ETV Bharat / state

ಚಪ್ಪಲಿಯ ರೂಪದಲ್ಲಿ ಬಂದ ಜವರಾಯ! ಇಬ್ಬರ ದುರ್ಮರಣ - Two Boys Drowned - TWO BOYS DROWNED

ಕೆರೆ ನೀರಿನಲ್ಲಿ ಬಿದ್ದ ಚಪ್ಪಲಿ ತೆಗೆದುಕೊಳ್ಳಲು ಹೋಗಿ ಇಬ್ಬರು ಮೃತಪಟ್ಟ ಘಟನೆ ಹಾಸನದಲ್ಲಿ ಸಂಭವಿಸಿದೆ.

TWO BOYS DEATH
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Aug 15, 2024, 9:25 PM IST

ಹಾಸನ: ಕೆರೆಗೆ ಬಿದ್ದ ಚಪ್ಪಲಿಯನ್ನು ತೆಗೆಯಲು ಹೋಗಿ ಇಬ್ಬರು ಜೀವ ಕಳೆದುಕೊಂಡಿರುವ ಘಟನೆ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದ ದೊಡ್ಡಕೆರೆಯಲ್ಲಿ ಇಂದು ನಡೆಯಿತು. ಶ್ರೀಕಾಂತ್ (15) ವಿಜಯ್ (18) ಮೃತರು.

ಆಗಿದ್ದೇನು?: ಶೀಕಾಂತ್ ಹಾಗೂ ವಿಜಯ್ ಮೀನು ಹಿಡಿಯಲು ತೆರಳಿದ್ದರು. ಕೆರೆ ಬದಿ ನಿಂತು ಗಾಳ ಹಾಕಿ ಮೀನು ಹಿಡಿಯುತ್ತಿದ್ದಾಗ ಧಾರಾಕಾರ ಮಳೆ ಸುರಿದಿದೆ. ರಕ್ಷಣೆಗೆಂದು ಏರಿ ಬದಿಯ ಮರದ ಕೆಳಗೆ ಆಶ್ರಯ ಪಡೆದಿದ್ದರು. ಈ ಸಂದರ್ಭದಲ್ಲಿ ವಿಜಯ್​ ಒಂದು ಕಾಲಿನ ಚಪ್ಪಲಿ ಕೆರೆಗೆ ಬಿದ್ದಿದೆ. ಚಪ್ಪಲಿ ತೆಗೆದುಕೊಳ್ಳಲು ನೀರಿಗಿಳಿದಾಗ ಶ್ರೀಕಾಂತ್ ಹೂಳಿನಲ್ಲಿ ಸಿಲುಕಿ ಮುಳುಗಿದ್ದಾರೆ. ಆತನ ರಕ್ಷಣೆಗೆಂದು ಹೋದ ವಿಜಯ್ ಕೂಡ ನೀರು ಪಾಲಾಗಿದ್ದಾರೆ.

ಶ್ರೀಕಾಂತ್ ಎಂಬವರು ಮಹೇಶ್ ಹಾಗು ಶಶಿಕಲಾ ದಂಪತಿಯ ಪುತ್ರ. ವಿಜಯ್‌ನ ಪಾಲಕರು ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರಿಂದ ಆತ ತನ್ನ ಚಿಕ್ಕಪ್ಪ ಶಿವರಾಜ್ ಮನೆಯಲ್ಲಿ ವಾಸವಿದ್ದರು. ಇಬ್ಬರ ಶವಗಳನ್ನೂ ಮುಳುಗು ತಜ್ಞರು ಹೊರತೆಗೆದಾಗ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಾಸನ: ಹೇಮಾವತಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ - Hassan Family Suicide

ETV Bharat Logo

Copyright © 2025 Ushodaya Enterprises Pvt. Ltd., All Rights Reserved.