ETV Bharat / state

ಮೋದಿಯವರಿಗೆ ಬೈದರೆ ದೊಡ್ಡವರಾಗುತ್ತೇವೆ ಎಂದು ಸಿಎಂ ತಿಳಿದುಕೊಂಡಿದ್ದಾರೆ: ಪ್ರಲ್ಹಾದ್ ಜೋಶಿ ಕಿಡಿ - PRALHAD JOSHI

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಿಎಂ ಸಿದ್ದರಾಮಯ್ಯ ಕುರಿತು ಮಾತನಾಡಿದ್ದಾರೆ. ಮೋದಿಗೆ ಬೈದರೆ ದೊಡ್ಡವರಾಗುತ್ತೇವೆ ಎಂದು ಸಿದ್ದರಾಮಯ್ಯ, ಕಾಂಗ್ರೆಸ್​ ನಾಯಕರು ತಿಳಿದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

union-minister-pralhad-joshi
ಪ್ರಲ್ಹಾದ್ ಜೋಶಿ (ETV Bharat)
author img

By ETV Bharat Karnataka Team

Published : Nov 11, 2024, 3:41 PM IST

Updated : Nov 11, 2024, 4:12 PM IST

ಹುಬ್ಬಳ್ಳಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬೈದರೆ ದೊಡ್ಡವರಾಗುತ್ತೇವೆ ಎಂದು ಸಿಎಂ ಸಿದ್ಧರಾಮಯ್ಯನವರು, ಕಾಂಗ್ರೆಸ್ ನಾಯಕರು ತಿಳಿದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ, ವಾಲ್ಮೀಕಿ ನಿಗಮ, ಕಾರ್ಮಿಕ ಇಲಾಖೆಯಲ್ಲಿ ಬಹುದೊಡ್ಡ ಭ್ರಷ್ಟಾಚಾರ ಆಗಿದೆ. ಇದನ್ನು ಡೈವರ್ಟ್ ಮಾಡಲು ಮೋದಿಯವರನ್ನು ಬೈಯುವುದು ಸರಿಯಲ್ಲ ಎಂದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದರು (ETV Bharat)

ವಾಲ್ಮೀಕಿ ನಿಗಮದಲ್ಲಿ 183 ಕೋಟಿಯಲ್ಲ, 89 ಕೋಟಿ ತಿಂದಿದ್ದೇವೆ ಎಂದು ಓಪನ್ ಆಗಿ ಒಪ್ಪಿಕೊಂಡಿದ್ದಾರೆ. ಮುಡಾದಲ್ಲಿ ತಹಶಿಲ್ದಾರರು ನಿಮ್ಮ ಹಣವನ್ನು ತುಂಬಿದ್ದಾರೆ ಎನ್ನುವ ಹೊಸ ಸಾಕ್ಷಿ ಸಿಕ್ಕಿದೆ. ಇವಕ್ಕೆ ನೀವು ಮಾತನಾಡಿ. ಇಲ್ಲ ಹಿಂಗೆ ಮಾಡಿಲ್ಲ, ತಪ್ಪಾಗಿತ್ತು ಅಂತಾ ಹೇಳಿ. ಅದಕ್ಕೆ ವಿವರಣೆ ನೀಡಿ. ಡೈವರ್ಟ್​ ಮಾಡುವುದಕ್ಕೆ ಈ ರೀತಿಯ ಕ್ಷುಲ್ಲಕ ವಿಚಾರ ಮಾತನಾಡಬೇಡಿ ಎಂದು ಹೇಳಿದರು.

ಸಿದ್ಧರಾಮಣ್ಣ ನಾಡಿನ ಜನತೆಗಾಗಿ ಇದ್ದಾರೋ.. ಅಥವಾ? : ಸಿದ್ರಾಮಣ್ಣನವರು ಬರೀ ಮುಸ್ಲಿಂರಿಗಾಗಿ ಇದ್ದಾರೋ ಅಥವಾ ಸಮಗ್ರ ನಾಡಿನ ಜನತೆಗಾಗಿ ಇದ್ದಾರೋ ಎಂಬುದನ್ನು ಸ್ಪಷ್ಟಪಡಿಸಲಿ. ಇಕ್ಬಾಲ್ ಅನ್ಸಾರಿಯವರ ಮಾತನ್ನು ನೋಡಿದರೇ ಎಲ್ಲ ಆಸ್ತಿಯನ್ನು ಬರೆದುಕೊಳ್ಳಿ ಎಂದು ಸಿಎಂ ಅವರೇ ಹೇಳಿರುವ ಹಾಗಿದೆ. ಸಿದ್ದರಾಮಯ್ಯ ಇರುವ ತನಕ ಕೇಸ್​ ಹಿಂತೆಗೆದುಕೊಳ್ಳುವುದು, ದೇಶದ್ರೋಹ ಮಾಡಿದವರ, ಸಮಾಜದ್ರೋಹ ಮಾಡಿದವರ ಕೇಸ್​ ಹಿಂಪಡೆಯುವುದು. ಅವರು ಇರುವ ತನಕ ವಕ್ಫ್​ ಆಸ್ತಿಯನ್ನ ಬೇಕಾಬಿಟ್ಟಿ ಮಾಡುವುದು, ಕೆಲವೇ ಕೆಲವು ಶಾದಿ ಭಾಗ್ಯಗಳನ್ನ ಮಾಡುವುದು, ಇದೇ ನಿಮ್ಮ ಥಿಯರಿಯೇ ಹಾಗಿದ್ರೆ? ಎಂದು ಪ್ರಶ್ನಿಸಿದರು.

ದೇಶದ್ರೋಹದ ಪ್ರಕರಣದಲ್ಲಿ ಮೃದು ಧೋರಣೆ : ಸಿದ್ಧರಾಮಯ್ಯ ಅವರು ಇರುವ ತನಕ ಏನೇ ಮಾಡಿದರೂ ನಡೆಯುತ್ತದೆ. ಭಯೋತ್ಪಾದನೆಯ ಬಗ್ಗೆ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ಧರಾಮಯ್ಯನವರದ್ದು ಮೃದು ಧೋರಣೆ ಇದ್ದೇ ಇದೆ. ಯಾವುದೇ ದೇಶದ್ರೋಹದ ಕೇಸ್ ಮಾಡಿದರೂ ಕೇಸ್ ಹಿಂಪಡೆಯುವುದು, ಕೆಜಿ ಹಳ್ಳಿ, ಡಿಜಿ ಹಳ್ಳಿಯಲ್ಲಿನ ಪ್ರಕರಣದಲ್ಲಿ ಭಾಗಿಯಾದವರನ್ನು ಬಿಡುಗಡೆ ಮಾಡುವುದನ್ನು ನೋಡಿದರೆ, ದೇಶದ್ರೋಹದ ಪ್ರಕರಣದಲ್ಲಿ ಮೃದು ಧೋರಣೆ ಇರುವುದು ಗೊತ್ತಾಗುತ್ತದೆ ಎಂದು ಅವರು ಕಿಡಿಕಾರಿದರು.

ಇದನ್ನೂ ಓದಿ : ದೆಹಲಿ, ಬೆಂಗಳೂರು ಬಳಿಕ ಅವಳಿ ನಗರದಲ್ಲಿ 'ಭಾರತ್ ಬ್ರ್ಯಾಂಡ್' ಆಹಾರ ಧಾನ್ಯ ವಿತರಣೆ

Last Updated : Nov 11, 2024, 4:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.