ETV Bharat / state

ತುಂಗಭದ್ರಾ ನದಿ ಭರ್ತಿ: ಉಕ್ಕಡಗಾತ್ರಿ ಸ್ನಾನಘಟ್ಟ, ಸೇತುವೆಗಳು ಜಲಾವೃತ - Davanagere Rain

ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ತುಂಗಾಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಧಾರ್ಮಿಕ ಕ್ಷೇತ್ರ ಉಕ್ಕಡಗಾತ್ರಿ ಬಳಿ ಸ್ನಾನಘಟ್ಟಗಳು, ಸೇತುವೆಗಳು ಜಲಾವೃತವಾಗಿವೆ.

RAIN IN KARNATAKA
ಜಲಾವೃತ ಪ್ರದೇಶ (ETV Bharat)
author img

By ETV Bharat Karnataka Team

Published : Jul 17, 2024, 7:59 AM IST

Updated : Jul 17, 2024, 10:09 AM IST

ದಾವಣಗೆರೆ: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ತುಂಗಾ ಜಲಾಶಯ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿದೆ.

ರಸ್ತೆ, ಸೇತುವೆಗಳು ಜಲಾವೃತವಾಗಿದ್ದು, ಸಂಚಾರಕ್ಕೆ ಅಡಚಣೆಯಾಗುತ್ತಿದೆ.‌ ವಾಹನ ಸವಾರರು ಸುತ್ತು ಹಾಕಿಕೊಂಡು ಮನೆ ಸೇರುತ್ತಿದ್ದಾರೆ.

ಹರಿಹರ ತಾಲೂಕಿನ ಧಾರ್ಮಿಕ ಕ್ಷೇತ್ರ ಉಕ್ಕಡಗಾತ್ರಿಯ ಸ್ನಾನಘಟ್ಟಗಳು ಮುಳುಗಿವೆ. ಕರಿಬಸವೇಶ್ವರ ದೇಗುಲದ ಬಳಿಕ 20ಕ್ಕೂ ಹೆಚ್ಚು ಅಂಗಡಿ-ಮುಂಗಟ್ಟುಗಳು ಮುಳುಗಡೆಯಾಗಿವೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕ್ಷಣದಿಂದ ಕ್ಷಣಕ್ಕೆ ನದಿ ನೀರಿನ ಮಟ್ಟವೂ ಹೆಚ್ಚುತ್ತಿದೆ.‌

ಉಕ್ಕಡಗಾತ್ರಿ ಹಾಗೂ ಹರಿಹರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ತುಂಗಭದ್ರಾ ನದಿ ನೀರಿನಿಂದ ಆವೃತವಾಗಿದೆ. ಹೊನ್ನಾಳಿ-ನ್ಯಾಮತಿ-ಹರಿಹರ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನದಿ ದಂಡೆ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.‌

ಇದನ್ನೂ ಓದಿ: ಚಿಕ್ಕಮಗಳೂರು: ಭಾರೀ ಮಳೆಯಿಂದ ಅವಾಂತರ, ಸೆ.30ರವರೆಗೆ ಪ್ರವಾಸಿ ತಾಣಗಳಲ್ಲಿ ಟ್ರೆಕ್ಕಿಂಗ್‌ ನಿಷೇಧ - TREKKING BAN

Last Updated : Jul 17, 2024, 10:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.