ETV Bharat / state

ಬೆಂಗಳೂರಿನಲ್ಲಿ ಯುಗಾದಿ ಸಂಭ್ರಮ: ಅದ್ದೂರಿಯಾಗಿ ಹಬ್ಬವನ್ನ ಸ್ವಾಗತಿಸಿದ ಸಿಲಿಕಾನ್ ಸಿಟಿ ಜನತೆ - Ugadi celebrations

ಸಿಲಿಕಾನ್​ ಸಿಟಿಯಲ್ಲಿ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಜನರು ಬೆಳಗ್ಗೆಯಿಂದಲೇ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ.

ugadi-celebrations-in-bengaluru
ಬೆಂಗಳೂರಿನಲ್ಲಿ ಯುಗಾದಿ ಸಂಭ್ರಮ: ಅದ್ದೂರಿಯಾಗಿ ಹಬ್ಬ ಬರಮಾಡಿಕೊಂಡ ಸಿಲಿಕಾನ್ ಸಿಟಿಯ ಜನತೆ
author img

By ETV Bharat Karnataka Team

Published : Apr 9, 2024, 3:50 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದೆ. ಮಹಾನಗರದ ವಾಸಿಗಳು ಅದ್ದೂರಿಯಾಗಿ ಹಬ್ಬವನ್ನು ಬರಮಾಡಿಕೊಂಡಿದ್ದಾರೆ. ನಗರದ ದೇವಸ್ಥಾನಗಳಲ್ಲಿ ಇಂದು ಬೆಳಗ್ಗೆಯಿಂದಲೇ ವಿಶೇಷ ಪೂಜೆ ನಡೆಸಿ ಹಬ್ಬ ಆಚರಿಸಿದ್ದಾರೆ. ಮುಖ್ಯವಾಗಿ ನಗರದ ಗವಿಗಂಗಾಧರ, ಕಾಡುಮಲ್ಲೆಶ್ವರ, ಬನಶಂಕರಿ, ಕೋಟೆ ವೆಂಕಟೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಗವಿಗಂಗಾಧರ ದೇವಸ್ಥಾನದಲ್ಲಿ ಬೆಳ್ಳಗ್ಗೆ 6 ಗಂಟೆಯಿಂದಲೇ ವಿಶೇಷ ಪೂಜೆಗಳು ನಡೆದವು. ಪಂಚಾಭಿಷೇಕ, ರುದ್ರಾಭಿಷೇಕ, ಪುಷ್ಟಾಭಿಷೇಕ ಮಾಡಿ 8 ಗಂಟೆಗೆ ಮಹಾಭಿಷೇಕ ನಡೆಸಲಾಯಿತು. ಮಹಾಭಿಷೇಕದ ನಂತರ ಭಕ್ತದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದರ್ಶನವನ್ನು ಪಡೆದರು. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇಂದು ರಾತ್ರಿವರೆಗೂ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಜೊತೆಗೆ ಪ್ರಸಾದ ವಿತರಣೆಯ ವ್ಯವಸ್ಥೆ ಕೂಡ ಮಾಡಲಾಗಿದೆ.

ಯುಗಾದಿ ಹಬಕ್ಕೆ ನಡೆದ ಭರ್ಜರಿ ಖರೀದಿ: ಯುಗಾದಿ ಹಬ್ಬಕ್ಕೆ ಜನರು ಭರ್ಜರಿ ಖರೀದಿಯನ್ನೇ ಮಾಡಿದ್ದಾರೆ. ಆದರೆ, ಈ ಬಾರಿ ಬಿಸಿಲು ಹಾಗೂ ಬೆಲೆ ಎರಡೂ ಏರಿಕೆಯಾಗಿರುವುದರಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿತ್ತು. ಆದರೂ ಮಾರುಕಟ್ಟೆಗಳಲ್ಲಿ ಹಬ್ಬದ ಸಾಮಗ್ರಿಗಳ ಖರೀದಿ ಭರಾಟೆ ಮಾತ್ರ ಜೋರಾಗಿ ನಡೆಯಿತು. ಹಬ್ಬವನ್ನು ಸಂಭ್ರಮದಿಂದ ಆಚರಿಸಲು ನಗರವಾಸಿಗಳು ಬಿಸಿಲಿನ ಬೇಗೆಯ ಮಧ್ಯೆ ಕೂಡ ಶನಿವಾರದಿಂದಲೇ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ಹಾಗೂ ತರಕಾರಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಿದ್ದರು.

ದಿನ ಕಳೆದಂತೆ ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಳವಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಹೂಗಳ ಪೂರೈಕೆ ಕಡಿಮೆಯಾಗಿದೆ. ಆದರಿಂದ ಹೂವುಗಳ ಬೆಲೆ ಕೂಡ ದುಬಾರಿಯಾಗಿತ್ತು. ಜತೆಗೆ ಹಣ್ಣು ಹಾಗೂ ತರಕಾರಿ ಬೆಲೆ ತುಸು ಏರಿಕೆಯಾಗಿತ್ತು. ಇಂದು ಕೂಡ ಖರೀದಿ ನಡೆದಿದ್ದು, ಬೆಲೆ ಹೆಚ್ಚಾಗಿದೆ. ಕೆಲ ದಿನಗಳ ಹಣ್ಣುಗಳ ಬೆಲೆಯನ್ನು ಗಮನಿಸಿದರೆ ಪ್ರಸ್ತುತ ಹಣ್ಣಿನ ದರ ತುಸು ಏರಿಕೆಯಾಗಿದೆ ಎಂದು ಕೆಲ ವ್ಯಾಪಾರಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ಯುಗಾದಿಯ ದಿನ ಹೊಸ ಪಂಚಾಂಗದ ಪೂಜೆ ಏಕೆ ಮಾಡುತ್ತಾರೆ, ಬೇವು-ಬೆಲ್ಲದ ಮಹತ್ವವೇನು?: ಅಮರೇಶ ಶಾಸ್ತ್ರಿ ಗುರೂಜಿ ಸಂದರ್ಶನ - Ugadi Festival

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.