ETV Bharat / state

ಸರಿಯಾದ ದಾರಿಯಲ್ಲಿ ನಡೆಯುವುದೇ ಸಂತೋಷಕ್ಕೆ ರಹದಾರಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ - VICE PRESIDENT JAGDEEP DHANKAR

ಸತ್ಯದ ದಾರಿಯಲ್ಲಿ ಸಂಪತ್ತು, ಜ್ಞಾನವನ್ನು ಪಡೆಯುವುದು ನಮ್ಮ ಸಂಸ್ಕೃತಿಯ ಭಾಗವೆಂದು ಶಂಕರಾಚಾರ್ಯರಾದಿಯಾಗಿ ಮಹಾಪುರುಷರು ತೋರಿಸಿಕೊಟ್ಟಿದ್ದಾರೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.

ಉಪರಾಷ್ಟ್ರಪತಿ ಜಗದೀಪ್ ಧನಕರ್
ಉಪರಾಷ್ಟ್ರಪತಿ ಜಗದೀಪ್ ಧನಕರ್ (ETV Bharat)
author img

By ETV Bharat Karnataka Team

Published : Oct 26, 2024, 5:19 PM IST

ಬೆಂಗಳೂರು: ಸರಿಯಾದ ದಾರಿಯಲ್ಲಿ ನಡೆಯುವುದೇ ಸಂತೋಷಕ್ಕೆ ರಹದಾರಿಯಾಗಿದೆ. ಅದೇ ಧರ್ಮವಾಗಿದೆ. ಇದನ್ನೇ ನಮ್ಮ ನೆಲೆದಲ್ಲಿ ಹುಟ್ಟಿದ್ದ ಹಾಗೂ ಈಗಲೂ ಬದುಕುತ್ತಿರುವ ಸಾಧು - ಸಂತರು ಹಲವು ರೀತಿಯಲ್ಲಿ ನಮಗೆ ಹೇಳಿದ್ದಾರೆ. ಸತ್ಯದ ದಾರಿಯಲ್ಲಿ ಸಂಪತ್ತು, ಜ್ಞಾನವನ್ನು ಪಡೆಯುವುದು ನಮ್ಮ ಸಂಸ್ಕೃತಿಯ ಭಾಗವೆಂದು ಶಂಕರಾಚಾರ್ಯರಾದಿಯಾಗಿ ಮಹಾಪುರುಷರು ತೋರಿಸಿಕೊಟ್ಟಿದ್ದಾರೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ತಿಳಿಸಿದರು.

ನಗರದ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ಸಂಸ್ಥೆ ಆಯೋಜಿಸಿದ್ದ ಶೃಂಗೇರಿ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಜಿ ಅವರ ಸನ್ಯಾಸ ಸ್ವೀಕಾರವಾಗಿ 50 ವರ್ಷ ತುಂಬಿದ ಹಿನ್ನೆಲೆ ಕಲ್ಯಾಣ ಕಾರ್ಯಕ್ರಮ ಮತ್ತು ನಮಃ ಶಿವಾಯ ಸ್ತೋತ್ರ ಮಹಾಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮ ಮಾರ್ಗದಲ್ಲಿ ಜೀವನ ಸಾಗಿಸುವುದೇ ನಿಜವಾದ ಧರ್ಮವಾಗಿದೆ. ಸಮಾನತೆಯ ಧರ್ಮವಾಗಿದೆ. ಅದನ್ನು ತಿರುಚುವ ಮತ್ತು ದಾರಿ ತಪ್ಪಿಸುವ ಕೆಲಸಗಳನ್ನು ಸಹ ಶತಮಾನಗಳ ಕಾಲದಿಂದ ಹೊರಗಿನ ಶಕ್ತಿಗಳು ಮಾಡುತ್ತಾ ಬಂದವು. ಅದರೆ ನಮ್ಮ ಸನಾತನ ಧರ್ಮದಲ್ಲಿರುವ ಸತ್ಯ ಅದನ್ನು ಯಶಸ್ವಿಯಾಗಿ ಮೆಟ್ಟಿನಿಂತು ಮತ್ತೆ ವಿಶ್ವಗುರುವಾಗುವತ್ತ ಹೊರಟಿದೆ ಎಂದರು.

ಶಿವಾಯ ಸ್ತೋತ್ರ ಮಹಾಸಮರ್ಪಣಾ ಕಾರ್ಯಕ್ರಮ
ಶಿವಾಯ ಸ್ತೋತ್ರ ಮಹಾಸಮರ್ಪಣಾ ಕಾರ್ಯಕ್ರಮ (ETV Bharat)

ಶೃಂಗೇರಿ ಶಂಕರ ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಆದಿ ಶಂಕರಾಚಾರ್ಯರ ಶಿಷ್ಯ ಪರಂಪರೆ ಉತ್ಕೃಷ್ಠವಾಗಿದೆ. ಅದನ್ನು ಈಗಿನ ಜಗದ್ಗುರುಗಳಾದ ಭಾರತೀ ತೀರ್ಥ ಮಹಾಸ್ವಾಮಿಗಳು ಸಹ ಮುಂದುವರಿಸಿಕೊಂಡು ಬಂದಿದ್ದಾರೆ. ಇಂತಹ ಪರಮಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲು ಆವಕಾಶ ಸಿಕ್ಕಿದ್ದು ಮರೆಯಲಾಗದ ಅನುಭವವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಶಂಕರಾಚಾರ್ಯರು ತಪ್ಪಾದ ಮಾರ್ಗದಲ್ಲಿ ನಡೆಯುತ್ತಿದ್ದ ಅಂದಿನ ಸಾಮಾಜವನ್ನು ಮತ್ತು ಜನರನ್ನು ತಮ್ಮ ಪಾಂಡಿತ್ಯದ ಮೂಲಕ ವಾದ ಮಂಡಿಸುದರೊಂದಿಗೆ ಸನ್ಮಾರ್ಗಕ್ಕೆ ತಂದರು. ಹಲವು ಗ್ರಂಥಗಳನ್ನು ರಚಿಸಿ ಮುಂದಿನ ಪೀಳಿಗೆಗೆ ಸನ್ಮಾರ್ಗವನ್ನು ತೋರಿಸಿದರು. ದೇಶದ ನಾಲ್ಕು ದಿಕ್ಕುಗಳಲ್ಲಿ ಸುಮಾರು 2 ಸಾವಿರ ಕಿ.ಮೀ ದೂರದಲ್ಲಿ ಪೀಠಗಳನ್ನು ಸನಾತನ ಧರ್ಮದ ಉಳಿವಿಗಾಗಿ ಸ್ಥಾಪಿಸಿದರು ಎಂದು ಹೇಳಿದರು.

ಡಿಸಿಎಂ ಡಿ.ಕೆ. ಶಿವಕುಮಾರ್​ ಮಾತನಾಡಿದ ಅವರು, ನನಗೂ ಶೃಂಗೇರಿ ಮಠಕ್ಕೆ ಅವಿನಾಭಾವ ಸಂಬಂಧವಿದೆ. ಯಾವುದೇ ವಿವಾದಕ್ಕೀಡಾಗದೇ ಕೇವಲ ಧರ್ಮವನ್ನು ಸಾರುವ ಕೆಲಸವನ್ನು ಮಾಡುವ ಏಕೈಕ ಮಠ ಶಂಕರ ಮಠವಾಗಿದೆ. ನಮಃ ಶಿವಾಯ ಸ್ತೋತ್ರ ಮಹಾಸಮರ್ಪಣೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಭಾಜನವಾಯಿತು.

ಉಪರಾಷ್ಟ್ರಪತಿ ಜಗದೀಪ್ ಧನಕರ್ ಜೊತೆ ಡಿ.ಕೆ ಶಿವಕುಮಾರ್​
ಉಪರಾಷ್ಟ್ರಪತಿ ಜಗದೀಪ್ ಧನಕರ್ ಜೊತೆ ಡಿ.ಕೆ ಶಿವಕುಮಾರ್​ (ETV Bharat)

ಈ ವೇಳೆ ಕೇಂದ್ರ ಸಚಿವರುಗಳಾದ ಪ್ರಲ್ಹಾದ್​ ಜೋಶಿ, ವಿ. ಸೋಮಣ್ಣ, ಕೃಷ್ಣರಾಜನಗರ ಯಡಕತೊರೆ ಶ್ರಿ ಯೋಗಾನಂದೇಶ್ವರ ಸರಸ್ವತಿ ಮಠಾಧೀಶರಾದ ಶ್ರೀ ಶಂಕರ ಭಾರತಿ ಮಹಾಸ್ವಾಮಿಗಳು, ಶ್ರೀ ಬ್ರಹ್ಮಾನಂದ ಭಾರತಿ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.