ETV Bharat / state

ಬಳ್ಳಾರಿ ಜೈಲಿನಲ್ಲಿ ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್​ - BALLARI JAIL

ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಂಡ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಅವ​ರನ್ನು ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಬಳ್ಳಾರಿ ಜೈಲಿನಲ್ಲಿ ಇಂದು ಭೇಟಿಯಾದರು.

ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್​
ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್​ (ETV Bharat)
author img

By ETV Bharat Karnataka Team

Published : Oct 18, 2024, 7:55 PM IST

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಗರದ ಸೆಂಟ್ರಲ್​ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ಸೇರಿದಂತೆ ಐವರು ಇಂದು ಭೇಟಿ ಮಾಡಿದರು. ನಂತರ ಸಂದರ್ಶಕರ ಕೊಠಡಿಯಲ್ಲಿ ಅರ್ಧಗಂಟೆ ಚರ್ಚಿಸಿದರು.

ಹೈಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಹಾಕಿರುವ ಕುರಿತು ವಿಜಯಲಕ್ಷ್ಮೀ ದರ್ಶನ್‌ಗೆ ಮಾಹಿತಿ ನೀಡಿದರು. ಸೆಷನ್ ಕೋರ್ಟ್‌ನಲ್ಲಿ ಬೇಲ್ ತಿರಸ್ಕೃತಗೊಂಡ ಕಾರಣಗಳನ್ನು ಅವರು ವಿವರಿಸಿದ್ದಾರೆ ಎನ್ನಲಾಗಿದೆ. ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವ ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ಮೆಡಿಕಲ್ ಬೆಡ್, ದಿಂಬು ಪೂರೈಸಿರುವ ಮಾಹಿತಿಯನ್ನು ದರ್ಶನ್, ಪತ್ನಿಯೊಂದಿಗೆ ಹಂಚಿಕೊಂಡಿದ್ದಾರೆ.

ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್​ (ETV Bharat)

ಹೈಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಸಿರುವ ದರ್ಶನ್ ಪರ ವಕೀಲರು, ಮೆಡಿಕಲ್ ರಿಪೋರ್ಟ್ ಪಡೆಯಲು ಮುಂದಾಗಿದ್ದಾರೆ. ದರ್ಶನ್ ಬೆನ್ನುನೋವು ಕುರಿತು ಬಿಮ್ಸ್ ನರರೋಗ ತಜ್ಞರು ಜೈಲಾಧಿಕಾರಿಗಳಿಗೆ ರಿಪೋರ್ಟ್ ಸಲ್ಲಿಸಿದ್ದಾರೆ.

ಈ ರಿಪೋರ್ಟ್ ಪಡೆಯಲು ದರ್ಶನ್ ಪರ ವಕೀಲರು ಆರ್​ಟಿಐ ಅಡಿ ಜೈಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನು ದರ್ಶನ್​ ಪರ ವಕೀಲರಿಗೆ ಇಮೇಲ್ ಮಾಡುವಂತೆ ಜೈಲಾಧಿಕಾರಿಗಳಿಗೆ ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ. ಇಂದು ಅಥವಾ ನಾಳೆಯೊಳಗೆ ರಿಪೋರ್ಟ್ ಅನ್ನು ಜೈಲಾಧಿಕಾರಿಗಳು ವಕೀಲ ಸುನೀಲ್​ ಅವರಿಗೆ ಇಮೇಲ್​ ಮೂಲಕ ಕಳುಹಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ಅ.22ರಂದು ಹೈಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.