ETV Bharat / state

ಕಾಂಗ್ರೆಸ್​ನವರು ಎಷ್ಟು ಜನರಿಗೆ ಕಿವಿಯಲ್ಲಿ ಹೂ ಇಡುತ್ತಾರೆ: ವಿ ಸೋಮಣ್ಣ ತಿರುಗೇಟು - Union Minister V Somanna - UNION MINISTER V SOMANNA

ಕೇಂದ್ರ ಸಚಿವ ವಿ. ಸೋಮಣ್ಣ ಅವರು ಕಾಂಗ್ರೆಸ್​ ಸರ್ಕಾರದಿಂದ ಬಿಜೆಪಿ ಸರ್ಕಾರದ ವೇಳೆಯಲ್ಲಿನ ಕೋವಿಡ್​ ಹಗರಣದ ಕುರಿತು ತನಿಖೆ ನಡೆಸಲು ಮುಂದಾಗಿರುವ ಬಗ್ಗೆ ಮಾತನಾಡಿದ್ದಾರೆ. ಈಗ ಕೋವಿಡ್​ ತನಿಖೆ ಅವಶ್ಯಕತೆ ಇದೆಯೇ?.ಮುಡಾ ಹಗರಣ ರಾಜ್ಯದಲ್ಲಿ ಕುದಿಯುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

union-minister-v-somanna
ಕೇಂದ್ರ ಸಚಿವ ವಿ ಸೋಮಣ್ಣ (ETV Bharat)
author img

By ETV Bharat Karnataka Team

Published : Sep 3, 2024, 7:11 PM IST

ರಾಯಚೂರು : ಕಾಂಗ್ರೆಸ್​ನವರು ಬರೀ ಹುಲಿ ಬಂತೂ ಹುಲಿ, ಪೆಪ್ಪರ್​ ಮೆಂಟು, ಪೆಪ್ಪರ್​ ಮೆಂಟು ಅಂತಾ ಎಷ್ಟು ಜನರ ಕಿವಿಗೆ ಹೂ ಇಡುವುದನ್ನು ಮಾಡುತ್ತಾರೆ? ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಪ್ರಶ್ನಿಸಿದ್ದಾರೆ.

ರಾಯಚೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹಗರಣ ಬಗ್ಗೆ ಕಾಂಗ್ರೆಸ್ ಹೋರಾಟದ ಕುರಿತು ಮಾತನಾಡಿದರು. ಕೋವಿಡ್ ತನಿಖೆ ಅವಶ್ಯಕತೆ ಇದೆಯೇ?, ಮುಡಾ ಹಗರಣ ರಾಜ್ಯದಲ್ಲಿ ಕುದಿಯುತ್ತಿದೆ ಎಂದು ವ್ಯಂಗ್ಯವಾಡಿದರು. ಮುಡಾ ಹಗರಣದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇಬೇಕು. ಭಾರತೀಯ ಸಂಸ್ಕೃತಿಯಲ್ಲಿ ಒಂದು ಮಾತು ಇದೆ. ತುಂಬಾ ದಿನ ಎಲ್ಲರಿಗೂ ಮೋಸ ಮಾಡಲು ಆಗಲ್ಲ. ನಾನು ಮೈಸೂರು ಉಸ್ತುವಾರಿ ಮಂತ್ರಿಯಾಗಿದ್ದೆ. 7,900 ಸೈಟ್​ಗಳನ್ನ ಎರಡೂವರೆ ವರ್ಷದಲ್ಲಿ ತಯಾರು ಮಾಡಿಸಿದೆ. ಕೋವಿಡ್ ಮುಗಿದ ಮೇಲೆ ಹರಾಜು ಹಾಕಿಸಿದೆ. 15 ಸಾವಿರ ಕೋಟಿ ಬರುತ್ತೆ ಅಂತಾ ಮಾಡಿಸಿದೆ. ರಾತ್ರಿ ಒಂದು ಗಂಟೆಗೆ ನನಗೆ ಮೈಸೂರಿನಿಂದಲೇ ಎತ್ತಂಗಡಿ ಆಯ್ತು ಎಂದರು.

ನಾವು ತಿಳಿದುಕೊಂಡ ಮಟ್ಟದಲ್ಲಿ ಈ ಕೇಸ್ ಇಲ್ಲ. ಇನ್ನೂ ಕೂಡ ಡೀಪ್ ಆಗಿ ಏನೇನೋ ಇದೆ. ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿದೆ. ಈಗ ಚರ್ಚೆ ಮಾಡುವುದು ಅನಾವಶ್ಯಕ. ನಾವು ಎಷ್ಟೇ ದೊಡ್ಡವರಾದರೂ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಅಂಬೇಡ್ಕರ್ ಎಲ್ಲರಿಗೂ ಒಂದೇ ಕಾನೂನು ಮಾಡಿದ್ದಾರೆ ಎಂದು ತಿಳಿಸಿದರು.

ಮುಡಾ ಪ್ರಕರಣದಲ್ಲಿ ಹೆಚ್​ಡಿಕೆ ಯೂಟರ್ನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೆಚ್. ಡಿ ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿ ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಯಾರೂ ಯೂಟರ್ನ್ ಹೊಡೆದಿಲ್ಲ. ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಆ ಮಟ್ಟದಲ್ಲಿ ಇದ್ದವರು. ಪ್ರಕರಣ ಕೋರ್ಟ್​ನಲ್ಲಿ ಇದೆ. ಸಿರಿಯಸ್ ಆಗಿ ಚರ್ಚೆ ಆಗುತ್ತಿದೆ. ಮೂರು ನಾಲ್ಕು ದಿನಗಳಲ್ಲಿ ಎಲ್ಲವೂ ಹೊರಗೆ ಬರುತ್ತೆ. ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದರು.

ರಾಜ್ಯಪಾಲರ ತೀರ್ಮಾನ ಸರಿಯಾಗಿದೆ: ರಾಜ್ಯಪಾಲರ ಹುದ್ದೆ ಆಯಾ ರಾಜ್ಯಗಳಿಗೆ ಗೌರವಯುತ ಹುದ್ದೆ. ಕಾನೂನು ಸಂರಕ್ಷಣೆ ಮಾಡುವುದು ರಾಜ್ಯಪಾಲರ ಕರ್ತವ್ಯವಾಗಿದೆ. ರಾಜ್ಯಪಾಲರ ತೀರ್ಮಾನ ಸರಿಯಾಗಿದೆ. ಪ್ರಕರಣ ಕೋರ್ಟ್​ನಲ್ಲಿ ಇದೆ. ಕೋರ್ಟ್ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ : "ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ನನ್ನಷ್ಟು ಖುಷಿ ಪಡುವವರು ಯಾರೂ ಇಲ್ಲ": ಸಚಿವ ವಿ.ಸೋಮಣ್ಣ - V SOMANNA ON CM SIDDARAMAIAH

ETV Bharat Logo

Copyright © 2024 Ushodaya Enterprises Pvt. Ltd., All Rights Reserved.