಾಡುತ್ತೇವೆ ಅಂದ್ರು, 2015ರಲ್ಲಿ ಶಂಕು ಸ್ಥಾಪನೆ ಮಾಡಿದ್ರು. ಆದರೆ ಅದನ್ನು ಇದುವರೆಗೆ ಮಾಡಿಲ್ಲ ಎಂಬ ಅಸಮಾಧಾನ ಇದೆ. ಮಹಾರಾಷ್ಟ್ರಕ್ಕೆ ಬಂದ ಕಂಪನಿಯನ್ನು ಗುಜರಾತ್​ಗೆ ಕಳುಹಿಸಿದ್ರು ಎಂಬ ಬೇಸರವಿದೆ. ಮತ್ತೊಂದು ಕಂಪನಿಯೂ ಗುಜರಾತ್​ಗೆ ಹೋಗಿದೆ. ಕೇಂದ್ರದ ಮೇಲೆ ಯುವಕರಿಗೆ ಸಿಟ್ಟಿದೆ. ಸಾಲಮನ್ನಾ ಸೇರಿ ರೈತರಿಗೆ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ. ವಿಪರೀತ ಭ್ರಷ್ಟಾಚಾರ ಅಲ್ಲಿದೆ ಎಂಬ ಆರೋಪವಿದೆ. ಇದರ ಅಧಾರದಲ್ಲಿ ನಾವು ಗೆಲ್ಲುತ್ತೇವೆಂಬ ವಿಶ್ವಾಸವಿದೆ" ಎಂದು ಹೇಳಿದರು.

ರಾಜ್ಯದ ಬೈ ಎಲೆಕ್ಷನ್ ಎಕ್ಸಿಟ್ ಪೋಲ್ ವಿಚಾರವಾಗಿ ಮಾತನಾಡಿ, "ನಾವು ಮೂರೂ ಕ್ಷೇತ್ರಗಳನ್ನು ಗೆಲ್ಲಬೇಕು ಅಂತಿದ್ದೇವೆ. ಆ ವಾತಾವರಣ ನಮ್ಮ ರಾಜ್ಯದಲ್ಲಿದೆ. ಹಿಂದೆ ಬೊಮ್ಮಾಯಿ 36 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಈಗ 10 ಸಾವಿರಕ್ಕೆ ಬಂದಿದ್ದಾರೆ ಅಂತಿದೆ. ಅಷ್ಟು ಕಡಿಮೆ ಅಂದ್ರೆ ನೆಗೆಟಿವ್ ಇದೆ ಅಂತ ತಾನೇ. ಆ ಸೀಟನ್ನು ನಾವು ಗೆಲ್ಲಬೇಕು. ಮೂರು ಸೀಟ್​ಗಳನ್ನೂ ನಾವು ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಪಿಎಲ್ ಕಾರ್ಡ್ ರದ್ದು ಬಗ್ಗೆ ಪ್ರತಿಕ್ರಿಯಿಸಿ, "ಕೇಂದ್ರ ಸರ್ಕಾರ 5.8 ಕೋಟಿ ಕಾರ್ಡ್ ರದ್ದು ಮಾಡಿದೆ. ಬಿಜೆಪಿಯವರು ಯಾವ ನೈತಿಕತೆ ಬಗ್ಗೆ ಮಾತನಾಡುತ್ತಿದ್ದಾರೆ. ಮೊದಲು ಕೇಂದ್ರದ ಬಗ್ಗೆ ಮಾತನಾಡಲಿ. ಕಾನೂನು‌ಬಾಹಿರವಾಗಿ ಕಾರ್ಡ್ ಕೊಡಬೇಕಾ? ಸರ್ಕಾರಿ ನೌಕರರಿಗೆ ಕಾರ್ಡ್ ಕೊಡಬೇಕಾ? ಆದಾಯ ತೆರಿಗೆ ಕಟ್ಟುವವರಿಗೆ ಕೊಡಬೇಕಾ? ಈ ಮಾನದಂಡವನ್ನು ನಾವು ಮಾಡಿದ್ದಲ್ಲ‌. ಕೇಂದ್ರ ಸರ್ಕಾರವೇ ಮಾನದಂಡ ಮಾಡಿರೋದು. ಅದರ ಚೌಕಟ್ಟಿನಲ್ಲೇ ರದ್ದು ಮಾಡಿದ್ದೇವೆ‌, ತಪ್ಪಾಗಿದ್ರೆ ಅದನ್ನು ಸರಿಪಡಿಸುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ: ನಕ್ಸಲ್ ವಿಕ್ರಂ ಗೌಡ ಕೊಲೆ ನಕಲಿ ಎನ್ಕೌಂಟರ್; ನ್ಯಾಯಾಂಗ ತನಿಖೆಗೆ ನಕ್ಸಲ್ ಚಳವಳಿಯಿಂದ ಹೊರಬಂದವರ ಆಗ್ರಹ

Last Updated : Nov 21, 2024, 1:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.