ETV Bharat / state

ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ಮಧ್ಯ ಬಂದು ನಿಂತ ಒಂಟಿಸಲಗ; ಟ್ರಾಫಿಕ್ ಜಾಮ್ - TUSKER ON ROAD - TUSKER ON ROAD

ಚಾರ್ಮಾಡಿ ಘಾಟ್​ನ 2ನೇ ತಿರುವಿನಲ್ಲಿ ಒಂಟಿ ಸಲಗವೊಂದು ತಿರುಗಾಡಿದೆ. ಇದರಿಂದಾಗಿ ಕೆಲಕಾಲ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದರು.

elephant
ಒಂಟಿ ಸಲಗ (ETV Bharat)
author img

By ETV Bharat Karnataka Team

Published : May 8, 2024, 4:49 PM IST

Updated : May 8, 2024, 5:06 PM IST

ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ಮಧ್ಯ ಬಂದು ನಿಂತ ಒಂಟಿಸಲಗ (ETV Bharat)

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಮತ್ತೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇಷ್ಟು ದಿನಗಳ ಕಾಲ ಕಾಫಿ, ಅಡಿಕೆ, ಬಾಳೆ, ಮೆಣಸಿನ ತೋಟಕ್ಕೆ ಲಗ್ಗೆ ಇಟ್ಟು ಸಂಪೂರ್ಣ ಹಾನಿ ಮಾಡುತ್ತಿದ್ದವು. ಈಗ ಪ್ರಮುಖ ರಸ್ತೆಗಳಿಗೆ ಬಂದು ಕಾಡಾನೆಗಳು ನಿಲ್ಲುತ್ತಿವೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ 2ನೇ ತಿರುವಿನಲ್ಲಿ ರಾಜಾರೋಷವಾಗಿ ಒಂಟಿ ಸಲಗವೊಂದು ಸುಳಿದಾಡುತ್ತಿರುವುದು ಕಂಡುಬಂದಿದೆ. ಹೀಗಾಗಿ ಈ ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ.

ರಸ್ತೆಯಲ್ಲಿ ಒಂಟಿ ಸಲಗದ ಓಡಾಟದಿಂದ ವಾಹನ ಸವಾರರು ಗಲಿಬಿಲಿ ಆಗಿದ್ದರು. ರಸ್ತೆ ಬಿಟ್ಟು ಒಂಟಿ ಸಲಗ ಕದಲದ ಹಿನ್ನೆಲೆ ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ವಾಹನಗಳು ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿತ್ತು. ಇದರಿಂದಾಗಿ ಕೆಲ ಕಾಲ ವಾಹನ ಸವಾರರು, ಬೈಕ್ ಸವಾರರು ಆತಂಕಕ್ಕೆ ಒಳಗಾಗಿದ್ದರು. ಈ ವಿಚಾರ ತಿಳಿದು ಸ್ಥಳಕ್ಕೆ ಬಾರದ ಅರಣ್ಯ ಸಿಬ್ಬಂದಿ ವಿರುದ್ಧ ಸ್ಥಳೀಯರು ಹಾಗೂ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಗಾಗ್ಗೆ ರಾಷ್ಟ್ರೀಯ ಹೆದ್ದಾರಿಗೆ ಈ ಕಾಡಾನೆ ಎಂಟ್ರಿ ಕೊಡುತ್ತಿದ್ದು, ದಕ್ಷಿಣ ಕನ್ನಡ-ಚಿಕ್ಕಮಗಳೂರು ಗಡಿಭಾಗದ ಚಾರ್ಮಾಡಿ ಘಾಟ್​ನ ರಸ್ತೆ ಕಾಡಾನೆಗಳ ಕಾರಿಡಾರ್ ಆಗುತ್ತಿದೆ. ಕೂಡಲೇ ಅರಣ್ಯ ಇಲಾಖೆ, ಸರ್ಕಾರ ಮತ್ತೆ ಕಾಡಾನೆಗಳು ಪ್ರಮುಖ ರಸ್ತೆಗಳಿಗೆ ಬಂದು ನಿಲ್ಲದ ಹಾಗೆ ಕ್ರಮ ಜರುಗಿಸಬೇಕು ಎಂದು ವಾಹನ ಸವಾರರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ವಿಡಿಯೋ: ಆನೆ ಆರ್ಭಟಕ್ಕೆ ಹೆದರಿ ಕೆರೆಯಿಂದ ಪೇರಿ ಕಿತ್ತ ಹುಲಿರಾಯ! - Tiger Escapes

Last Updated : May 8, 2024, 5:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.