ETV Bharat / state

ಮೈಸೂರು ದಸರಾ: ಆಕರ್ಷಕ ಪಂಜಿನ ಕವಾಯತು, ರೋಮಾಂಚನಗೊಳಿಸಿದ ಬೈಕ್ ಸ್ಟಂಟ್​​ - DASARA TORCH LIGHT PARADE

ವಿಶ್ವವಿಖ್ಯಾತ ಮೈಸೂರು ದಸರಾ-2024ಕ್ಕೆ ಪಂಚಿನ ಕವಾಯತು ಕಾರ್ಯಕ್ರಮದ ಮೂಲಕ ಶನಿವಾರ ರಾತ್ರಿ ತೆರೆಬಿತ್ತು. ಪುರಾತನ ಪಂಜಿನ ಬೆಳಕಿನ ಜೊತೆಗೆ ಆಕಾಶದಲ್ಲಿ ಚಿತ್ತಾರ ಮೂಡಿಸಿದ 1,500 ಡ್ರೋನ್‌ಗಳನ್ನು ಕಂಡು ನೆರೆದಿದ್ದ ಪ್ರೇಕ್ಷಕರು ವಿಸ್ಮಯಗೊಂಡರು.

ETV Bharat
ಮೈಸೂರು ದಸರಾದಲ್ಲಿ ಮೈನವಿರೇಳಿಸಿದ ಬೈಕ್ ಸ್ಟಂಟ್ಸ್ (ETV Bharat)
author img

By ETV Bharat Karnataka Team

Published : Oct 13, 2024, 7:05 AM IST

Updated : Oct 13, 2024, 8:33 AM IST

ಮೈಸೂರು: ಇಲ್ಲಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ದಸರಾ ಪಂಜಿನ ಕವಾಯತು ನೆರೆದಿದ್ದ ಜನರನ್ನು ರೋಮಾಂಚನಗೊಳಿಸಿತು‌. ಪಂಜಿನ ಕವಾಯತಿನಲ್ಲಿ ನಡೆದ ನಾನಾ ಸಾಹಸ ದೃಶ್ಯಗಳನ್ನು ಕಣ್ತುಂಬಿಕೊಂಡು ಪ್ರೇಕ್ಷಕರು ಮೈಮರೆತರು.

ಧೂಳೆಬ್ಬಿಸಿದ ಬೈಕ್ ಸ್ಟಂಟ್ಸ್: ಮಿಲಿಟರಿ ಪೊಲೀಸರ ಶ್ವೇತಾಶ್ವ ತಂಡದ ಬೈಕ್ ಕಸರತ್ತು ನೋಡುಗರ ಮೈನವಿರೇಳಿಸಿತು. ಬೈಕ್​ನಲ್ಲಿ ನಾನಾ ಭಂಗಿಗಳಲ್ಲಿ ಕುಳಿತು, ನಿಂತು ಸಾಹಸ ಮೆರೆದ ಸೈನಿಕರು ವೀಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು. ಬೈಕಿನಲ್ಲೇ ನಿಂತು, ವ್ಯಾಯಾಮ ಮಾಡುತ್ತಾ, ಏಣಿ ಏರುತ್ತಾ, ಒಂಟಿ ಕಾಲಿನಲ್ಲಿ ಬೈಕ್ ಮೇಲೆ ಕಸರತ್ತು ಪ್ರದರ್ಶಿಸಿದರು. ತಂಡದ ಎಲ್ಲ ಸದಸ್ಯರೂ ವಿವಿಧ ಕಸರತ್ತಿನೊಂದಿಗೆ ಮಿಂಚಿನ ವೇಗದಲ್ಲಿ ಬೈಕ್ ಚಲಾಯಿಸಿ ಎದೆ ಝಲ್ಲೆನ್ನುವಂತೆ ಮಾಡಿದರು.

ಆಕರ್ಷಕ ಪಂಜಿನ ಕವಾಯತು, ರೋಮಾಂಚನಗೊಳಿಸಿದ ಬೈಕ್ ಸ್ಟಂಟ್​​ (ETV Bharat)

ಡ್ರೋನ್ ಶೋ ಆಕರ್ಷಣೆ: ಡ್ರೋನ್ ಪ್ರದರ್ಶನವು ರಾಷ್ಟ್ರಧ್ವಜ, ಚಂದ್ರಯಾನ, ಚಂದ್ರಯಾನ ಲ್ಯಾಂಡಿಂಗ್, ಸೌರವ್ಯೂಹ, ವಿಶ್ವ ಭೂಪಟ, ವಿಶ್ವ ಭೂಪಟದಲ್ಲಿ ಭಾರತ, ಸೈನಿಕರು, ಸೈನಿಕರು ಸೆಲ್ಯೂಟ್ ಮಾಡುವುದು, ಕರ್ನಾಟಕದ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲ, ಹದ್ದು, ಹುಲಿ, ಸಿಂಹದ ಮೇಲೆ ಕುಳಿತಿರುವ ಚಾಮುಂಡೇಶ್ವರಿ ಸೇರಿದಂತೆ ಹಲವು ವಿನ್ಯಾಸಗಳೊಂದಿಗೆ ಜನರಿಗೆ ಮುದ ನೀಡಿತು. ಒಮ್ಮೆಲೆ ಹಕ್ಕಿಗಳಂತೆ ಆಕಾಶದಲ್ಲಿ ಹಾರಲು ಶುರು ಮಾಡಿದ 1,500 ಡ್ರೋನ್‌ಗಳು ಪ್ರೇಕ್ಷಕರ ಚಿತ್ತವನ್ನು ತಮ್ಮತ್ತ ಸೆಳೆದವು.

torch light parade
ಆಕರ್ಷಕ ಪಂಜಿನ ಕವಾಯತು (ETV Bharat)

ಟೆಂಟ್ ಪೆಗ್ಗಿಂಗ್: ಅಶ್ವಾರೋಹಿ ದಳದ ಪೊಲೀಸರು ಪ್ರಸ್ತುತಪಡಿಸಿದ ಮ್ಯೂಸಿಕಲ್ ರೈಡ್, ಶೋ ಜಂಪಿಂಗ್ ಮತ್ತು ಟೆಂಟ್ ಪೆಗ್ಗಿಂಗ್‌ಗಳು ಪ್ರೇಕ್ಷಕರಿಗೆ ರೋಚಕ ಅನುಭವ ನೀಡಿದವು. ಇದೇ ಮೊದಲ ಬಾರಿಗೆ ಮ್ಯೂಸಿಕಲ್ ರೈಡ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೌಂಟೆಡ್ ಪೊಲೀಸರು ಒಮ್ಮೆಲೆ 30 ಕುದುರೆಗಳಿಂದ ವಿವಿಧ ನಡಿಗೆ ನಡೆಸಿದರು. ಕುದುರೆಗಳು ಹಿನ್ನೆಲೆ ಸಂಗೀತವನ್ನು ಆಲಿಸುತ್ತಲೇ ವಿವಿಧ ನಡೆಯನ್ನು ಪ್ರದರ್ಶಿಸಿದವು.

torch light parade
ಪಂಜಿನ ಕವಾಯತಿನಲ್ಲಿ ಆಕರ್ಷಕ ಕಾರ್ಯಕ್ರಮ (ETV Bharat)

ಪಂಜಿನ ಕವಾಯತಿನಲ್ಲಿ 14 ವರ್ಷಗಳ ಬಳಿಕ ಸಿಕ್ಸ್ ಬಾರ್ ಜಂಪಿಂಗ್ ಕೂಡ ನಡೆಯಿತು. ಕುದುರೆಗಳ ಮೇಲೆ ಕುಳಿತು, ಕೆಳಗೆ ನೆಟ್ಟಿದ್ದ ಉರಿಯುವ ಪಂಜುಗಳನ್ನು ಈಟಿಯಲ್ಲಿ ಕಿತ್ತುಕೊಳ್ಳುವ ಜಾಣ್ಮೆಯನ್ನು ನೋಡಿದ ಪ್ರೇಕ್ಷಕರು ಆಶ್ಚರ್ಯಚಕಿತರಾದರು. ಜೊತೆಗೆ ಒಬ್ಬೊಬ್ಬರಾಗಿ ಭೂಮಿಯಲ್ಲಿ ನೆಟ್ಟಿದ್ದ ಉರಿಯುವ ಗೂಟಗಳನ್ನು ವೇಗದ ಕುದುರೆ ಸವಾರಿ ಮೂಲಕವೇ ಈಟಿಯಿಂದ ಕಿತ್ತೊಯ್ದರೆ, ಕಡೆಯಲ್ಲಿ ಒಟ್ಟೊಟ್ಟಿಗೆ ಟೆಂಟ್ ಪೆಗ್ಗಿಂಗ್ ಮಾಡಿದ್ದಂತೂ ರೋಚಕವಾಗಿತ್ತು.

torch light parade
ಮೈಸೂರು ದಸರಾ ಪಂಜಿನ ಕವಾಯತು (ETV Bharat)

ಪಂಜಿನ ವಿವಿಧ ಆಕೃತಿ: ಕರ್ನಾಟಕ ಪೊಲೀಸ್ ಇಲಾಖೆಯ ಪಂಜಿನ ಕವಾಯತು ಕಾರ್ಯಕ್ರಮ ನೋಡಿ ಜನರು ಖುಷಿಪಟ್ಟರು. 300 ಪೊಲೀಸರು, 600 ಪಂಜುಗಳನ್ನು ಹಿಡಿದು ಮನಮೋಹಕ ದೃಶ್ಯಗಳು, ಅಕ್ಷರಾಕೃತಿಗಳನ್ನು ರಚಿಸಿದರು. ಪೊಲೀಸ್ ಬ್ಯಾಂಡ್ ಹಿಮ್ಮೇಳದಲ್ಲಿ ವಿವಿಧ ದೈಹಿಕ ಕಸರತ್ತುಗಳನ್ನು ಮಾಡುತ್ತಾ ವಿವಿಧ ವಿನ್ಯಾಸದ ಆಕೃತಿಗಳನ್ನು ಮೂಡಿಸಿದರು. ರಿಂಗ್ ರೋಟೇಷನ್, ಸುದರ್ಶನ ಚಕ್ರ, ಸ್ವಸ್ತಿಕ್, ಸ್ವಾಗತ, ಸುವರ್ಣ ಕರ್ನಾಟಕ 50, ಮೈಸೂರು ದಸರಾ 414, ಜೈ ಚಾಮುಂಡಿ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕರ್ನಾಟಕ ಪೊಲೀಸ್ ಆಲ್ವೆಸ್ ವಿತ್ ಯು, ಜೈ ಹಿಂದ್, ಥ್ಯಾಂಕ್ಯೂ ಅಕ್ಷರದ ಆಕೃತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

torch light parade
ಬೈಕ್ ಸ್ಟಂಟ್​​ (ETV Bharat)

ಸಾಂಸ್ಕೃತಿಕ ಕಾರ್ಯಕ್ರಮಗಳು: ಇದೇ ವೇಳೆ ನಡೆದ ವಿವಿಧ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಇಡೀ ದಸರಾ ವೈಭವಕ್ಕೆ ಮೆರುಗು ನೀಡಿದವು. 300ಕ್ಕೂ ಹೆಚ್ಚು ಕಲಾವಿದರು 15 ನಿಮಿಷಗಳ ಕಾಲ ನಾನಾ ಗೀತೆಗಳಿಗೆ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರಿಗೆ ರಸದೌತಣ ನೀಡಿದರು. ಕರಾವಳಿಯ ಯಕ್ಷಗಾನ, ಪಂಜಾಬಿ ನೃತ್ಯ, ಬುಡಕಟ್ಟು ಜನರ ನೃತ್ಯ, ಹುಲಿ ಕುಣಿತಾ, ವೆಸ್ಟರ್ನ್ ನೃತ್ಯ, ಭರತನಾಟ್ಯ ಸೇರಿದಂತೆ ನಾನಾ ನೃತ್ಯಗಳನ್ನು ಪ್ರದರ್ಶಿಸಿದರು.

torch light parade
ಬೈಕ್ ಸ್ಟಂಟ್​​ (ETV Bharat)

ಇದನ್ನೂ ಓದಿ: ವಿಜಯದಶಮಿ ಪ್ರಯುಕ್ತ ಅದ್ಧೂರಿಯಾಗಿ ಜರುಗಿದ ಶೋಭಾಯಾತ್ರೆ; ಡಿಜೆ ಸದ್ದಿಗೆ ಹೆಜ್ಜೆ ಹಾಕಿದ್ರು ಬೆಣ್ಣೆನಗರಿ ಯುವಕರು

ಲೇಸರ್ ಶೋ ಕೂಡ ಗಮನ ಸೆಳೆಯಿತು. ಹಂಪಿ, ಹೊಯ್ಸಳರ ಕಲೆ, ಶ್ರವಣಬೆಳಗೊಳದ ಗೊಮ್ಮಟೇಶ್ವರ, ಯಕ್ಷಗಾನ ವೇಷದಾರಿ, ಸರ್.ಎಂ.ವಿ., ಡಾ.ರಾಜ್​ಕುಮಾರ್, ಡಾ.ಪುನೀತ್ ರಾಜ್​ಕುಮಾರ್, ಗ್ಯಾರಂಟಿ ಯೋಜನೆಗಳು ಸೇರಿದಂತೆ ನಾನಾ ಕಲಾಕೃತಿಗಳನ್ನು ರಚಿಸಲಾಯಿತು.

torch light parade
ಗೌರವ ವಂದನೆ ಸ್ವೀಕರಿಸಿದ ರಾಜ್ಯಪಾಲರು (ETV Bharat)

ಗಮನ ಸೆಳೆದ ಪರೇಡ್: ಅಶ್ವಾರೋಹಿ ಪಡೆಯ ಎರಡು ದಳ, ಕೆಎಸ್‌ಆರ್‌ಪಿ ತುಕಡಿಗಳು, ನಗರ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ, ಪೊಲೀಸ್ ಬ್ಯಾಂಡ್ ಸೇರಿದಂತೆ 18 ತುಕಡಿಗಳಿಂದ ನಡೆದ ಪರೇಡ್ ಗಮನ ಸೆಳೆಯಿತು. ಈ ವೇಳೆ ಮೂರು ಸುತ್ತು 21 ಕುಶಾಲತೋಪುಗಳನ್ನು ಸಿಡಿಸಲಾಯಿತು. ಹಲವು ವಿಶೇಷಗಳೊಂದಿಗೆ ಚಿಣ್ಣರ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ 2024ರ ದಸರಾ ಮಹೋತ್ಸವಕ್ಕೆ ವಿದಾಯ ಹೇಳಲಾಯಿತು.

torch light parade
ಪೊಲೀಸರ ಶ್ವೇತಾಶ್ವ ತಂಡ (ETV Bharat)

ಇದನ್ನೂ ಓದಿ: ಅಂಬು ಛೇದನ ಮಾಡಿದ ತಹಶೀಲ್ದಾರ್ ಗಿರೀಶ್: ಶಿವಮೊಗ್ಗ ದಸರಾ ಸಂಪನ್ನ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಥ ಸಂಚಲನದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ವೆಂಕಟೇಶ್, ಡಾ.ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಸುನೀಲ್ ಬೋಸ್, ಶಾಸಕ ತನ್ವೀರ್ ಸೇಠ್, ವಿಧಾನಪರಿಷತ್ ಸದಸ್ಯರಾದ ಗೋವಿಂದ ರಾಜು, ಡಾ.ಡಿ.ತಿಮ್ಮಯ್ಯ ಇದ್ದರು.

ಇದನ್ನೂ ಓದಿ: ಮೈಸೂರು : ಆಕರ್ಷಕ ಸ್ತಬ್ಧಚಿತ್ರಕ್ಕೆ ಮನಸೋತ ಜನ, ಪ್ರವಾಸಿಗರು

Last Updated : Oct 13, 2024, 8:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.