ETV Bharat / state

ದಾವಣಗೆರೆಯಲ್ಲಿ ಸಾಂಪ್ರದಾಯಿಕವಾಗಿ ಕಾಮದಹನ‌ ಮಾಡಿ ಹೋಳಿ ಆಚರಣೆಗೆ ಚಾಲನೆ - traditional kamadahana - TRADITIONAL KAMADAHANA

ದಾವಣಗೆರೆಯಲ್ಲಿ ಸಾಂಪ್ರದಾಯಿಕವಾಗಿ ಕಾಮದಹನ‌ ಮಾಡಲಾಯಿತು.

ದಾವಣಗೆರೆಯಲ್ಲಿ ಸಾಂಪ್ರದಾಯಿಕವಾಗಿ ಕಾಮದಹನ‌
ದಾವಣಗೆರೆಯಲ್ಲಿ ಸಾಂಪ್ರದಾಯಿಕವಾಗಿ ಕಾಮದಹನ‌
author img

By ETV Bharat Karnataka Team

Published : Mar 24, 2024, 11:04 PM IST

ದಾವಣಗೆರೆಯಲ್ಲಿ ಸಾಂಪ್ರದಾಯಿಕವಾಗಿ ಕಾಮದಹನ‌ ಮಾಡಿ ಹೋಳಿ ಆಚರಣೆಗೆ ಚಾಲನೆ

ದಾವಣಗೆರೆ: ಇಲ್ಲಿನ ಕೆ. ಆರ್ ಮಾರುಕಟ್ಟೆಯ ಅಕ್ಕಿ ಅಂಗಡಿಯ ವರ್ತಕರು ಕಾಮಣ್ಣನ ದಹನ ಮಾಡಿದ್ರು. ಈ ಮೂಲಕ ನಾಳೆ ಹೋಳಿಗೆ ಅಧಿಕೃತವಾಗಿ ಚಾಲನೆ ದೊರೆದಂತಾಗಿದೆ. ಒಂದು ಗೋಲಾಕಾರದ ಸಿಮೆಂಟ್ ಇಟ್ಟಿಗೆಗಳನ್ನು ಇರಿಸಿ ಅದರಲ್ಲಿ ಮೊದಲು ಕಟ್ಟಿಗೆ ಜೋಡಿಸಿ, ಅದರ ಮಧ್ಯ ಕಾಮಣ್ಣನ ಫೋಟೊವನ್ನು ಇರಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗ್ತಾ ಅಗ್ನಿ ಸ್ಪರ್ಶ ಮಾಡಲಾಯಿತು.

ಇನ್ನು ಅಗ್ನಿಸ್ಪರ್ಶ ಮಾಡುವ ಮೊದಲು ಇಡೀ ಅಕ್ಕಿ ಅಂಗಡಿ ವರ್ತಕರು ಆ ಕಾಮಣ್ಣನ ಸುತ್ತ ಸುತ್ತು ಹಾಕಿದ್ರು. ಅಲ್ಲದೆ ಬಾಯಿ ಬಡಿದುಕೊಂಡು ಕಾಮಣ್ಣನ ಮಕ್ಕಳೇ ಎಂದು ಕೂಗುವ ಮೂಲಕ ಕಾಮಣ್ಣನ ದಹನ ಮಾಡಲಾಯಿತು. ಈ ಮೊದಲು ಕಾಮಣ್ಣನ ದಹನ ಮಾಡಲು ಒಬ್ಬರು ದಹನ ಮಾಡಿದ ಅಗ್ನಿಯನ್ನು ಕದ್ದು ತಂದು ಅಗ್ನಿ ಸ್ಪರ್ಶ ಮಾಡ್ತಿದ್ದರು. ಆದರೆ ಆ ಪ್ರತೀತಿ ಇದೀಗ ಬಹುತೇಕ ಕಾಣೆಯಾಗಿದೆ. ಈ ಮೊದಲು ಕದ್ದು ತಂದ ಬೆಂಕಿಯಿಂದಲೇ ತಮ್ಮ ತಮ್ಮ ಕಾಮಣ್ಣನನ್ನು ಸುಡುತ್ತಿದ್ದನ್ನು ಕೈ ಬಿಡಲಾಗಿದೆ.

ದಾವಣಗೆರೆಯಲ್ಲಿ ಸಾಂಪ್ರದಾಯಿಕವಾಗಿ ಕಾಮದಹನ‌
ದಾವಣಗೆರೆಯಲ್ಲಿ ಸಾಂಪ್ರದಾಯಿಕವಾಗಿ ಕಾಮದಹನ‌

ಪಟ್ಟಿ ಎತ್ತಿ ಬಾಯಿ ಬಡಿದುಕೊಳ್ಳುವ ಪ್ರತೀತಿ ಮಾಯ: ಮೊದಲೆಲ್ಲ ಈ ಕಾಮಣ್ಣನ ದಹನಕ್ಕೂ ಮುನ್ನ ಮನೆ ಮನೆಗೆ ತೆರಳಿ ಕಾಮಣ್ಣನ ಪಟ್ಟಿ ಕೇಳಲಾಗುತ್ತಿತ್ತು.‌ ಪಟ್ಟಿ ಕೊಡಲಿಲ್ಲ ಎಂದರೆ ಆ ಮನೆ ಮುಂದೆ ಬಾಯಿ ಬಡಿದುಕೊಳ್ಳಲಾಗುತ್ತಿತ್ತು. ಅಲ್ಲದೆ ಬೆಂಕಿ ಕದ್ದು ತಂದು ಕಾಮಣ್ಣನಿಗೆ ಅಗ್ನಿ ಸ್ಪರ್ಶ ಮಾಡ್ತಿದ್ರು. ಆದರೆ ಇದೀಗ ಈ ಆಧುನಿಕ ಕಾಲದಲ್ಲಿ ಹೆಚ್ಚು ಯುವಕರಲ್ಲಿ ಈ ಆಚರಣೆ ಮಾಯವಾಗಿದೆ. ಇನ್ನು ನಾಳೆ ದಾವಣಗೆರೆಯಲ್ಲಿ ಅದ್ಧೂರಿಯಾಗಿ ರಂಗೋತ್ಸವ ನಡೆಯಲಿದೆ. ಯುವಕರು ಬಣ್ಣ ಎರಚಿ ಹೋಳಿ ಆಡುವ ಆಚರಣೆ ದಾವಣಗೆರೆಯಲ್ಲಿ ಮುಂದುವರೆದಿದೆ.

ಇದನ್ನೂ ಓದಿ: ಕಲಬುರಗಿ ಬಡಾವಣೆಯಲ್ಲಿ ಕಾಮದಹನ‌: ಹೋಳಿ ಸಂಭ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.