ಯಲಹಂಕ: ಕಾರ್ಖಾನೆ ಕಾವಲಿಗೆ ಇದ್ದ ಇಬ್ಬರು ಸೆಕ್ಯೂರಿಟಿ ಗಾರ್ಡ್ಗಳನ್ನು ಕೊಲೆ ಮಾಡಿರುವ ಘಟನೆ ಯಲಹಂಕ ನ್ಯೂಟೌನ್ ಬಳಿ ಭಾನುವಾರ ರಾತ್ರಿ ನಡೆದಿದೆ. ದುಷ್ಕರ್ಮಿಗಳು ಇಬ್ಬರನ್ನು ಕೊಲೆಗೈದು ಪರಾರಿಯಾಗಿದ್ದಾರೆ.
ಯಲಹಂಕ ನ್ಯೂಟೌನ್ ಬಳಿಯ ಬಯಲು ಬಸವೇಶ್ವರ ದೇವಸ್ಥಾನದ ಬಳಿಯಿರುವ ಫ್ಯಾಕ್ಟರಿಯಲ್ಲಿ ಈ ಘಟನೆ ನಡೆದಿದೆ. ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ಗಳಾದ ವಿಕ್ರಂ (21) ಹಾಗೂ ಸೂರಿ (33) ಕೊಲೆಗೀಡಾದವರು. ಇವರಿಬ್ಬರೂ ಇತ್ತೀಚೆಗೆ ಫ್ಯಾಕ್ಟರಿಯಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಸ್ಥಳೀಯರಿಂದ ವಿಷಯ ತಿಳಿದು ಸ್ಥಳಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಫ್ಯಾಕ್ಟರಿ ಖಾಲಿ ಇದ್ದು, ಅದನ್ನು ವಿಕ್ರಂ ಮತ್ತು ಸೂರಿ ಕಾಯುತ್ತಿದ್ದರು. ನಿನ್ನೆ ರಾತ್ರಿ ಇಬ್ಬರೂ ತಮ್ಮ ಪರಿಯಸ್ಥರೊಂದಿಗೆ ಪಾರ್ಟಿ ಮಾಡಿದ್ದಾರೆ. ರಾತ್ರಿ 7 ಗಂಟೆಯಿಂದ ಪಾರ್ಟಿ ನಡೆದಿದ್ದು, ಈ ವೇಳೆ ಸ್ನೇಹಿತರ ನಡುವೆ ಜಗಳವಾಗಿರುವ ಸಂಶಯವಿದೆ. ಜೊತೆಯಲ್ಲಿದ್ದವರೇ ಕಬ್ಬಿಣದ ರಾಡ್ಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದಾಗ ಕೆಲವರು ಓಡಾಡಿರುವ ದೃಶ್ಯಗಳು ಸೆರೆಯಾಗಿವೆ. ಅದರ ಮೇರೆಗೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಗೃಹಿಣಿಯನ್ನು ಮಕ್ಕಳೆದುರೇ ಚೂರಿಯಿಂದ ಇರಿದು, ಸಾಯದೇ ಇದ್ದಾಗ ಕೆರೆಗೆ ಎಸೆದ ಪ್ರಿಯಕರ!