ETV Bharat / state

ಮದ್ದೂರಮ್ಮನ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಮದ್ದೂರಮ್ಮನ ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ನಡೆದಿದೆ.

madduramma lake
ಮದ್ದೂರಮ್ಮನ ಕೆರೆ ಬಳಿ ನೆರೆದಿದ್ದ ಜನರು, ಶೋಧ ಕಾರ್ಯ (ETV Bharat)
author img

By ETV Bharat Karnataka Team

Published : Oct 21, 2024, 11:43 AM IST

ಮಂಡ್ಯ: ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದ ಶ್ರೀ ಮದ್ದೂರಮ್ಮನ ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲಾಗಿರುವ ದುರ್ಘಟನೆ ಭಾನುವಾರ ಜರುಗಿದೆ.

ಮದ್ದೂರು ತಾಲೂಕಿನ ಶಂಕರಪುರ ಗ್ರಾಮದ ಮುತ್ತುರಾಜು (14) ಮತ್ತು ರಂಜು (17) ಮೃತಪಟ್ಟ ಬಾಲಕರಾಗಿದ್ದಾರೆ. ಭಾನುವಾರ ಮಧ್ಯಾಹ್ನ ಸ್ನೇಹಿತರೆಲ್ಲ ಸೇರಿಕೊಂಡು ಕೆರೆಗೆ ಈಜಲು ಹೋಗಿದ್ದಾರೆ. ಕೆಲಕಾಲ ಆಟವಾಡಿದ್ದು, ಬಳಿಕ ಕೆರೆ ನೀರಿನ ಆಳಕ್ಕೆ ಹೋದ ಪರಿಣಾಮ ಮೇಲೇಳಲಾಗದೇ ಮುಳುಗಿ ಮೃತಪಟ್ಟಿದ್ದಾರೆ.

ಐವರು ಕೆರೆಗೆ ಈಜಲು ಹೋಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಉಳಿದ ಮೂವರು ಆತಂಕಗೊಂಡು ಸ್ಥಳದಿಂದ ಓಡಿ ಹೋಗಿದ್ದಾರೆ. ಮೃತ ಬಾಲಕ ಮುತ್ತುರಾಜು ಎಸ್​ಎಸ್​ಎಲ್​ಸಿ ಓದುತ್ತಿದ್ದರೆ, ರಂಜು ಸೋಮನಹಳ್ಳಿಯ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಮೃತದೇಹಗಳನ್ನು ಶೋಧ ಕಾರ್ಯ ನಡೆಸಿ ಮೇಲೆತ್ತಿದ್ದಾರೆ. ಬೆಸಗರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಹಾವೇರಿ: ಹಳ್ಳದ ನಡುವೆ ಸಿಲುಕಿದ ಮೂವತ್ತಕ್ಕೂ ಅಧಿಕ ಭಕ್ತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.