ETV Bharat / state

ಮಂಡ್ಯ: ವಿಜೃಂಭಣೆಯಿಂದ ನಡೆದ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವ, ತಾವರೆ ಎಲೆ ಪಂಕ್ತಿ ಭೋಜನ - topina timmappa uthsava

ಐತಿಹಾಸಿಕ ಹಿನ್ನೆಲೆಯ ತೋಪಿನ‌ ತಿಮ್ಮಪ್ಪನ ಹರಿಸೇವೆ ಉತ್ಸವದ ಪ್ರಯುಕ್ತ ಭಕ್ತರಿಗೆ ತಾವರೆ ಎಲೆ ಪ್ರಸಾದ ವಿತರಿಸಲಾಯಿತು.

ವಿಜೃಂಭಣೆಯಿಂದ ನಡೆದ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವ
ವಿಜೃಂಭಣೆಯಿಂದ ನಡೆದ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವ (ETV Bharat)
author img

By ETV Bharat Karnataka Team

Published : Jul 14, 2024, 8:32 PM IST

ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವ (Etv Bharat)

ಮಂಡ್ಯ: ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ತೋಪಿನ‌ ತಿಮ್ಮಪ್ಪನ ಹರಿಸೇವೆ ಉತ್ಸವ ವಿಜೃಂಭಣೆಯಿಂದ ನಡೆಯಿತು. ಆಷಾಢ ಮಾಸದಲ್ಲಿ ಪ್ರತಿ ವರ್ಷ ಈ ಗ್ರಾಮದಲ್ಲಿ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವನ್ನು ಜನರು ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಉತ್ಸವದ ಪ್ರಯುಕ್ತ ಬಂದ ಭಕ್ತರಿಗೆ ತಾವರೆ ಎಲೆ ಪ್ರಸಾದ ವಿತರಿಸಲಾಯಿತು.

ಇಲ್ಲಿ ಪ್ರತಿ ವರ್ಷದ ಹಲವು ಗ್ರಾಮಗಳಿಂದ ಬಂದ ಬರುವ ಸಾವಿರಾರು ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ತಮ್ಮ ಹರಿಕೆ ತೀರಿಸುತ್ತಾರೆ. ಉತ್ಸವ ಹಿನ್ನೆಲೆ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಿಲಾಗಿತ್ತು. ಉತ್ಸವದ ಪ್ರಯುಕ್ತ ಸಾವಿರಾರು ಭಕ್ತರಿಗೆ ತಾವರೆ ಎಲೆಯಲ್ಲಿ ಅನ್ನ, ಅವರೆ ಕಾಳಿನ ಸಾಂಬಾರ್ ಅನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ‌. ಹರಿಸೇವೆಗೆ ಬಂದ ಸಾವಿರಾರು ಭಕ್ತರು ಸಾಮೂಹಿಕವಾಗಿ ದೇವಾಲಯದ ಆವರಣದಲ್ಲಿ ಸಾಲಾಗಿ ಕುಳಿತು ತಾವರೆ ಎಲೆಯಲ್ಲಿ ದೇವರ ಪ್ರಸಾದ ಸೇವಿಸುತ್ತಾರೆ.

ದೇವಾಲಯದ ಟ್ರಸ್ಟಿ ರುದ್ರೇಶ್ ಮಾತನಾಡಿ, ಆಬಲವಾಡಿ ಗ್ರಾಮದ ತೋಪಿನ‌ ತಿಮ್ಮಪ್ಪನ ಹರಿಸೇವೆ ಪ್ರಯುಕ್ತ ತಾವರೆ ಎಲೆಯಲ್ಲಿ ಅನ್ನ ಪ್ರಸಾದವನ್ನು ವಿತರಿಸಲಾಗುತ್ತದೆ. ನಾರಾಯಣ ತನ್ನ ಶಯನಗೃಹಕ್ಕೆ ಹೋಗಲು ಪ್ರಸಾದ ವಿತರಣೆ ಮಾಡುತ್ತಾರೆ. ಇದು ತುಂಬಾ ಶ್ರೇಷ್ಟವಾಗಿದೆ. ಹೀಗಾಗಿ ರಾಜ್ಯದ ಮೂಲೆಮೂಲೆಯಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ಪ್ರಸಾದ ಸ್ವೀಕರಿಸುತ್ತಾರೆ. ಇಲ್ಲಿ 50 ರಿಂದ 60 ಕೊಪ್ಪರಿಗೆ ಅನ್ನ ಸಂತರ್ಪಣೆ ನಡೆಯುತ್ತದೆ. 40 ರಿಂದ 50 ಹಂಡೆ ಸಾಂಬಾರ್​ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಉಡುಪಿ: ಕಾಣಿಕೆ ಡಬ್ಬಿ ಕದ್ದ ಕಳ್ಳನನ್ನು 24 ಗಂಟೆಯೊಳಗೆ ಹುಡುಕಿಕೊಟ್ಟ ದೈವ - thief arrested

ETV Bharat Logo

Copyright © 2024 Ushodaya Enterprises Pvt. Ltd., All Rights Reserved.