ETV Bharat / state

ರಿವರ್ ಕ್ರಾಸಿಂಗ್ ತರಬೇತಿ ವೇಳೆ ಮುಳುಗಿದ ಬೋಟ್: ಇಬ್ಬರು ಕಮಾಂಡೋಗಳ ದುರ್ಮರಣ - Two Commandos Died - TWO COMMANDOS DIED

ನೆರೆಯ ಮಹಾರಾಷ್ಟ್ರದ ತಿಲಾರಿ‌ ಡ್ಯಾಂನಲ್ಲಿ ರಿವರ್ ಕ್ರಾಸಿಂಗ್ ತರಬೇತಿಗೆ ತೆರಳಿದ್ದ ಬೆಳಗಾವಿ ಕಮಾಂಡೋ ಸೆಂಟರ್​ನ ಇಬ್ಬರು ಕಮಾಂಡೋಗಳು ಬೋಟ್ ಮುಳುಗಿ ಮೃತಪಟ್ಟಿದ್ದಾರೆ.

ಮೃತ ಕಮಾಂಡೋಗಳು
ರಿವರ್ ಕ್ರಾಸಿಂಗ್ ತರಬೇತಿ ವೇಳೆ ಬೋಟ್ ಮುಳುಗಿ ಮೃತ ಕಮಾಂಡೋಗಳು (ETV Bharat)
author img

By ETV Bharat Karnataka Team

Published : Sep 8, 2024, 3:57 PM IST

ಬೆಳಗಾವಿ: ಇಲ್ಲಿನ ಕಮಾಂಡೋ ಸೆಂಟರ್​ನ ಇಬ್ಬರು ಜೂನಿಯರ್ ಕಮಾಂಡೋಗಳು ಬೋಟ್ ಮುಳುಗಿ ಮೃತಪಟ್ಟಿದ್ದಾರೆ. ಈ ಘಟನೆ ಶನಿವಾರ ಮಧ್ಯಾಹ್ನ ಮಹಾರಾಷ್ಟ್ರದ ತಿಲಾರಿ‌ ಡ್ಯಾಂ ಹಿನ್ನೀರಿನಲ್ಲಿ ನಡೆದಿದೆ. ರಾಜಸ್ಥಾನದ ವಿಜಯಕುಮಾ‌ರ್​ ದಿನವಾಲ್ (28) ಹಾಗೂ ಪಶ್ಚಿಮ ಬಂಗಾಳದ ದಿವಾಕ‌ರ್ ರಾಯ್ (26) ಮೃತರು.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲೂಕಿನ ತಿಲಾರಿ ಡ್ಯಾಂಗೆ ಈ ಇಬ್ಬರು ರಿವರ್ ಕ್ರಾಸಿಂಗ್ ತರಬೇತಿಗೆ ತೆರಳಿದ್ದರು. ಒಟ್ಟು ಆರು ಕಮಾಂಡೋಗಳು ಕ್ರಾಸಿಂಗ್ ಮಾಡುತ್ತಿದ್ದಾಗ ನದಿ ಮಧ್ಯದಲ್ಲಿ ಬೋಟ್ ಮುಳುಗಿದೆ. ಬೋಟ್​ನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ‌ ಸ್ಥಳಕ್ಕೆ ಜೆ.ಎಲ್.ವಿಂಗ್ ಕಮಾಂಡೋ ಸೆಂಟರ್‌ನ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ದಾವಣಗೆರೆ: ಡಿವೈಡರ್​ಗೆ ಡಿಕ್ಕಿ ಹೊಡೆದು ಖಾಸಗಿ‌ ಬಸ್ ಪಲ್ಟಿ, 14 ಪ್ರಯಾಣಿಕರಿಗೆ ಗಾಯ - Private bus accident

ETV Bharat Logo

Copyright © 2025 Ushodaya Enterprises Pvt. Ltd., All Rights Reserved.