ಬೆಂಗಳೂರು : ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ಸಂಸತ್ ಅಧಿವೇಶನ ಆರಂಭ ಆಗ್ತಿದೆ, 23ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡ್ತಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿ, ಮುಂದಿನ ಪೀಳಿಗೆಗೆ ಪೂರಕವಾದ ಬಜೆಟ್ ಮಂಡನೆ ಆಗಲಿದೆ. ರಾಷ್ಟ್ರದ ಭವಿಷ್ಯದ ಭರವಸೆಗಳನ್ನು ಈಡೇರಿಸುವ ಬಜೆಟ್ ಆಗಲಿದೆ ಎಂದರು.
ಬಿಜೆಪಿ ಕಾಲದ 21 ಹಗರಣಗಳ ತನಿಖೆ ಬಗ್ಗೆ ಸಿಎಂ ಘೋಷಣೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸೋಮಣ್ಣ, ರಾಜ್ಯದ ಸಾರ್ವಭೌಮರೇ ಸಿದ್ದರಾಮಯ್ಯನವರು. ಅವರು ಏನು ಮಾಡ್ತಾರೆ ಮಾಡಲಿ, ನಮ್ಮದೇನು ತಕರಾರು ಇಲ್ಲ. ನಿಮ್ಮದು ಏನು ತಪ್ಪಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಿ, ನಾನು ಬಯಸಿದ್ದು ಹಳೆ ಸಿದ್ದರಾಮಯ್ಯರನ್ನು. ಹಳೆ ಸಿದ್ದರಾಮಯ್ಯರಾಗಿ ಈಗ, ನನ್ನಲ್ಲೂ ಕೆಲ ಲೋಪಗಳಿವೆ ಎಂದು ಅರ್ಥ ಮಾಡಿಕೊಂಡು ಸರಿಪಡಿಸಿಕೊಳ್ಳಲಿ ಎಂದಷ್ಟೇ ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯಗೆ ಸಚಿವ ಸೋಮಣ್ಣ ಟಾಂಗ್ ಕೊಟ್ಟರು.
ಇದನ್ನೂ ಓದಿ : ನಾವು ಯಾವುದೇ ಬೆದರಿಕೆಯೊಡ್ಡಿಲ್ಲ, ಸತ್ಯಾಂಶ ಜನರ ಮುಂದಿಟ್ಟಿದ್ದೇವೆ: ಸಿಎಂ ಸಿದ್ದರಾಮಯ್ಯ - CM Siddaramaiah