ETV Bharat / state

ಗಂಗಾವತಿ: ಹಳಿ ಮೇಲೆ ಮೈಮರೆತು ಮಲಗಿದ್ದಾಗ ರೈಲು ಹರಿದು ಮೂವರು ಯುವಕರು ಸಾವು! - Three Youths Run Over By Train

author img

By ETV Bharat Karnataka Team

Published : Jul 19, 2024, 9:55 AM IST

Updated : Jul 19, 2024, 10:32 AM IST

ತಮಾಷೆಗಾಗಿ ಹಳಿ ಮೇಲೆ ಮೈಮರೆತು ಮಲಗಿದ್ದಾಗ ರೈಲು ಹರಿದು ಮೂವರು ಯುವಕರು ಮೃತಪಟ್ಟ ಘಟನೆ ಗಂಗಾವತಿಯಲ್ಲಿ ನಡೆದಿದೆ.

ರೈಲು ಹರಿದು ಮೂವರು ಯುವಕರು ಸಾವು
ರೈಲು ಹರಿದು ಸಾವನ್ನಪ್ಪಿದ ಯುವಕರು (ETV Bharat)

ಗಂಗಾವತಿ: ಔತಣಕೂಟದ ಬಳಿಕ ತಮಾಷೆಗೆಂದು ಹಳಿ ಮೇಲೆ ಮಲಗಿದ್ದಾಗ ರೈಲು ಹರಿದು ಮೂವರು ಯುವಕರು ಮೃತಪಟ್ಟ ಘಟನೆ ಇಲ್ಲಿನ ರೈಲ್ವೆ ಸ್ಟೇಷನ್ ಸಮೀಪ ಗುರುವಾರ ತಡರಾತ್ರಿ ನಡೆದಿದೆ.

ನಗರದ ಕಿಲ್ಲಾ ಏರಿಯಾದ ಮೌನೇಶ ಶ್ರೀನಿವಾಸ ಬೈಲ್ ಪತ್ತಾರ (23), ಅಣ್ಣೂರು ಗೌರಮ್ಮ ಕ್ಯಾಂಪಿನ ಸುನಿಲ್ ತಿಮ್ಮಣ್ಣ (23) ಹಾಗೂ ಹಿರೇಜಂತಕಲ್​​ನ ವೆಂಕಟ ಭೀಮರಾಯ ಮಂಗಳೂರು (20) ಮೃತಪಟ್ಟವರು.

ರೈಲ್ವೆ ಹಳಿಯ ಪಕ್ಕದಲ್ಲಿ ಯುವಕರು ಔತಣಕೂಟ ಮಾಡಿದ್ದಾರೆ. ಬಳಿಕ ತಮಾಷೆಗೆಂದು ಹಳಿಯ ಮೇಲೆಯೇ ಮಲಗಿದ್ದಾರೆ. ಈ ಸಂದರ್ಭದಲ್ಲಿ ಗಂಗಾವತಿ ಮಾರ್ಗವಾಗಿ ಹೊರಟಿದ್ದ ಹುಬ್ಬಳ್ಳಿ-ಸಿಂಧನೂರು ಪ್ಯಾಸೆಂಜರ್ ರೈಲು ಇವರ ಮೇಲೆ ಹರಿದು ಹೋಗಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ. ಗದಗ ವಿಭಾಗದ ರೈಲ್ವೆ ಪೊಲೀಸರು, ಹುಬ್ಬಳ್ಳಿ-ಗದಗದ ರೈಲ್ವೆ ಪೊಲೀಸ್ ಡಿವೈಎಸ್​ಪಿ ಲೋಕೇಶಪ್ಪ ನೇತೃತ್ವದ ತಂಡ, ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ವಿಧಿ-ವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ.

ಘಟನಾ ಸ್ಥಳದಲ್ಲಿ ಮೊಬೈಲ್, ಹೆಡ್​ಫೋನ್, ಮದ್ಯದ ಬಾಟಲಿ, ಯುವಕರು ಧರಿಸಿದ್ದ ಪಾದರಕ್ಷೆ ಸೇರಿದಂತೆ ಇನ್ನಿತರ ವಸ್ತುಗಳು ಸಿಕ್ಕಿವೆ. ಎಲ್ಲಾ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇಬ್ಬರು ಯುವಕರ ಅಂತ್ಯಸಂಸ್ಕಾರವನ್ನು ಗಂಗಾವತಿಯಲ್ಲಿ ಮಾಡಲಾಗಿದ್ದು, ಇನ್ನೋರ್ವನ ಮೃತದೇಹವನ್ನು ಕುಟುಂಬಿಕರು ಮಸ್ಕಿಗೆ ಕೊಂಡೊಯ್ದಿದ್ದಾರೆ.

ಸ್ಥಳದಲ್ಲಿ ಮದ್ಯದ ಬಾಟಲಿಗಳು ಸಿಕ್ಕಿದ್ದು, ಮದ್ಯ ಸೇವಿಸಿದ ಬಳಿಕ ಯುವಕರು ಕಿವಿಗೆ ಹೆಡ್​ಫೋನ್ ಹಾಕಿಕೊಂಡು, ಸೌಂಡ್ ಹೆಚ್ಚು ಇಟ್ಟುಕೊಂಡು ಮೈಮರೆತಿರುವುದು ಘಟನೆಗೆ ಪ್ರಮುಖ ಕಾರಣವಾಗಿರಬಹುದು ಎಂದು ಗದಗದ ರೈಲ್ವೆ ಪೊಲೀಸ್ ಠಾಣೆಯ ಪಿಎಸ್ಐ ಸಿದ್ಧನಗೌಡ ತಿಳಿಸಿದ್ದಾರೆ.

ತಂದೆಯಿಂದ ದೂರು: ಘಟನೆ ಸಂಬಂಧ ಮೃತ ಯುವಕ ಮೌನೇಶ ತಂದೆ ಶ್ರೀನಿವಾಸ ಬೈಲ್ ಪತ್ತಾರ ನೀಡಿದ ದೂರಿನ ಮೇರೆಗೆ ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆನ್ಕಾಕ್ ಸಿಲಾಟ್ ಆಟಗಾರನೂ ಸಾವು: ಈ ಘಟನೆಯಲ್ಲಿ ಸಾವನ್ನಪ್ಪಿದ ಮೂವರು ಯುವಕರಲ್ಲಿ ವೆಂಕಟ ಭೀಮರಾಯ ಎಂಬಾತ ಪೆನ್ಕಾಕ್ ಸಿಲಾಟ್ ಕ್ರೀಡೆಯಲ್ಲಿ ರಾಜ್ಯಮಟ್ಟದ ಆಟಗಾರನಾಗಿ ಗಮನ ಸೆಳೆದಿದ್ದ. ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ವೆಂಕಟ, ಕ್ರೀಡೆ ಹಾಗೂ ದೇಹದಾರ್ಢ್ಯತೆಯಲ್ಲಿಯೂ ಆಸಕ್ತಿ ಹೊಂದಿದ್ದ ಎಂದು ಕುಟುಂಬದ ಸ್ನೇಹಿತರು ತಿಳಿಸಿದ್ದಾರೆ.

ಇದನ್ನೂ ಓದಿ: ಹಾವೇರಿ: ನಿರಂತರ ಮಳೆಗೆ ಮನೆ ಮೇಲ್ಚಾವಣಿ ಕುಸಿದು ಮೂವರು ಸಾವು, ಮೂವರಿಗೆ ಗಾಯ - Haveri House Collapse

Last Updated : Jul 19, 2024, 10:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.