ETV Bharat / state

ಹಂಪಿಯ ಸೊಬಗು ಸವಿಯಲು ಕನಿಷ್ಠ ಒಂದು ವಾರ ಬೇಕು: ಟರ್ಕಿ ದೇಶದ ರಾಯಭಾರಿಯ ಬಣ್ಣನೆ - FIRAT SUNEL VISITS HAMPI

ಹಂಪಿ ವೀಕ್ಷಣೆಗೆಂದು ಬಂದಿರುವ ಟರ್ಕಿ ದೇಶದ ರಾಯಭಾರಿ ಫಿರಾಟ್ ಸುನೆಲ್ ಇಲ್ಲಿನ ಸೌಂದರ್ಯಕ್ಕೆ ಮಾರುಹೋಗಿದ್ದಾರೆ.

Turkish Ambassador on two-day visit to Hampi
ಲಕ್ಷ್ಮಿ ಆನೆಯಿಂದ ಹೂವಿನ ಹಾರ ಹಾಕಿ ಸ್ವಾಗತ ಮಾಡಿದ ಕ್ಷಣ (ETV Bharat)
author img

By ETV Bharat Karnataka Team

Published : Dec 3, 2024, 3:47 PM IST

ವಿಜಯನಗರ: ಎರಡು ದಿನಗಳ ಕಾಲ ಹಂಪಿ ಪ್ರವಾಸ ಕೈಗೊಂಡಿರುವ ಟರ್ಕಿ ದೇಶದ ರಾಯಭಾರಿ ಹೆಚ್​. ಇ. ಫಿರಾಟ್ ಸುನೆಲ್ ಮತ್ತು ಹೈದರಾಬಾದ್‌ನ ಕೌನ್ಸೆಲ್ ಜನರಲ್ ಓರ್ಹನ್ ಯಲ್ಮನ್ ಓಕನ್ ಅವರು ಸುರಿಯುತ್ತಿರುವ ಮಳೆಯಲ್ಲೇ ಸ್ಮಾರಕಗಳನ್ನು ವೀಕ್ಷಣೆ ಮಾಡಿ ಕಣ್ತುಂಬಿಕೊಂಡರು.

ಮಂಗಳವಾರ ಬೆಳಗ್ಗೆ ವಿರೂಪಾಕ್ಷೇಶ್ವರ ದೇಗುಲದಲ್ಲಿ ಲಕ್ಷ್ಮಿ ಆನೆಯಿಂದ ಹೂವಿನ ಹಾರ ಹಾಕಿಸಿ ಸ್ವಾಗತ ಕೋರಲಾಯಿತು. ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು. ಆ ನಂತರ ಕೆಲ ಹೊತ್ತು ಚಕ್ರತೀರ್ಥದಲ್ಲಿ ದೋಣಿ ವಿಹಾರ ಮಾಡಿದರು. ಅಷ್ಟೊತ್ತಿಗೆ ಜಿಟಿ ಜಿಟಿ ಮಳೆ ಆರಂಭವಾಯಿತು. ನಂತರ ಕಮಲ್‌ ಮಹಲ್, ರಾಣಿ ಸ್ನಾನಗೃಹ, ಮಹಾನವಮಿ ದಿಬ್ಬ ಸೇರಿದಂತೆ ವಿವಿಧ ಸ್ಮಾರಕಗಳನ್ನು ಮಳೆಯಲ್ಲೇ ವೀಕ್ಷಿಸಿದರು.

Turkish Ambassador on two-day visit to Hampi
ಲಕ್ಷ್ಮಿ ಆನೆಯಿಂದ ಹೂವಿನ ಹಾರ ಹಾಕಿಸಿ ಸ್ವಾಗತ ಕೋರಿದ ಕ್ಷಣ (ETV Bharat)
Turkish Ambassador on two-day visit to Hampi
ಲಕ್ಷ್ಮಿ ಆನೆಯಿಂದ ಹೂವಿನ ಹಾರ ಹಾಕಿ ಸ್ವಾಗತ ಮಾಡಿದ ಕ್ಷಣ (ETV Bharat)

ವೀಕ್ಷಣೆ ಬಳಿಕ ಮಾತನಾಡಿದ ಅವರು, ಒಂದೆರಡು ದಿನದಲ್ಲಿ ನೋಡುವಂತ ಹಂಪಿಯಲ್ಲ. ಇಲ್ಲಿ ಕನಿಷ್ಠ ಒಂದು ವಾರಗಳ ಕಾಲ ಬೇಕಾಗುತ್ತದೆ. ಅಂದುಕೊಂಡಿದ್ದಕ್ಕಿಂತ ಹಂಪಿ ಅತ್ಯದ್ಭುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಧ್ಯಾಹ್ನದವರೆಗೆ ಹಂಪಿ ವೀಕ್ಷಿಸಿ ಆ ಬಳಿಕ ಬೇರೆಡೆ ಪ್ರಯಾಣ ಬೆಳೆಸಿದರು.

ಚಕ್ರತೀರ್ಥದಲ್ಲಿ ದೋಣಿ ವಿಹಾರ ಮಾಡಿದ ಕ್ಷಣ (ETV Bharat)

ಇದನ್ನೂ ಓದಿ: ಹಂಪಿ ವಿರೂಪಾಕ್ಷನ ಸನ್ನಿಧಿಯಲ್ಲಿ ಸೆಟ್ಟೇರಿತು ರಾಮ್ ಚರಣ್ ನಿರ್ಮಾಣದ ಚಿತ್ರ - The India House

ETV Bharat Logo

Copyright © 2025 Ushodaya Enterprises Pvt. Ltd., All Rights Reserved.