ETV Bharat / state

ಹಣ ಕೊಟ್ಟು ವೋಟ್​ ಹಾಕಿಸಿಕೊಳ್ಳುವವರು, ಹಣ ಪಡೆದು ಮತ ಹಾಕುವವರು ಇರುತ್ತಾರೋ ಅಲ್ಲಿವರೆಗೆ ಈ ವ್ಯವಸ್ಥೆ ಬದಲಾಗಲ್ಲ: ಹೊರಟ್ಟಿ - Basavaraja Horatti

''ಎಲ್ಲಿವರೆಗೆ ಹಣ ಕೊಟ್ಟು ವೋಟ್​ ಹಾಕಿಸಿಕೊಳ್ಳುವವರು ಮತ್ತು ಹಣ ಪಡೆದು ಮತ ಹಾಕುವವರು ಇರುತ್ತಾರೋ ಅಲ್ಲಿವರೆಗೆ ಈ ವ್ಯವಸ್ಥೆ ಬದಲಾಗಲ್ಲ'' ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

author img

By ETV Bharat Karnataka Team

Published : Jul 26, 2024, 6:45 PM IST

Updated : Jul 26, 2024, 10:58 PM IST

Basavaraja Horatti  Speaker UT Khader  Joint Press Conference  Bengaluru
ಸಭಾಪತಿ ಬಸವರಾಜ ಹೊರಟ್ಟಿ (ETV Bharat)
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು. (ETV Bharat)

ಬೆಂಗಳೂರು: ''ಜನರ ತೆರಿಗೆ ಹಣದಲ್ಲಿ ನಾವು ಸದನ ನಡೆಸುತ್ತೇವೆ. ಅದಕ್ಕೆ ನಾವು ಬೆಲೆ ಕೊಡಬೇಕು'' ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಒಂದು ವರ್ಷಕ್ಕೆ 60 ದಿನ ಅಧಿವೇಶನ ನಡೆಯಬೇಕು. ಆದರೆ, ಇತ್ತೀಚೆಗೆ ಅಧಿವೇಶನದ ಬಗ್ಗೆ ಯಾರಿಗೂ ಇಂಟರೆಸ್ಟ್ ಇಲ್ಲ'' ಎಂದರು. ''ಎಲ್ಲಿವರೆಗೆ ಹಣ ಕೊಟ್ಟು ವೋಟ್​ ಹಾಕಿಸಿಕೊಳ್ಳುವವರು, ಹಣ ಪಡೆದು ಓಟು ಹಾಕುವವರು ಇರುತ್ತಾರೋ ಅಲ್ಲಿವರೆಗೆ ಈ ವ್ಯವಸ್ಥೆ ಬದಲಾಗಲ್ಲ. ಇದು ಕಟು ಸತ್ಯ. ಆದರೆ, ಶಾಸನ ಸಭೆಗಳು ಉತ್ತಮವಾಗಿ ನಡೆಯುವಂತಾಗಬೇಕು. ಆದರೆ, ಆ ರೀತಿ ಅದು ನಡೆಯಲಿಲ್ಲ, ನಡೆಯುತ್ತಿಲ್ಲ ಅನ್ನೋ ಬೇಸರ ನನಗಿದೆ'' ಎಂದು ಹೇಳಿದರು.

''ಹಿಂದೆ ಗ್ರಾಮ ಪಂಚಾಯ್ತಿ ವಿಚಾರವಾಗಿ ಕೇಳಿದ ಪ್ರಶ್ನೆಯೊಂದರ ಮಾಹಿತಿ ಕಲೆ ಹಾಕಲು 96 ಸಾವಿರ ಖರ್ಚಾಗಿತ್ತು. ಆದರೆ, ಅಂತಹ ವಿಚಾರಗಳ ಬಗ್ಗೆ ಸೂಕ್ತ ಚರ್ಚೆ ಆಗುತ್ತಿರಲಿಲ್ಲ. ಆಗಲ್ಲ ಅನ್ನೋದು ಬೇಸರದ ವಿಚಾರ'' ಎಂದರು. ''ಸದನಕ್ಕೆ 27 ಮಂದಿ ಹೊಸ ಸದಸ್ಯರು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ತರಬೇತಿ ಕೊಡುವ ಕೆಲಸ ಮಾಡುತ್ತೇವೆ. ಈ ಹಿಂದೆ ನಡೆಯುತ್ತಿದ್ದ ವಿಧಾನ ಪರಿಷತ್ ಕಲಾಪವನ್ನು ಈಗ ತರಲು ಸಾಧ್ಯವಾಗುತ್ತಿಲ್ಲ'' ಎಂದು ಹೇಳಿದರು.

ವಿಧಾನಸಭೆಯ ಸ್ಪೀಕರ್ ಪೀಠದ ಮುಂದೆ ಫೋಟೊ ತೆಗೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಸದನ ಪವಿತ್ರವಾದುದ್ದು, ಸದನ ನಡೆಯುತ್ತಿರುವಾಗ, ಪೀಠದಲ್ಲಿ ಸ್ಪೀಕರ್ ಇದ್ದಾಗ ಹೊರಗಿನವರು ಫೋಟೋ ತೆಗೆಯಬಾರದು. ಪೀಠಕ್ಕೆ ಅವಮಾನ ಮಾಡಿದಂತಾಗುತ್ತದೆ. ಪೀಠದ ಘನತೆ ಗೌರವವನ್ನು ಎತ್ತಿ ಹಿಡಿಯಬೇಕು. ಪೀಠದಲ್ಲಿ ಸಭಾಧ್ಯಕ್ಷರು ಇಲ್ಲದ ವೇಳೆ ಫೋಟೋ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ'' ಎಂದರು.

ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ''ಪ್ರತಿಪಕ್ಷಗಳ ಧರಣಿ ನಡುವೆ ಸರ್ಕಾರಿ ಕಲಾಪಗಳನ್ನು ನಡೆಸುವುದು ಅನಿವಾರ್ಯವಾಗಿತ್ತು. ಪ್ರತಿಪಕ್ಷಗಳ ಧರಣಿಯಿಂದಾಗಿ ನಿಗದಿತ ಅವಧಿಗಿಂತ ಒಂದು ದಿನ ಮುನ್ನವೇ ಅಧಿವೇಶನ ಮುಕ್ತಾಯಗೊಂಡಿದ್ದು ಬೇಸರ ತಂದಿದೆ'' ಎಂದು ಹೇಳಿದರು.

''ದೇಶದ ಯಾವುದೇ ವಿಧಾನಸಭೆಯಲ್ಲಿ ಅಳವಡಿಸದ ಎಐ ಕ್ಯಾಮೆರಾ ಅಳವಡಿಸಲಾಗಿದ್ದು, ಶಾಸಕರು ಎಷ್ಟು ಬಾರಿ ಬರುತ್ತಾರೆ. ಎಷ್ಟು ಬಾರಿ ಹೊರಗೆ ಹೋಗುತ್ತಾರೆ, ಎಷ್ಟು ಅವಧಿ ಇದ್ದರು ಎಂಬುದು ಗೊತ್ತಾಗಲಿದೆ'' ಎಂದರು.

ಚರ್ಚೆಗೆ ಅವಕಾಶ ನೀಡಲಿಲ್ಲ: ''ನಿಲುವಳಿ ಸೂಚನೆಯಡಿ ಚರ್ಚಿತವಾಗುವ ವಿಚಾರವು ಇತ್ತೀಚಿನ ಘಟನೆಯಾಗಿರಬೇಕು. ಸಾರ್ವಜನಿಕ ಮಹತ್ವ ಹೊಂದಿರಬೇಕು, ನ್ಯಾಯಾಂಗ ಅಥವಾ ಅರೆ ನ್ಯಾಯಾಂಗದಿಂದ ತನಿಖೆ ನಡೆಯುತ್ತಿರಬಾರದು. ಆದರೆ, ಮುಡಾ ಹಗರಣ ವಿಚಾರ ಈಗಾಗಲೇ ನ್ಯಾಯಾಂಗ ವಿಚಾರಣೆಗೆ ವಹಿಸಿರುವುದರಿಂದ ಕೆಟ್ಟ ಸಂಪ್ರದಾಯಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಚರ್ಚೆಗೆ ಅವಕಾಶ ನೀಡಲಿಲ್ಲ. ಸಭಾಧ್ಯಕ್ಷರು ನೀಡಿದ ರೂಲಿಂಗ್ ಸರಿಯಾಗಿದೆ ಎಂಬುದು ಮುಂದೆ ಪ್ರತಿಪಕ್ಷಗಳಿಗೂ ಮನವರಿಕೆಯಾಗಲಿದೆ'' ಎಂದು ತಿಳಿಸಿದರು.

''ಸದನದಲ್ಲಿ ಅಶಿಸ್ತಿನ ವರ್ತನೆ ಕಂಡಾಗ ಕಠಿಣ ಕ್ರಮ ಕೈಗೊಳ್ಳುವುದು ಕಷ್ಟವಲ್ಲ, ಕಲಾಪ ಸುಗಮವಾಗಿ ನಡೆಯಬೇಕೆಂಬ ಕಾರಣಕ್ಕೆ ಸಹಿಸಿಕೊಂಡು ಅಧಿವೇಶನ ನಡೆಸಲಾಯಿತು'' ಎಂದರು. ಹತ್ತು ದಿನ ಹೊಗಳಿ, ಒಂದು ದಿನ ತೆಗಳಿದರೆ ನಾನು ಏನು ಬೇಸರ ಮಾಡಿಕೊಳ್ಳುವುದಿಲ್ಲ'' ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಪ್ರಸ್ತಾಪಿಸಿರುವ ಬಿಜೆಪಿ ಹಗರಣಗಳನ್ನು ನಿತ್ಯ ಒಂದರಂತೆ ಬಯಲು ಮಾಡುತ್ತೇವೆ : ಡಿಸಿಎಂ ಡಿ ಕೆ ಶಿವಕುಮಾರ್ - DKS ON BJP SCAMS

Last Updated : Jul 26, 2024, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.