ETV Bharat / state

ಕಂಟೋನ್ಮೆಂಟ್, ಯಶವಂತಪುರ ರೈಲ್ವೆ ನಿಲ್ದಾಣ ವಿಶ್ವದರ್ಜೆಗೇರಿಸಲು ಕ್ರಮ: ಕೇಂದ್ರ ಸಚಿವ ಸೋಮಣ್ಣ - V Somanna - V SOMANNA

ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ 485 ಕೋಟಿ ರೂ. ಹಾಗೂ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ 387 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಎರಡೂ ನಿಲ್ದಾಣಗಳ ಪುನರ್ ಅಭಿವೃದ್ಧಿ ಕಾರ್ಯವು 2025ರಲ್ಲಿ ಪೂರೈಸಲಾಗುವುದು ಎಂದು ಕೇಂದ್ರ ಸಚಿವ ಸೋಮಣ್ಣ ತಿಳಿಸಿದ್ದಾರೆ.

ಕೇಂದ್ರ ಸಚಿವ ಸೋಮಣ್ಣ
ಕೇಂದ್ರ ಸಚಿವ ಸೋಮಣ್ಣ (ETV Bharat)
author img

By ETV Bharat Karnataka Team

Published : Jun 29, 2024, 8:24 PM IST

ಬೆಂಗಳೂರು: ಬೆಂಗಳೂರು ಕಂಟೋನ್ಮೆಂಟ್ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣಗಳನ್ನು ವಿಶ್ವದರ್ಜೆಗೇರಿಸಲು 2022-23ರಲ್ಲಿ ಮಂಜೂರಾತಿ ನೀಡಲಾಗಿದೆ. ಇದರ ಯೋಜನೆಯ ಮೊತ್ತ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ 485 ಕೋಟಿ ರೂ. ಹಾಗೂ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ 387 ಕೋಟಿ ರೂ ಮಂಜೂರು ಮಾಡಲಾಗಿದೆ. ಈ ಎರಡೂ ನಿಲ್ದಾಣಗಳನ್ನು ಪುನರ್ ಅಭಿವೃದ್ಧಿ ಕಾರ್ಯವು 2025ರಲ್ಲಿ ಪೂರೈಸಲಾಗುವುದು ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಖಾಸಗಿ ಹೋಟೆಲ್​ನಲ್ಲಿಂದು ಬೆಂಗಳೂರು ಜನಪ್ರತಿನಿಧಿಗಳು ಹಾಗೂ ರಾಜ್ಯ ರೈಲ್ವೆ ಇಲಾಖೆಯ ಮುಖ್ಯಸ್ಥರ ಜೊತೆ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2018-19ರ ಯಶವಂತಪುರ – ಚನ್ನಸಂದ್ರ 25 ಕಿ.ಮೀ ಹಾಗೂ ಬೈಯಪ್ಪನಹಳ್ಳಿ – ಹೊಸೂರು 48 ಕಿ.ಮೀ ಡಬಲಿಂಗ್ ಯೋಜನೆಗಳನ್ನು ಕ್ರಮವಾಗಿ 314 ಕೋಟಿ ರೂ. ಹಾಗೂ 500 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಈ ಕಾಮಗಾರಿ ಮುಂದುವರೆದಿದೆ ಎಂದು ಹೇಳಿದರು.

ಯಶವಂತಪುರ- ಚನ್ನಸಂದ್ರ ಯೋಜನೆಯಲ್ಲಿ ಈಗಾಗಲೇ ಯಶವಂತಪುರ ಹೆಬ್ಬಾಳ 10.3 ಕಿ.ಮೀ ಗಳಷ್ಟು ಪೂರ್ಣಗೊಳಿಸಲಾಗಿದೆ. ಮೇ 2025ರಲ್ಲಿ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಿದೆ. 1997-98 ರಲ್ಲಿ ಮಂಜೂರಾಗಿ, ನೆನೆನಗುದಿಗೆ ಬಿದ್ದಿದ್ದ ಮಹತ್ವದ ಬೆಂಗಳೂರು– ವೈಟ್‌ಫೀಲ್ಡ್ 38 ಕಿ.ಮೀ ಕ್ವಾಡ್ರುಪ್ಲಿಂಗ್ ಯೋಜನೆಗಳನ್ನು ಈಗ ಕೈಗೆತ್ತಿಗೊಂಡು ಕಾಮಗಾರಿಗೆ ವೇಗ ನೀಡಲಾಗಿದ್ದು, ಬೆಂಗಳೂರು ದಂಡು – ಬೈಯಪ್ಪನಹಳ್ಳಿ ನಡುವೆ 13 ಕಾಮಗಾರಿ ನಡೆಯುತ್ತಿದೆ. ಇದರ ಯೋಜನೆ ಮೊತ್ತ 492 ಕೋಟಿ ರೂ. ಜೂನ್ 2025ರಲ್ಲಿ ಈ ಯೋಜನೆಯನ್ನು ಪೂರ್ಣ ಮಾಡುವ ಗುರಿಯಿದೆ. ನನ್ನ ಮತ ಕ್ಷೇತ್ರದ ವಿಜಯನಗರ, ನಾಯಂಡಹಳ್ಳಿ, ಬೆಂಗಳೂರು ವಿವಿಯಲ್ಲಿ ಕಾಮಗಾರಿಗಳನ್ನು ಸರಿಪಡಿಸುತ್ತೇವೆ ಎಂದರು

ಸರ್ವೆ ಕಾರ್ಯ ಮತ್ತೆ ಆರಂಭ: ಹೆಜ್ಜಾಲದಿಂದ ಆರಂಭಿಸಿ ಕನಕಪುರ, ಸಾತನೂರು, ಹಲಗೂರು , ಕೊಳ್ಳೇಗಾಲ- ಚಾಮರಾಜನಗರದವರೆಗೂ ಬರಲಿರುವ 142 ಕಿ.ಮೀ ರೈಲು ಮಾರ್ಗದ ಸರ್ವೆ ಕಾರ್ಯ ಮತ್ತೆ ಆರಂಭಿಸಲಾಗುವುದು. 2019ರಲ್ಲೇ ಸರ್ವೆ ಆಗಿ ಸ್ಥಗಿತಗೊಂಡಿತ್ತು. ಈಗ ಮತ್ತೆ ಸರ್ವೆ ಮಾಡುತ್ತೇವೆ. ಈ ಯೋಜನೆಗೆ ರಾಜ್ಯ ಸರ್ಕಾರ ಜಾಗ ಕೊಡಬೇಕಿದೆ. 1996-97 ರಲ್ಲೇ ಈ ಯೋಜನೆ ಪ್ರಪೋಸಲ್ ಇತ್ತು. ಈಗ ನನಗೆ ಅವಕಾಶ ಸಿಕ್ಕಿದೆ. 697 ಎಕರೆ ಜಮೀನು ಬೇಕಾಗಬಹುದು. ಇದರಲ್ಲಿ ಅರಣ್ಯ ಜಮೀನು ಬರುವುದಿಲ್ಲ. ರೈತರ ಜಮೀನಿನ ಮೇಲೆ ಹೋಗುತ್ತದೆ. ಇನ್ನು ಹದಿನೈದು ದಿನಗಳಲ್ಲಿ ಇದಕ್ಕಾಗಿ ಸರ್ವೆ ಕಾರ್ಯ ಪ್ರಾರಂಭಿಸುವುದಾಗಿ ತಿಳಿಸಿದರು.

ರೈಲ್ವೆ ಖಾತೆಯ ಅಧಿಕಾರ ಅಧಿಕಾರ ವಹಿಸಿಕೊಂಡ ನಂತರ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಇಲಾಖೆಯ ಸಾಧಕ ಭಾದಕಗಳ ಅರಿಯುವ ಕೆಲಸ ಮಾಡ್ತಿದ್ದೇನೆ. ರೈಲ್ವೆ ಇಲಾಖೆಗೆ ರಾಜ್ಯದಿಂದ ಅತಿರಥ ಮಹಾರಥರು ಮಂತ್ರಿಗಳಾಗಿ ಕೊಡುಗೆ ಕೊಟ್ಟಿದ್ದಾರೆ. ಅಶ್ವಿನಿ ವೈಷ್ಣವ್ ಹಾಗೂ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ನನಗೆ ಹೆಚ್ಚಿನ ಹುಮ್ಮಸ್ಸು ಕೊಟ್ಟಿದ್ದಾರೆ. ಐವತ್ತು ವರ್ಷಗಳಲ್ಲಿ ಆಗದಿರುವುದನ್ನು 10 ವರ್ಷಗಳಲ್ಲಿ ರೈಲ್ವೆ ಇಲಾಖೆ ಮಾಡಿ ತೋರಿಸಿದೆ ಎಂದರು.

ರೈಲ್ವೆ ಇಲಾಖೆ ಒಂದು ರೀತಿಯ ಮಿಲಿಟರಿ ಇದ್ದಂತೆ: ರೈಲ್ವೆ ಇಲಾಖೆಯ ಕಾರ್ಯವೈಖರಿ ಒಂದು ರೀತಿ ಮಿಲಿಟರಿ ಇದ್ದಂತೆ. ಇನ್ನೂ ಎರಡು ವರ್ಷಗಳಲ್ಲಿ ಕರ್ನಾಟಕ, ವಿಭಿನ್ನ ರೀತಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಬದಲಾವಣೆ ಆಗುತ್ತದೆ. ನನ್ನ 40 ವರ್ಷಗಳ ಅನುಭವದೊಂದಿಗೆ ಬದಲಾವಣೆ ಆಗುತ್ತದೆ. ರೈಲ್ವೆ ಮೇಲ್ಸೆತುವೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅರ್ಧ, ಅರ್ಧ ಹಣ ಕೊಡಬೇಕು. ಜಾಗವನ್ನು ರಾಜ್ಯ ಸರ್ಕಾರ ಕೊಡಬೇಕು ಎಂದು ಸಚಿವ ವಿ. ಸೋಮಣ್ಣ ಹೇಳಿದರು.

ಇದನ್ನೂ ಓದಿ: 'ವಾರ್ನಿಂಗ್ ನಾನ್ ಕೇಳ್ತಿನೇನ್ರೀ': ಡಿಕೆಶಿ ಎಚ್ಚರಿಕೆಗೆ ಕೆ.ಎನ್​. ರಾಜಣ್ಣ ಡೋಂಟ್​ಕೇರ್​! - K N RAJANNA ON DCM WARNING

ETV Bharat Logo

Copyright © 2024 Ushodaya Enterprises Pvt. Ltd., All Rights Reserved.