ETV Bharat / state

ವಾಲ್ಮೀಕಿ‌ ನಿಗಮ ಪ್ರಕರಣ: 12 ಆರೋಪಿಗಳ ವಿರುದ್ಧ 3,072 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ - Valmiki Corporation case - VALMIKI CORPORATION CASE

ವಾಲ್ಮೀಕಿ‌ ನಿಗಮ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ 3,072 ಪುಟಗಳ ಚಾರ್ಜ್​ಶೀಟ್ ಸಲ್ಲಿಸಲಾಗಿದೆ.

hargesheet submitted to court  chargesheet  Valmiki Corporation case  Bengaluru
ವಾಲ್ಮೀಕಿ‌ ನಿಗಮ ಪ್ರಕರಣ: 12 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ 3,072 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ (ETV Bharat)
author img

By ETV Bharat Karnataka Team

Published : Aug 5, 2024, 1:22 PM IST

ಬೆಂಗಳೂರು: ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ತನಿಖೆ ಮುಕ್ತಾಯಗೊಳಿಸಿರುವ ಎಸ್ಐಟಿ ಅಧಿಕಾರಿಗಳು, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.

ಇಂದು ನಗರದ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಎಸ್ಐಟಿ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದರು. ಸುಮಾರು 3,072 ಪುಟಗಳ ಈ ದೋಷಾರೋಪ ಪಟ್ಟಿಯಲ್ಲಿ 12 ಮಂದಿಯನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ.

ವಾಲ್ಮೀಕಿ ನಿಗಮದ ವ್ಯವಸ್ಥಾಪಕ‌ ನಿರ್ದೇಶಕ‌ ಪದ್ಮನಾಬ್, ಲೆಕ್ಕಾಧಿಕಾರಿ, ಪರಶುರಾಮ್, ಮಾಜಿ ಸಚಿವ ನಾಗೇಂದ್ರ ಆಪ್ತ ನೆಕ್ಕುಂಟಿ ನಾಗರಾಜ್, ಈತನ ಸಂಬಂಧಿ ನಾಗೇಶ್ವರ್ ರಾವ್, ಹೈದರಾಬಾದ್​ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್​ನ ಎಂಡಿ ಸತ್ಯನಾರಾಯಣವರ್ಮಾ, ಸತ್ಯನಾರಾಯಣ ಇಟರಿ, ಸಾಯಿತೇಜ ಸೇರಿದಂತೆ 12 ಜನರನ್ನು ಆರೋಪಿಗಳಾಗಿ ತೋರಿಸಲಾಗಿದೆ‌.‌ ಚಿನ್ನಾಭರಣ, ನಗದು ಸೇರಿ ಒಟ್ಟು 50 ಕೋಟಿ ಮೌಲ್ಯದ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತನಿಖಾಧಿಕಾರಿಯಾಗಿರುವ ಡಿವೈಎಸ್ಪಿ ಬಿ.ಎಸ್. ಶ್ರೀನಿವಾಸ್ ರಾಜ್ ಚಾರ್ಜ್​ಶೀಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: PSI ಸಾವು ಪ್ರಕರಣ ಸಿಐಡಿ ತನಿಖೆಗೆ ನೀಡಿದ್ದೇವೆ, ಅವರ ಪತ್ನಿಗೆ ಸರ್ಕಾರಿ ಕೆಲಸ ಕೊಡಿಸಲು ತೀರ್ಮಾನ: ಸಚಿವ ಜಿ.ಪರಮೇಶ್ವರ್ - PSI death case to CID

ETV Bharat Logo

Copyright © 2024 Ushodaya Enterprises Pvt. Ltd., All Rights Reserved.