ETV Bharat / state

ಚಂದ್ರಶೇಖರನಾಥ ಸ್ವಾಮೀಜಿಗೆ ನೋಟಿಸ್; ನನ್ನ ಬಗ್ಗೆ ಜನಾಂಗೀಯ ಭಾಷೆ ಬಳಕೆ ವಿರುದ್ಧ ನೋಟಿಸ್ ಏಕೆ ಕೊಟ್ಟಿಲ್ಲ: ಹೆಚ್​ಡಿಕೆ - UNION MINISTER H D KUMARASWAMY

ಕೇಂದ್ರ ಸಚಿವ ಹೆಚ್.​ ಡಿ ಕುಮಾರಸ್ವಾಮಿ ಅವರು ಚಂದ್ರಶೇಖರನಾಥ ಸ್ವಾಮೀಜಿಗೆ ನೋಟಿಸ್ ಕೊಟ್ಟಿರುವ ಬಗ್ಗೆ ಮಾತನಾಡಿದ್ದಾರೆ.

Union Minister H.D. Kumaraswamy
ಕೇಂದ್ರ ಸಚಿವ ಹೆಚ್.​ ಡಿ ಕುಮಾರಸ್ವಾಮಿ (ETV Bharat)
author img

By ETV Bharat Karnataka Team

Published : Nov 30, 2024, 9:11 PM IST

ರಾಮನಗರ : ಚಂದ್ರಶೇಖರನಾಥ ಸ್ವಾಮೀಜಿಗೆ ತರಾತುರಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ. ಆದರೆ, ನನ್ನ ಬಗ್ಗೆ ಸಚಿವರೊಬ್ಬರು ಜನಾಂಗೀಯ ಭಾಷೆ ಚರ್ಚೆ ಮಾಡಿದ್ದಾರೆ. ಇವತ್ತಿನವರೆಗೆ ಏನಾದರೂ ನೋಟಿಸ್ ಕೊಟ್ಟಿದ್ದಾರಾ?. ಅದರ ಬಗ್ಗೆ ಕೇಸ್​ ಆಗಿಲ್ಲ. ಏಕೆ ನೋಟಿಸ್ ಕೊಟ್ಟಿಲ್ಲ? ಎಂದು ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚಿವ ಹೆಚ್.​ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಚನ್ನಪಟ್ಟಣದಲ್ಲಿ ಇಂದು ನಡೆದ ಮತದಾರರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಈ ರೀತಿಯ ತೀರ್ಮಾನಗಳನ್ನ ಮಾಡುವುದರಿಂದ ಈ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಅರಾಜಕತೆ ಪ್ರಾರಂಭವಾಗುತ್ತೆ ಕಾದು ನೋಡಿ ಎಂದರು. ಇತ್ತೀಚಿಗೆ ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಚಿವ ಜಮೀರ್ ಅಹಮ್ಮದ್ ಅವರು ಹೆಚ್​ ಡಿ ಕುಮಾರಸ್ವಾಮಿಗೆ ಕರಿಯ ಎಂದು ಕರೆದಿದ್ದರು.

ಕೇಂದ್ರ ಸಚಿವ ಹೆಚ್.​ ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ (ETV Bharat)

ನಿಖಿಲ್ ಪಕ್ಷ ಕಟ್ಟುವಂತಹ ಜವಾಬ್ದಾರಿ ಹೊರಬೇಕಿದೆ: ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲೇ ಇರಬೇಕು ಎಂಬ ಕಾರ್ಯಕರ್ತರ ಒತ್ತಾಯದ ಕುರಿತು ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟು ಎಲ್ಲೂ ಹೋಗಲ್ಲ. ಅವರು ರಾಜ್ಯದಲ್ಲಿ ಮುಂದೆ ಪಕ್ಷ ಕಟ್ಟುವಂತಹ ಜವಾಬ್ದಾರಿ ಹೊರಬೇಕಿದೆ. ಅವರ ನೇತೃತ್ವದಲ್ಲಿ ಪಕ್ಷದ ನಾಯಕರು ಇನ್ನೂ ಸಬಲವಾಗಿ ಜೆಡಿಎಸ್‌ ಪಕ್ಷವನ್ನು ಸಂಘಟಿಸಬೇಕಿದೆ ಎಂದು ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಇಂದು ನಡೆದ ಮತದಾರರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, 'ನಾನು ಕೇಂದ್ರ ಸಚಿವನಾಗಿದ್ದೇನೆ. ಹೀಗಾಗಿ, ಪಕ್ಷದ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ, ನಿಖಿಲ್ ಕುಮಾರಸ್ವಾಮಿ ಅವರ ಮುಖಂಡತ್ವದಲ್ಲಿ ಪಕ್ಷ ಸಂಘಟನೆಗೆ ಚಾಲನೆ ಕೊಡುವ ಬಗ್ಗೆ ತೀರ್ಮಾನಿಸಿದ್ದೇವೆ. ಮುಂದಿನ ಸಂಕ್ರಾಂತಿಯಿಂದ ಪಕ್ಷದ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ನಮ್ಮ ಕಾರ್ಯಕ್ರಮ ಪ್ರಾರಂಭಿಸುತ್ತೇವೆ' ಎಂದಿದ್ದಾರೆ.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು (ETV Bharat)

ರಾಮನಗರ ಜಿಲ್ಲೆಯ ಅಭಿವೃದ್ದಿ ಪರವಾಗಿ ನಿಖಿಲ್ ಕುಮಾರಸ್ವಾಮಿ: ನಾನು ಉಪಚುನಾವಣೆಗೆ ನಿಲ್ಲಬೇಕು, ಆಕಾಂಕ್ಷಿ ಎಂದು ನಾನು ಭಾವಿಸಿರಲಿಲ್ಲ. ಚುನಾವಣೆಯಲ್ಲಿ ಏಳು - ಬೀಳು ಸರ್ವೇ ಸಾಮಾನ್ಯ. ಎಲ್ಲಾ ಸಾಧಕ-ಭಾದಕಗಳು ಇರುತ್ತೆ. ಗೆಲ್ಲುವುದಕ್ಕಾಗಿಯೇ ನಾನು ಬಂದು ನಿಂತಿರುವುದಲ್ಲ. ಕಾರ್ಯಕರ್ತರು ಪಕ್ಷವನ್ನ ರಾಮನಗರದಲ್ಲಿ ಸದೃಢವಾಗಿ ಕಟ್ಟಿದ್ದಾರೆ. ಅವರ ಆತ್ಮವಿಶ್ವಾಸ ಕುಗ್ಗಿಸಬಾರದು ಎಂದು ಕೊನೆಯ ಹಂತದಲ್ಲಿ ಎರಡು ಪಕ್ಷದ ನಾಯಕರು ಕೊನೆಯ ಹಂತದಲ್ಲಿ ತೀರ್ಮಾನ ತೆಗೆದುಕೊಂಡರು. ಹಾಗಾಗಿ, ಅಧಿಕಾರ ಇರಲಿ, ಇಲ್ಲದೇ ಹೋಗಲಿ ಸದಾ ಕಾಲ ರಾಮನಗರ ಜಿಲ್ಲೆಯ ಅಭಿವೃದ್ದಿ ಪರವಾಗಿ ನಿಖಿಲ್ ಕುಮಾರಸ್ವಾಮಿ ಇರುತ್ತಾನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ : ಬಾಲಗಂಗಾಧರನಾಥ ಶ್ರೀಗಳ ಮೇಲೆ ಎಫ್‌ಐಆರ್ ಹಾಕಿಸಿದ್ದು ಅಶೋಕ್ : ಸಚಿವ ಚಲುವರಾಯಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.