ETV Bharat / state

ಬಾಗಲಕೋಟೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿ ತಮಿಳುನಾಡಿನಲ್ಲಿ ಪತ್ತೆ; ಕುಟುಂಬ ಸೇರಲು ಲಾಕ್​ಡೌನ್​ ನೆರವಾಗಿದ್ದು ಹೇಗೆ? - KARNATAKA MAN RESCUED IN TAMIL NADU - KARNATAKA MAN RESCUED IN TAMIL NADU

ಮಾನಸಿಕ ಸ್ಥಿಮಿತ ಕಳೆದುಕೊಂಡು ರಸ್ತೆಯಲ್ಲಿ ಅಲೆಯುತ್ತಿದ್ದ ರಾಜ್​ ಮೊಹಮ್ಮದ್​ ಅವರನ್ನು ಕೋವಿಡ್​ ಲಾಕ್​ಡೌನ್​ನಲ್ಲಿ ವೈದ್ಯರು ವಶಕ್ಕೆ ಪಡೆದು, ಚಿಕಿತ್ಸೆ ನೀಡಿದರು.

tirupattur-district-collector-handed-over-a-man-from-karnataka-who-went-missing-15-years-ago-to-his-family
ಬಾಗಲಕೋಟೆಯಿಂದ ನಾಪತ್ತೆಯಾದ ವ್ಯಕ್ತಿ ತಮಿಳುನಾಡಿನಲ್ಲಿ ಪತ್ತೆ ((ಈಟಿವಿ ಭಾರತ್​​))
author img

By ETV Bharat Karnataka Team

Published : May 30, 2024, 2:15 PM IST

Updated : May 30, 2024, 9:13 PM IST

ತಿರುಪತ್ತೂರು(ತಮಿಳುನಾಡು): 15 ವರ್ಷದ ಹಿಂದೆ ಬಾಗಲಕೋಟೆ ಜಿಲ್ಲೆಯ ಕಂದಗಲ್ ಗ್ರಾಮದ ನಿವಾಸಿ ರಾಜ್​ ಮೊಹಮ್ಮದ್​ (ಪ್ರಸ್ತುತ 46 ವಯಸ್ಸು) ಕಾಣೆಯಾದಾಗ ಅವರಿಗಾಗಿ ಕುಟುಂಬ ಹುಡುಕದ ಜಾಗವಿಲ್ಲ. ಈ ಸಂಬಂಧ ಕುಟುಂಬಸ್ಥರು ಪೊಲೀಸ್​ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದರು. ಪೊಲೀಸರು ಕೂಡ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಹುಡುಕಲು ಅವಿರಹಿತ ಪ್ರಯತ್ನ ನಡೆಸಿ ಬಳಿಕ ಪ್ರಕರಣವನ್ನು ಕೈಬಿಟ್ಟಿದ್ದರು. ಕುಟುಂಬಸ್ಥರಿಗೂ ಕೂಡ ರಾಜ್ ಮತ್ತೆ ಸಿಗುತ್ತಾರೆ ಎಂಬ ಭರವಸೆ ಇರಲಿಲ್ಲ. ಆದರೆ, ಇದೀಗ ಕಳೆದುಹೋದ ವ್ಯಕ್ತಿ ಅಚಾನಕ್​ ಆಗಿ ತಮಿಳುನಾಡಿನಲ್ಲಿ ಪತ್ತೆಯಾಗಿರುವ ಸಂಬಂಧ ಕರೆ ಬಂದಿದ್ದು, ಕುಟುಂಬಸ್ಥರಲ್ಲಿ ಹರ್ಷದ ಜೊತೆ ಅಚ್ಚರಿ ಕೂಡ ವ್ಯಕ್ತವಾಗಿದೆ.

ಏನಿದು ಕಥೆ: ಮೊದಲ ಕೋವಿಡ್​ ಅಲೆಯಲ್ಲಿ ದೇಶವೇ ಲಾಕ್​ ಡೌನ್​ ಆದ ಸಂದರ್ಭದಲ್ಲಿ 2020ರ ಜೂನ್​ 6ರಂದು ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ವಲಜಾ ಎಂಬ ಸ್ಥಳದಲ್ಲಿ ರಾಜ್​ ಮೊಹಮ್ಮದ್​ ಅಲೆದಾಡುತ್ತಿದ್ದರು. ಹೀಗಾಗಿ ಅವರನ್ನು ವೈದ್ಯರು ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.

ಕುಟುಂಬ ಸೇರಿದ ವ್ಯಕ್ತಿ
ಕುಟುಂಬ ಸೇರಿದ ವ್ಯಕ್ತಿ (ETV Bharat​​)

ಆ ಸಂದರ್ಭದಲ್ಲಿ ರಾಜ್​ ಮೊಹಮ್ಮದ್​ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಸ್ಥಿಮಿತ ಕಳೆದುಕೊಂಡಿದ್ದರು. ಈ ಹಿನ್ನೆಲೆ ವೈದ್ಯರು ತಿರುಪತ್ತೂರು ಮಾನಸಿಕ ಅಸ್ವಸ್ಥರಿಗಾಗಿ ಇದ್ದ ‘ಉಧವುಮ್ ಉಲ್ಲಂಗಲ್' ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು.

ಇಲ್ಲಿ ಚಿಕಿತ್ಸೆ ಪಡೆದ ಬಳಿಕ ರಾಜ್​ ಮೊಹಮ್ಮದ್​ ನಿಧಾನವಾಗಿ ಚೇತರಿಕೆ ಕಾಣಲಾರಂಭಿಸಿದರು. ಅವರಿಗೆ ನೆನಪು ಮರಳಿ ಬರುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿ ಕೂಡ ಅವರ ಪೂರ್ವಾಪುರ ಪರಿಶೀಲನೆ ನಡೆಸಿದರು. ಆಗ ತಾನು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಕಂದಗಲ್ ಗ್ರಾಮದ ನಿವಾಸಿ ಎಂದು ತಿಳಿಸಿದರು.

ಈ ವಿಷಯ ಸಂಗ್ರಹಿಸಿದ ಬಳಿಕ ಬಾಗಲಕೋಟೆಯಲ್ಲೂ ಅವರ ಮತದಾರರ ಚೀಟಿಯ ದಾಖಲಾತಿ ಪರಿಶೀಲಿಸಲಾಗಿದ್ದು, ಅವರ ಮನೆಯ ವಿಳಾಸ ಪತ್ತೆ ಮಾಡಿದ್ದಾರೆ. ಇದಾದ ಬಳಿಕ ಅವರು ಕಂದಗಲ್​ ಮತ ಕೇಂದ್ರದ ಅಧಿಕಾರಿಯನ್ನು ಸಂಪರ್ಕಿಸಿ ರಾಜ್​ ಮೊಹಮ್ಮದ್​ ಕುಟುಂಬಸ್ಥರಿಗೆ ಮಾಹಿತಿ ತಲುಪಿಸಿದ್ದಾರೆ.

ಇದರ ಆಧಾರದ ಮೇಲೆ ರಾಜ್​ ಮೊಹಮ್ಮದ್​ ಕುಟುಂಬಸ್ಥರು ಸಂಬಂಧಿತ ದಾಖಲಾತಿಯೊಂದಿಗೆ ತಿರುಪತ್ತೂರು ಜಿಲ್ಲೆಯ ಪುನರ್ವಸತಿ ಕೇಂದ್ರಕ್ಕೆ ಆಗಮಿಸಿದರು. ದಾಖಲಾತಿ ದೃಢೀಕರಣದ ಬಳಿಕ ತಿರುಪತ್ತೂರು ಜಿಲ್ಲಾಧಿಕಾರಿ ಪ್ರಕಾಶ್​ರಾಜ್​ ರಾಜ್​ ಮೊಹಮ್ಮದ್​ ಅವರನ್ನು ಕುಟುಂಬಸ್ಥರಿಗೆ ಒಪ್ಪಿಸಿದರು. 15 ವರ್ಷದ ಬಳಿಕ ರಾಜ್​ ಅವರನ್ನು ಕಂಡ ಕುಂಟುಬಸ್ಥರು ಸಂತಸ ವ್ಯಕ್ತಪಡಿಸಿ, ಮರಳಿ ಕುಟುಂಬ ಸೇರಿದ ರಾಜ್​ ಮೊಹಮ್ಮದ್​ ಕೂಡ ಭಾವುಕರಾದರು.

ಇದನ್ನೂ ಓದಿ: ಹಾವೇರಿಯಲ್ಲಿ ಹೆಚ್ಚಿದ ಡೆಂಗ್ಯೂ, 14 ವರ್ಷದೊಳಗಿನ ಮಕ್ಕಳಿಗೆ ಬಾಧೆ; ಸುರಕ್ಷತೆಗೆ ವೈದ್ಯರ ಸಲಹೆ

Last Updated : May 30, 2024, 9:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.