ETV Bharat / state

ನಿರಂತರ ಮಳೆಯಿಂದ ರಾಜ್ಯದ ಜಲಾಶಯಗಳಿಗೆ ಜೀವಕಳೆ: ಅಣೆಕಟ್ಟೆಗಳ ಇಂದಿನ ನೀರಿನ ಮಟ್ಟ ಹೀಗಿದೆ - Water Level - WATER LEVEL

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗುತ್ತಿವೆ. ಯಾವ ಯಾವ ಜಲಾಶಯಗಳು ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ ಎಂಬ ಮಾಹಿತಿ ಇಲ್ಲಿದೆ.

MAJOR RESERVOIRS OF KARNATAKA
ರಾಜ್ಯದ ಪ್ರಮುಖ ಜಲಾಶಯಗಳು (IANS)
author img

By ETV Bharat Karnataka Team

Published : Jul 20, 2024, 3:12 PM IST

Updated : Jul 20, 2024, 5:31 PM IST

ಬೆಂಗಳೂರು: ಸತತ ಮಳೆಯಿಂದ ರಾಜ್ಯದ ಜಲಾಶಯಗಳ ನೀರಿನಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದೆ. ಹಲವು ಜಲಾಶಯಗಳು ಈಗಾಗಲೇ ಬಹುತೇಕ ಭರ್ತಿಯಾಗಿವೆ. ಜು.20 ವೇಳೆಗೆ ಜಲಾಶಯಗಳ ನೀರಿನಮಟ್ಟ ಎಷ್ಟು ಎಂಬುದನ್ನು ನೋಡೋಣ.

ಆಲಮಟ್ಟಿ ಜಲಾಶಯದ ಇಂದಿನ ನೀರಿನ‌ ಮಟ್ಟ (ವಿಜಯಪುರ):

  • ಜಲಾಶಯದ ಗರಿಷ್ಠ ನೀರಿನ ಮಟ್ಟ : 123.081 ಟಿಎಂಸಿ
  • ಇಂದಿನ ಜಲಾಶಯದಲ್ಲಿನ ನೀರಿನ ಮಟ್ಟ : 97.416 ಟಿಎಂಸಿ
  • ಜಲಾಶಯದ ಒಟ್ಟು ಎತ್ತರ : 519.60 ಮೀ.
  • ಇಂದಿನ ಜಲಾಶಯದಲ್ಲಿನ‌ ನೀರಿನ ಪ್ರಮಾಣ : 517.98 ಮೀ.
  • ಇಂದಿನ ನೀರಿನ ಒಳ ಹರಿವು : 65,480 ಕ್ಯೂಸೆಕ್
  • ಇಂದಿನ‌ ನೀರಿನ ಹೊರ ಹರಿವು : 65,480 ಕ್ಯೂಸೆಕ್

ನವೀಲು ತೀರ್ಥ ಜಲಾಶಯ (ಬೆಳಗಾವಿ):

  • ಜಲಾಶಯದ ಗರಿಷ್ಠ ನೀರಿನ ಮಟ್ಟ : 2079.50 ಅಡಿ (37.731 ಟಿಎಂಸಿ)
  • ಇಂದಿನ ನೀರಿ‌ನ ಮಟ್ಟ: 17.220 ಟಿಎಂಸಿ (2060.80 ಅಡಿ)
  • ಒಳಹರಿವು: 15,090 ಕ್ಯೂಸೆಕ್
  • ಹೊರ ಹರಿವು: 194 ಕ್ಯೂಸೆಕ್
    MAJOR RESERVOIRS OF KARNATAKA
    ರಾಜ್ಯದ ಪ್ರಮುಖ ಜಲಾಶಯಗಳು (ETV Bharat)

ಘಟಪ್ರಭಾ ನದಿ, ಹಿಡಕಲ್ ಜಲಾಶಯ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ : 2175 ಅಡಿ (51 ಟಿಎಂಸಿ)
  • ಇಂದಿನ ನೀರಿ‌ನ ಮಟ್ಟ: 31.566 ಟಿಎಂಸಿ (2147.850 ಅಡಿ)
  • ಒಳಹರಿವು: 25,697 ಕ್ಯೂಸೆಕ್
  • ಹೊರ ಹರಿವು: 1,630 ಕ್ಯೂಸೆಕ್

ಕಬಿನಿ ಜಲಾಶಯ (ಮೈಸೂರು):

  • ಜಲಾಶಯದ ಗರಿಷ್ಠ ನೀರಿನ ಮಟ್ಟ : 2284 ಅಡಿ
  • ಇಂದಿನ ಮಟ್ಟ : 2280.76 ಅಡಿ
  • ಒಳಹರಿವು : 45,658 ಕ್ಯೂಸೆಕ್
  • ಹೊರ ಹರಿವು : 40,292 ಕ್ಯೂಸೆಕ್

ಕೆಆರ್​ಎಸ್​​ ಜಲಾಶಯ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ : 124 ಅಡಿ
  • ಇಂದಿನ ಮಟ್ಟ : 119.90 ಅಡಿ
  • ಒಳಹರಿವು : 51,375 ಕ್ಯೂಸೆಕ್
  • ಹೊರ ಹರಿವು : 4,714 ಕ್ಯೂಸೆಕ್

ತುಂಗಾ ಜಲಾಶಯ (ಶಿವಮೊಗ್ಗ):

  • ಜಲಾಶಯದ ಗರಿಷ್ಠ ನೀರಿನ ಮಟ್ಟ : 588.24 ಮೀಟರ್
  • ಇಂದಿನ ನೀರಿನ ಮಟ್ಟ: 3.24 ಕ್ಯೂಸೆಕ್
  • ಒಳ ಹರಿವು : 65,796 ಕ್ಯೂಸೆಕ್
  • ಹೊರ ಹರಿವು : 68,654 ಕ್ಯೂಸೆಕ್

ಭದ್ರಾ ಜಲಾಶಯ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ : 186 ಅಡಿ
  • ಇಂದಿನ ನೀರಿನ ಮಟ್ಟ : 162.3 ಅಡಿ
  • ಒಳ ಹರಿವು : 46,876 ಕ್ಯೂಸೆಕ್
  • ಹೊರ ಹರಿವು : 186 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ:

  • ಜಲಾಶಯದ ಗರಿಷ್ಠ ನೀರಿನ ಮಟ್ಟ : 1819
  • ಇಂದಿನ ನೀರಿನ ಮಟ್ಟ : 1794.30 ಅಡಿ
  • ಒಳ ಹರಿವು : 69.724 ಕ್ಯೂಸೆಕ್
  • ಹೊರ ಹರಿವು : ಇಲ್ಲ

ರಾಜ್ಯದಲ್ಲಿಯೇ ಬೇಗನೇ ತುಂಬಿ‌ ಹರಿಯುವ ತುಂಗಾ ಅಣೆಕಟ್ಟೆಗೆ ಸಂಸದ ಬಿ.ವೈ.ರಾಘವೇಂದ್ರ ಇಂದು ಬಾಗಿನ ಅರ್ಪಿಸಿದರು. ಬಾಗಿನಕ್ಕೂ ಮುನ್ನಾ ತುಂಗಾ ನದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ತುಂಗಾ ನದಿಗೆ ಅಣೆಕಟ್ಟೆಯ ಮೇಲ್ಭಾಗದಲ್ಲಿ ನಿಂತು ಬಾಗಿನ ಅರ್ಪಿಸಲಾಯಿತು. ಸಂಸದರ ಜೊತೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಶಾಸಕರಾದ ಚನ್ನಬಸಪ್ಪ, ಡಿ.ಎಸ್.ಅರುಣ್, ಮಾಜಿ ಶಾಸಕರಾದ ಕೆ.ಬಿ.ಅಶೋಕ ನಾಯ್ಕ್ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

ಧಾರವಾಡ ಜಿಲ್ಲೆಯಲ್ಲಿ ಸಹ ದಿನದಿಂದ ದಿನಕ್ಕೆ ಮಳೆ ಹೆಚ್ಚಾಗುತ್ತಿದ್ದು, ಯಾವುದೇ ಸಂದರ್ಭದಲ್ಲಿ ಪ್ರವಾಹ ಪತಿಸ್ಥಿತಿ ಎದುರಾಗಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡ ಜಿಲ್ಲಾಡಳಿತ ಪ್ರವಾಹ ಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಗೆ ಒಂದು ಎನ್‌ಡಿಆರ್‌ಎಫ್ ತಂಡವನ್ನು ಮೀಸಲು ಇಡಲಾಗಿದೆ. ಜನರನ್ನು ರಕ್ಷಿಸಬಹುದು ಎಂಬುದರ ಕುರಿತು ಅಣಕು ಪ್ರದರ್ಶನ ಮಾಡುವ ಮೂಲಕ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಜಿಲ್ಲಾಡಳಿತ ಮಾಡಿದೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಒಟ್ಟು 13 ಸೇತುವೆಗಳು ಮುಳುಗಡೆಯಾಗಿವೆ. ಸಂಕೇಶ್ವರ-ಗಡಹಿಂಗ್ಲಜ ಸಂಪರ್ಕಿಸುವ ಸೇತುವೆ, ಕುಲಗೋಡ-ಮಹಾಲಿಂಗಪುರ ಸಂಪರ್ಕ ಸೇತುವೆ, ಲೋಳಸೂರ-ಶಿಂಗ್ಲಾಪುರ ಹಾಗೂ ಯರನಾಳ-ಹುಕ್ಕೇರಿ ಸಂಪರ್ಕಿಸುವ ಸೇತುವೆಗಳು ಮುಳುಗಡೆಯಾಗಿವೆ. ಅದೇ ರೀತಿ ಚಿಕ್ಕೋಡಿ ಉಪವಿಭಾಗದಲ್ಲಿ ಬರುವ ಬೋಜ್-ಕರಜಗಾ, ಬೋಜವಾಡಿ-ನಿಪ್ಪಾಣಿ, ಮಲ್ಲಿಕವಾಡ-ದನವಾಡ, ಬಾರವಾಡ-ಕುನ್ನೂರ, ಬೋಜ್-ಕುನ್ನೂರ, ಜತ್ರಾಟ-ಭೀವಶಿ, ರಾಯಭಾಗ ತಾಲೂಕಿನ ಭಾವನಸವದತ್ತಿ-ಮಾಂಜರಿ ಸಂಪರ್ಕಿಸುವ ರಸ್ತೆಗಳು ಮುಳುಗಡೆಯಾಗಿವೆ.

ಕಳೆದ ಮೂರು ದಿನಗಳಿಂದ ದ.ಕ.ಜಿಲ್ಲೆಯಾದ್ಯಂತ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ನಿನ್ನೆ ರಾತ್ರಿಯಿಂದ ಮಳೆ ಕೊಂಚ ತಗ್ಗಿದೆ. ನೆರೆಯ ಭೀತಿಯಲ್ಲಿದ್ದ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಇಳಿಮುಖವಾಗಿದೆ.

ಇದನ್ನೂ ಓದಿ: ಮುಳುಗಿದ ಜಾಕ್​ವೆಲ್: ಗುಂಡ್ಲು ಪೇಟೆಯ ನೂರಾರು ಗ್ರಾಮಗಳಿಗೆ 45 ದಿನ ನೀರಿನ ವ್ಯತ್ಯಯ - Water crisis

Last Updated : Jul 20, 2024, 5:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.