ETV Bharat / state

ಕೇಂದ್ರ ಬಜೆಟ್ ವಿಕಸಿತ ಭಾರತ ನಿರ್ಮಾಣವನ್ನ ಉತ್ತೇಜಿಸಲಿದೆ: ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ - Union Budget 2024 - UNION BUDGET 2024

ವಿಕಸಿತ ಭಾರತ ನಿರ್ಮಾಣಕ್ಕೆ ಉತ್ತೇಜಿಸುವ ಬಜೆಟ್ ಆಗಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಶ್ಲಾಘಿಸಿದ್ದಾರೆ.

FKCCI PRESIDENT  DEVELOPMENT OF INDIA  RAMESH CHANDRA LAHOTI REACTION  BENGALURU
ಎಫ್‌ಕೆಸಿಸಿಐ ಸಂಸ್ಥೆಯ ಸಭೆ (ETV Bharat)
author img

By ETV Bharat Karnataka Team

Published : Jul 23, 2024, 7:58 PM IST

ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಮಂಡಿಸಿದ ಕೇಂದ್ರ ಬಜೆಟ್ 2024-25 ಅನ್ನು ಎಫ್‌ಕೆಸಿಸಿಐ ಸ್ವಾಗತಿಸುತ್ತದೆ. ಇದು ಸುಧಾರಣೆಗಳು ಮತ್ತು ಜನಪ್ರಿಯತೆಯ ನಡುವೆ ಸಮತೋಲನ ತರಲು ಕೇಂದ್ರೀಕೃತವಾಗಿದೆ. ಇದು ವಿಕಸಿತ ಭಾರತ ನಿರ್ಮಾಣಕ್ಕೆ ಉತ್ತೇಜಿಸುವ ಬಜೆಟ್ ಆಗಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಹೇಳಿದರು.

FKCCI PRESIDENT  DEVELOPMENT OF INDIA  RAMESH CHANDRA LAHOTI REACTION  BENGALURU
ಎಫ್‌ಕೆಸಿಸಿಐ ಸಂಸ್ಥೆಯ ಸಭೆ (ETV Bharat)

ಕೇಂದ್ರ ಬಜೆಟ್ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಉದ್ಯೋಗ, ಕೌಶಲ್ಯ, ಎಂಎಸ್‌ಎಂಇ ಮತ್ತು ಮಧ್ಯಮ ವರ್ಗದ ಮೇಲೆ ಕೇಂದ್ರೀಕರಿಸುವ ವೇಗದ ಆರ್ಥಿಕ ಅಭಿವೃದ್ಧಿ ಉತ್ತೇಜಿಸುವ ಬಜೆಟ್ ಆಗಿದೆ. ಉದ್ಯೋಗ ಸೃಷ್ಟಿಯಲ್ಲಿ ನಿರ್ಣಾಯಕ ಪಾತ್ರವಹಿಸುವ ಸಣ್ಣ ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಉಪಕ್ರಮ ಈ ಬಜೆಟ್‌ನಲ್ಲಿದೆ ಎಂದು ಶ್ಲಾಘಿಸಿದರು.

ಇದು ದೂರದೃಷ್ಟಿಯುಳ್ಳ ದೂರಗಾಮಿ ಬಜೆಟ್ ಆಗಿದೆ. ಸಂಶೋಧನೆ, ಆವಿಷ್ಕಾರಕ್ಕೆ ಬಜೆಟ್‌ ಅತೀ ಹೆಚ್ಚು ಒತ್ತುಕೊಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರಸ್ಪರ ಸಹಯೋಗದಿಂದ ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಅಭಿವೃದ್ಧಿಗೆ ದೂರಗಾಮಿ ಕೊಡುಗೆ ನೀಡುವ ಉಪಕ್ರಮಗಳು ಸಾಕಷ್ಟಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರವು ಪಿಎಲ್‌ಐ ಜೊತೆಗೆ ಇಎಲ್‌ಐ (ನೌಕರ ಲಿಂಕ್ಡ್ ಇನ್ಸೆಂಟಿವ್) ಯೋಜನೆಯ ಮೇಲೆ ಸ್ಪಷ್ಟವಾಗಿ ಗಮನಹರಿಸಿದೆ. ಇಪಿಎಫ್‌ಒ ಮೂಲಕ ಮೊದಲ ಬಾರಿಗೆ ಕೆಲಸ ಮಾಡುವವರಿಗೆ ವೇತನ ಪ್ರಯೋಜನ ನೀಡುವ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಪ್ರಯತ್ನಗಳನ್ನು ಎಫ್‌ಕೆಸಿಸಿಐ ಸ್ವಾಗತಿಸುತ್ತದೆ. ಉದ್ಯೋಗ ಮತ್ತು ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉನ್ನತ ಶಿಕ್ಷಣಕ್ಕಾಗಿ 10 ಲಕ್ಷದವರೆಗಿನ ಸಾಲಗಳಿಗೆ ಹೆಚ್ಚುವರಿ ಬೆಂಬಲ ನೀಡಲಾಗಿದೆ. ಇದು ವಿಕಸಿತ ಭಾರತದ ಗುರಿಯನ್ನು ವೇಗವಾಗಿ ಸಾಧಿಸಲು ಸಹಾಯ ಮಾಡಲಿದೆ ಎಂದರು.

ಕ್ರೆಡಿಟ್​ ರೇಟಿಂಗ್​​ಗೆ ಅವಕಾಶ: ಪಿಎಸ್​​ಯು ಬ್ಯಾಂಕ್‌ಗಳಿಗೆ ಪರ್ಯಾಯ ಕ್ರೆಡಿಟ್ ರೇಟಿಂಗ್ ಕಾರ್ಯವಿಧಾನದೊಂದಿಗೆ ಬರಲು ಅವಕಾಶ ನೀಡಲಾಗಿದ್ದು, ಇದು ಸಿಬಿಲ್ ಮೇಲಿನ ಅತಿಯಾದ ಅವಲಂಬನೆಯನ್ನು ತಪ್ಪಿಸಲಿದೆ. ಮುದ್ರಾ ಯೋಜನೆಯಲ್ಲಿ ಸಾಲ ನೀಡುವ ಪ್ರಮಾಣವನ್ನು 10 ಲಕ್ಷದಿಂದ ರೂ.20 ಲಕ್ಷಗಳಿಗೆ ಹೆಚ್ಚಳ ಮಾಡಿರುವುದು ಸ್ವಾಗತಾರ್ಹವಾಗಿದೆ. ಇದು ಸಣ್ಣ ಸ್ವಾಮ್ಯದ ವ್ಯವಹಾರಗಳು ಮತ್ತು ಪಾಲುದಾರಿಕೆ ಸಂಸ್ಥೆಗಳಿಗೆ ಸಹಾಯ ಮಾಡಲಿದೆ. ಇದು ಸೂಕ್ಷ್ಮ ಘಟಕಗಳಿಗೆ ಇನ್ನಷ್ಟು ಉತ್ತೇಜಿಸಿದಂತಾಗುತ್ತದೆ ಎಂದು ತಿಳಿಸಿದರು.

ಬಂಡವಾಳ ಲಾಭದ ತೆರಿಗೆಯಿಂದಾಗಿ ಹೂಡಿಕೆದಾರ ಸಮುದಾಯಕ್ಕೆ ಬಜೆಟ್ ಪ್ರತಿಕೂಲವಾಗಿದ್ದರೂ, ಸಮತೋಲಿತವಾಗಿದೆ. ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿನ ಸಡಿಲಿಕೆಯು ದೇಶಾದ್ಯಂತ ಬಳಕೆಗೆ ಸಹಾಯ ಮಾಡಲಿದೆ. ಹೆಚ್ಚುತ್ತಿರುವ ಆಹಾರ ಬೇಡಿಕೆಯ ಪೂರೈಕೆ ಹಾಗೂ ಕೃಷಿಗೆ ಮತ್ತಷ್ಟು ಚೈತನ್ಯ ತುಂಬಲು ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಬಜೆಟ್‌ ಆದ್ಯತೆ ಕೊಟ್ಟಿದೆ. ಕೃಷಿ ಬೆಳೆಯ ಡಿಜಿಟಲ್‌ ಸಮೀಕ್ಷೆ ಮಾಡುವ ಯೋಜನೆಯನ್ನು 400 ಜಿಲ್ಲೆಗಳಲ್ಲಿ ವಿಸ್ತರಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಏಂಜೆಲ್​ ಟ್ಯಾಕ್ಸ್​​ ರದ್ಧತಿ: ಸ್ಟಾರ್ಟ್‌ಅಪ್ ವಲಯಗಳಲ್ಲಿ ತೊಂದರೆಯಾಗುತ್ತಿದ್ದ ಏಂಜೆಲ್ ಟ್ಯಾಕ್ಸ್ ಅನ್ನು ರದ್ದುಗೊಳಿಸಿರುವುದು ಪರಿಹಾರದ ರಹದಾರಿಯಾಗಿದೆ. ಟಿಡಿಎಸ್ ಡೀಫಾಲ್ಟ್‌ಗಳನ್ನು ತಪ್ಪಿಸಲಿದೆ. ಆದರೆ 2024-25ರ ಬಜೆಟ್​ನಲ್ಲಿ ಕೆಲವು ರಾಜ್ಯಗಳಿಗೆ ನೀಡಿರುವಂತೆ ಕರ್ನಾಟಕ ರಾಜ್ಯಕ್ಕೆ ಯಾವುದೇ ರೀತಿಯ ನಿರ್ದಿಷ್ಟ ಆದ್ಯತೆ ನೀಡಿಲ್ಲದಿರುವುದು ಬೇಸರ ತಂದಿದೆ ಎಂದು ರಮೇಶ್ ಚಂದ್ರ ಲಹೋಟಿ ಹೇಳಿದರು.

ಓದಿ: ಆದಾಯ ತೆರಿಗೆದಾರರು ಗಮನಿಸಿ!: ಸ್ಟ್ಯಾಂಡರ್ಡ್ ಡಿಡಕ್ಷನ್ ₹75 ಸಾವಿರಕ್ಕೇರಿಕೆ; ₹3 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ - Income Tax

ETV Bharat Logo

Copyright © 2025 Ushodaya Enterprises Pvt. Ltd., All Rights Reserved.