ವಿಜಯನಗರ: ಪ್ರಾಜೆಕ್ಟ್ ವರ್ಕ್ ಮಾಡಿದರು ಫಲಿತಾಂಶದಲ್ಲಿ ಫೇಲ್ ಹಾಗೂ ಗೈರು ಎಂದು ಬಂದಿರುವುದಕ್ಕೆ ಹೊಸಪೇಟೆಯ ಶ್ರೀ ಶಂಕರ್ ಆನಂದಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 6ನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳು ರಸ್ತೆಗೆ ಇಳಿದು ಪ್ರತಿಭಟನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಹೀಗಂತಾರೆ: "ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು ಕೊನೆಯ ವರ್ಷದ ಫಲಿತಾಂಶ ಮುಖ್ಯ ಅಡಿಪಾಯ. ಆದರೆ ಫಲಿತಾಂಶವೇ ಫೇಲ್, ಗೈರು ಎಂದು ಅಂತ ಬಂದರೆ ಭವಿಷ್ಯ ಹೇಗೆ. ಮನೆಯಲ್ಲಿ 'ನೀವು ಇಷ್ಟೆಲ್ಲಾ ಓದಿದ್ದೀರಿ, ಕಾಲೇಜನವರನ್ನು ಕೇಳಕ್ಕಾಗಲ್ವ' ಎಂದು ಹೇಳಿಯೇ ಹೇಳುತ್ತಾರೆ. ಈ ಬಗ್ಗೆ ನಾವು ಕೇಳಲು ಶುರು ಮಾಡಿ 20 ದಿನವಾಗಿದೆ. ಆದರೆ ಪ್ರಾಂಶುಪಾಲರು ನಮಗೆ ಪ್ರತಿಕ್ರಿಯಿಸುತ್ತಿಲ್ಲ. ಸಮಸ್ಯೆ ಆಗಿರುವುದೇ ಪ್ರಾಂಶುಪಾಲರ ಲಾಗಿನ್ ಅಲ್ಲಿ ಅಂಕ ನೀಡದೇ ಇರುವುದರಿಂದ. ಆದರೆ ಪ್ರಾಶುಂಪಾಲರು ನನ್ನಿಂದ ಸಮಸ್ಯೆ ಆಗಿಲ್ಲ ಎಂದು ಹೇಳುತ್ತಾರೆ. ವಿಶ್ವವಿದ್ಯಾನಿಲಯಕ್ಕೆ ಹೋದರೆ ನಮ್ಮಿಂದ ತೊಂದರೆಯಾಗಿಲ್ಲ ಎಂದು ಅವರು ಹೇಳುತ್ತಾರೆ. ನಾವು ಯಾರನ್ನೂ ಅಂತ ಕೇಳೋಣ. ನಮ್ಮ ಪ್ರಾಜೆಕ್ಟ್ ವರ್ಕ್ಗೆ ಹೆಚ್ಒಡಿ ಒಂದು ಅಂಕ ನೀಡಬೇಕು, ಹಾಗೇ, ಪ್ರಾಂಶುಪಾಲರು ಒಂದು ಅಂಕ ನೀಡಬೇಕು. ಹೆಚ್ಒಡಿ ಲಾಗಿನ್ ಅಲ್ಲಿ ನಮ್ಮ ಅಂಕ ಬಂದಿದೆ. ಆದರೆ ಪ್ರಿನ್ಸಿಪಾಲ್ ನಮಗೆ ಅಂಕ ನೀಡಿಲ್ಲ. ಈಗ ಅವರೇ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಅವರೇ ತೆಗೆದುಕೊಳ್ಳದಿದ್ದರೆ ನಾವು ಯಾರ ಹತ್ತಿರ ಹೋಗುವುದು ಎಂದು ಪ್ರಶ್ನಿಸಿದ್ದಾರೆ.
ಪ್ರಿನ್ಸಿಪಾಲ್ ಸ್ಪಷ್ಟನೆ: ಬಿಎ 6ನೇ ಸೆಮಿಸ್ಟರ್ನ ಫಲಿತಾಂಶ ಬಂದು 1 ತಿಂಗಳು ಆಗಿದೆ. ಅದರಲ್ಲಿ ನಮ್ಮ ಕಾಲೇಜಿನ ಸುಮಾರು 103 ವಿದ್ಯಾರ್ಥಿಗಳ ಪ್ರಾಜೆಕ್ಟ್ ಅಂಕ ಹೆಚ್ಒಡಿ ಲಾಗಿನ್ ಇಂದ ಆಗಿದೆ, ಪ್ರಾಂಶುಪಾಲರ ಲಾಗಿನ್ ಇಂದ ಆಗಲಿಲ್ಲ ಎಂಬ ದೂರಿದೆ. ಪ್ರಾಂಶುಪಾಲರ ಲಾಗಿನ್ ಇಂದ ಆಗಬೇಕಾದರೆ ಅವರ ಲಾಗಿನ್ ಅಲ್ಲಿ ವಿದ್ಯಾರ್ಥಿಗಳ ನಂಬರ್ ತೋರಿಸಬೇಕು. ಹಾಗಿದ್ದಾಗ ಅಂಕ ನೀಡಲು ಸಾಧ್ಯ. ಕೆಲವೊಂದು ಆಗಿಲ್ಲ. ಅವುಗಳೆನ್ನಲ್ಲ ಪರಿಷ್ಕರಣೆ ಮಾಡಿ ನಮ್ಮ ಹಂತ ಅಥವಾ ವಿಶ್ವವಿದ್ಯಾಲಯ ಹಂತದಲ್ಲಿ ಮಾಡಲು ಬರುವಂತದ್ದಲ್ಲ. ವಿಶ್ವವಿದ್ಯಾಲಯದಿಂದ ನಾವು ಮಾಹಿತಿ ಪಡೆದಾಗ ಅವರು ನೀವು ಇದನ್ನು ಟಿಕೆಟ್ ರೈಸ್ ಮಾಡಿ ಎಂದು ಹೇಳಿದ್ದಾರೆ. ಅದಾಗಿ 20 ದಿನವಾಗಿದೆ. ಅಲ್ಲದೇ ಅದು ವಿಶ್ವವಿದ್ಯಾಲಯದ ಲಾಗಿನ್ಗೆ ಬಂದು, ಮುಂದೆ ಅದು ರಿಜಿಸ್ಟರ್ ಲಾಗಿನ್ಗೆ ಬರುತ್ತದೆ. ಅಲ್ಲಿಂದ ಮುಂದೆ ಅದು ಬೆಂಗಳೂರಿಗೆ ಹೋಗಬೇಕಾಗುತ್ತದೆ. ಈಗ ರಿಜಿಸ್ಟರ್ ಲಾಗಿನ್ ಅಲ್ಲಿ ಇದೆ. ಪ್ರತಿ ದಿನ ನಾವು ಯೂನಿವರ್ಸಿಟಿಯನ್ನು ಸಂಪರ್ಕ ಮಾಡುತ್ತಿದ್ದೇವೆ. ಅಲ್ಲಿಂದ ಆಗುತ್ತೆ, ಆಗುತ್ತೆ ಎಂಬ ಉತ್ತರ ಬರುತ್ತಿದೆ. ಆದರೆ ಮುಂದೆ ಹೋಗುತ್ತಿದೆ. ಇದು ನಮ್ಮ ಕೈಯಲ್ಲಿ ಇರುತ್ತಿದ್ದರೆ ನಾವು ಮಾಡುತ್ತಿದ್ದೆವು. ಈ ಮುಂದೆಯೇ ನಮ್ಮ ವಿದ್ಯಾರ್ಥಿಗಳಿಗೆ ಹೇಳಿದ್ದೆವು, ಆದರೆ ಅವರು ಅದನ್ನು ನೆಗ್ಲೆಟ್ ಮಾಡಿದ್ದಾರೆ. ಒಬ್ಬ ವಿದ್ಯಾರ್ಥಿಗೆ 4 ವರ್ಷದಿಂದ ಮಾರ್ಕ್ಕಾರ್ಡ್ ಬಂದಿಲ್ಲವೆಂದರೆ, ಆಗ ಬಂದು ಕೇಳಬೇಕು ತಾನೇ ಅವರು. ಒಬ್ಬರೂ ಬಂದು ಕೇಳಿಲ್ಲ. ಈಗ ಬಂದು ಕೇಳಿದ್ದನ್ನು ತಪ್ಪು ಎಂದು ಹೇಳುತ್ತಿಲ್ಲ. ಇನ್ನು ನಾವು ಆ ತಪ್ಪನ್ನು ಸರಿಪಡಿಸಬೇಕಾಗಿದೆ ಎಂದು ಕಾಲೇಜಿನ ಪ್ರಾಶುಂಪಾಲ ಡಾ. ನಾರಾಯಣ ಹೆಬ್ಬೂರ್ ಹೇಳಿದ್ದಾರೆ.
ಇದನ್ನೂ ಓದಿ: ಹಿಂಗಾರಿನಲ್ಲಿ 1,58,087 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ, ಒಂದು ವಾರದಲ್ಲಿ ಪರಿಹಾರ: ಸಚಿವ ಕೃಷ್ಣ ಬೈರೇಗೌಡ