ಕಲಬುರಗಿ: ಮ್ಯಾಕ್ಸಿಕ್ಯಾಬ್ ಮತ್ತು ಬೈಕ್ ಮಧ್ಯ ಅಪಘಾತ ಸಂಭವಿಸಿ ಮದುಮಗ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ಕಮಲಾಪುರ ತಾಲೂಕಿನ ಅಂತಪನಾಳ ಕ್ರಾಸ್ ಬಳಿ ನಡೆದಿದೆ. ಚೇಂಗಟಾ ಗ್ರಾಮದ ನಿವಾಸಿ ಸುನೀಲ ಪೂಜಾರಿ (25) ಹಾಗೂ ಇವರ ಸೋದರ ಸಂಬಂಧಿ ಗೋಗಿ (ಕೆ) ಗ್ರಾಮದ ಶರಣಬಸಪ್ಪ ಪೂಜಾರಿ (42) ಮೃತ ದುರ್ದೈವಿಗಳಾಗಿದ್ದಾರೆ.
ಬರುವ ಮೇ 3 ರಂದು ಸುನೀಲ ಅವರಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮನೆಗೆ ಬಂದು ಬಳಗದವರೂ ಆಗಮಿಸಿದ್ದರು. ಮದುವೆಗೆ ಬಟ್ಟೆ ಖರೀದಿಗೆಂದು ಇಬ್ಬರು ಸೇರಿ ಬೈಕ್‌ನಲ್ಲಿ ಕಮಲಾಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಕಮಲಾಪುರದಿಂದ ಚೇಂಗಟಾಕ್ಕೆ ತೆರಳುತ್ತಿದ್ದ ಮ್ಯಾಕ್ಸಿಕ್ಯಾಬ್ ಡಿಕ್ಕಿ ಹೊಡೆದ ಪರಿಣಾಮ ಸುನೀಲ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಶರಣಬಸಪ್ಪ ಅವರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ವಿಧಿಯಾಟದಿಂದ ಸಂಭ್ರಮ ತುಂಬಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಮೂವರು ಮಕ್ಕಳು, 5 ಮಹಿಳೆಯರು ಸೇರಿ 9 ಮಂದಿ ದುರ್ಮರಣ: 23 ಮಂದಿಗೆ ಗಂಭೀರ ಗಾಯ - bemetara Road Accident