ETV Bharat / state

ಬೆಂಗಳೂರು: ನೀತಿ ಸಂಹಿತೆ ಜಾರಿಯಾದ ಬಳಿಕ ಜಪ್ತಿ ಮಾಡಿದ ವಸ್ತುಗಳ ಮೌಲ್ಯ, ದಾಖಲಾದ ಎಫ್ಐಆರ್​ಗಳೆಷ್ಟು ಗೊತ್ತಾ? - Code of Conduct

ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ಬಳಿಕ ಜಪ್ತಿ ಮಾಡಿದ ವಸ್ತುಗಳ ಮೌಲ್ಯ, ದಾಖಲಾದ ಎಫ್ಐಆರ್ ಬಗ್ಗೆ ಮಾಹಿತಿ ಇಲ್ಲಿದೆ.

ಬೆಂಗಳೂರು
ಬೆಂಗಳೂರು
author img

By ETV Bharat Karnataka Team

Published : Mar 25, 2024, 10:47 PM IST

ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನಲೆ ನೀತಿ ಸಂಹಿತೆ ಜಾರಿಯಾದ ಬಳಿಕ ಒಟ್ಟು 2.83 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 240 ಎಫ್ಐಆರ್ ದಾಖಲಾಗಿವೆ. ಕೇಂದ್ರ ಚುನಾವಣಾ ಆಯೋಗದಿಂದ ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾದ ಬಳಿಕ ನೀತಿ ಸಂಹಿತಿ ಜಾರಿಯಾಗಿತ್ತು. ನಗರದಾದ್ಯಂತ ಪೊಲೀಸರು, ಫ್ಲೈಯಿಂಗ್ ಸ್ಕ್ವಾಡ್ ನಿಂದ ತಪಾಸಣೆ ಆರಂಭಿಸಲಾಗಿತ್ತು.

ಇಂದಿನವರೆಗೂ ಬೆಂಗಳೂರಿನಲ್ಲಿ ಒಟ್ಟು 67 ಲಕ್ಷ ನಗದು, 1.54 ಕೋಟಿ ಮೌಲ್ಯದ ಮದ್ಯ, 3.96 ಲಕ್ಷ ಮೌಲ್ಯದ ಮಾದಕ ಪದಾರ್ಥ, 37.50 ಲಕ್ಷ ಮೌಲ್ಯದ ಚಿನ್ನ/ಬೆಳ್ಳಿ, 6.05 ಲಕ್ಷ ಮೌಲ್ಯದ ಉಡುಗೊರೆ ವಸ್ತುಗಳು, 14.65 ಲಕ್ಷ ಮೌಲ್ಯದ ವಾಹನಗಳನ್ನ ಜಪ್ತಿ ಮಾಡಲಾಗಿದೆ. ಒಟ್ಟು 240 ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನವಲಗುಂದ - ರೋಣ ಚೆಕ್ ಪೋಸ್ಟ್​: ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವೆಡೆ ಮಾತ್ರ ನಗದು ಸಹಿತ ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. ಇತ್ತೀಚೆಗೆ ಗೋಕಾಕದಿಂದ ಕುರ್ತುಕೋಟಿಗೆ ಹೋಗುವ ಗೂಡ್ಸ್ ವಾಹನ (ಕೆಎ-63 ಎ 2739) ಪರಿಶೀಲಿಸಲಾಗಿದ್ದು, ಕುರ್ತಕೋಟಿ ಗ್ರಾಮದ ಪರಶುರಾಮ ದೇವಪ್ಪ ಕೊರವರ ಎಂಬವರ ಬಳಿ 73,670 ರೂ ನಗದು ಪತ್ತೆಯಾಗಿದೆ‌. ಯಾವುದೇ ದಾಖಲೆಗಳಿಲ್ಲದೇ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದರು.

ಬಳ್ಳಾರಿಯಲ್ಲಿ 629.94 ಲೀ ಮದ್ಯ, ₹26 ಲಕ್ಷ, ಗಾಂಜಾ ವಶ : ಸಂಡೂರು ತಾಲೂಕಿನಲ್ಲಿ ಮಾರ್ಚ್ 22 ಶುಕ್ರವಾರ ದಂದು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಅನಧಿಕೃತವಾಗಿ ಸಾಗಿಸುತ್ತಿದ್ದ 629.94 ಲೀಟರ್ (ರೂ.2,53,141 ಮೌಲ್ಯ) ಮದ್ಯ, 26 ಲಕ್ಷ ರೂ ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು. ಈವರೆಗೆ ಒಟ್ಟು 44 ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದರು.

ಬಾಗಲಕೋಟೆಯಲ್ಲಿ 345 ಲೀ ಮದ್ಯ ವಶ: ತೇರದಾಳ ಮತಕ್ಷೇತ್ರ ವ್ಯಾಪ್ತಿಯ ಮದಭಾವಿ ಗ್ರಾಮದ ಅರುಣ ಮಲ್ಲಪ್ಪ ಕಲ್ಲೋಳ್ಳಿ ಎಂಬುವರ ಮನೆಯಲ್ಲಿ ಅಕ್ರಮವಾಗಿ ಬಚ್ಚಿಟ್ಟ 1.50 ಲಕ್ಷ ರೂ. ಮೌಲ್ಯದ 345 ಲೀಟರ್ ಮದ್ಯ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಇಲ್ಲಿವರೆಗೆ ಒಟ್ಟು 37 ಅಬಕಾರಿ ಪ್ರಕರಣ ದಾಖಲಿಸಿ 35 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಇದನ್ನೂ ಓದಿ : ನೀತಿ ಸಂಹಿತೆ ನಡುವೆಯೂ ಭಾರತ್ ಅಕ್ಕಿ ವಿತರಣೆ ಆರೋಪ: ವಶಕ್ಕೆ ಪಡೆದ ಅಧಿಕಾರಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.