ETV Bharat / state

ಉಡುಪಿ: ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ್ದ ತಂಡ; ಇಬ್ಬರು ಆರೋಪಿಗಳ ಬಂಧನ - FAKE IT OFFICERS ARREST - FAKE IT OFFICERS ARREST

ಜುಲೈ 25ರಂದು ಸುಮಾರು 6-8 ಜನ ಅಪರಿಚಿತರ ತಂಡ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಮಣೂರಿನ ಕವಿತಾ ಎಂಬವರ ಮನೆಗೆ ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆಗೆ ವಿಫಲ ಯತ್ನ ನಡೆಸಿ ವಾಪಸ್ ಹಿಂದಿರುಗಿತ್ತು.

arrested accused
ಬಂಧಿತ ಆರೋಪಿಗಳು (ETV Bharat)
author img

By ETV Bharat Karnataka Team

Published : Aug 22, 2024, 7:22 AM IST

Updated : Aug 22, 2024, 7:30 AM IST

ಉಡುಪಿ: ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಲು ಯತ್ನಿಸಿದ್ದ ತಂಡದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಚಿಕ್ಕಮಗಳೂರಿನ ಸಂತೋಷ್ ನಾಯಕ್ (45) ಮತ್ತು ಕಾಪು ಪೊಲಿಪು ನಿವಾಸಿ ದೇವರಾಜ್ ಸುಂದರ್ ಮೆಂಡನ್(46) ಎಂದು ಗುರುತಿಸಲಾಗಿದೆ‌.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಮಣೂರಿನಲ್ಲಿ ಜುಲೈ 25ರಂದು ಘಟನೆ ನಡೆದಿತ್ತು. ಆ ದಿನ ಬೆಳಗ್ಗೆ 8.30ರ ಹೊತ್ತಿಗೆ ಮಣೂರಿನ ಕವಿತಾ ಎಂಬವರ ಮನೆಗೆ ಆಗಂತುಕರ ತಂಡ ಐಟಿ ಅಧಿಕಾರಿಗಳ ಸೋಗಿನಲ್ಲಿ ನುಗ್ಗಿತ್ತು. ಸ್ವಿಫ್ಟ್ ಮತ್ತು ಇನೋವಾ ಕಾರುಗಳಲ್ಲಿ ಬಂದ ಸುಮಾರು 6-8 ಜನ ಅಪರಿಚಿತರ ತಂಡ ದರೋಡೆಗೆ ವಿಫಲ ಯತ್ನ ನಡೆಸಿ ವಾಪಸ್ ಹಿಂದಿರುಗಿತ್ತು. ಮಹಾರಾಷ್ಟ್ರದಲ್ಲಿ ಸಂಚು ರೂಪಿಸಿದ್ದ ಖದೀಮರು, ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ಕೃತ್ಯ ನಡೆಸುವ ಯೋಜನೆ ಹಾಕಿದ್ದರು.

ಆರೋಪಿಗಳ ಪತ್ತೆಗೆ ಕೋಟ ಠಾಣಾ ಪಿ.ಎಸ್.ಐ ಗುರುನಾಥ ಬಿ ಹಾದಿಮನಿ ಹಾಗೂ ಸುಧಾಪ್ರಭು ಮತ್ತು ಹಿರಿಯಡ್ಕ ಠಾಣಾ ಪಿಎಸ್‌ಐ ಮಂಜುನಾಥ ಅವರನ್ನು ಒಳಗೊಂಡ ಪ್ರತ್ಯೇಕ 3 ತಂಡಗಳನ್ನು ರಚಿಸಲಾಗಿತ್ತು. ತನಿಖೆಗಿಳಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಸಿಸಿ ಕ್ಯಾಮರಾದಲ್ಲಿ ಕಂಡುಬಂದ ಆರು ಜನರಲ್ಲಿ ಇಬ್ಬರು ಸೆರೆಯಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಇದನ್ನೂ ಓದಿ: ಉದ್ಯಮಿ ಮನೆಗೆ ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದ ಆಗಂತುಕರು: ತನಿಖೆಗೆ ಪ್ರತ್ಯೇಕ ಪೊಲೀಸ್ ತಂಡ ರಚನೆ - Fake Officers Raid

Last Updated : Aug 22, 2024, 7:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.