ಹುಬ್ಬಳ್ಳಿ: ದೆಹಲಿ ಸ್ಪೋರ್ಟ್ಸ್ ಯೂನಿವರ್ಸಿಟಿ (ಸ್ಕೂಲ್)ಗೆ ಧಾರವಾಡ ಜಿಲ್ಲೆಯಿಂದ ಮೂವರು ವಿದ್ಯಾರ್ಥಿಗಳು ಕುಸ್ತಿ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ದೆಹಲಿ ಸ್ಪೋರ್ಟ್ಸ್ ಯುನಿವರ್ಸಿಟಿಗೆ ಕರ್ನಾಟಕದಿಂದ ವಿವಿಧ ವಿಭಾಗಗಳಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ. ಈ ಪೈಕಿ ಹುಬ್ಬಳ್ಳಿಯ ಉಣಕಲ್ನಿಂದ ಓರ್ವ ಹಾಗೂ ಧಾರವಾಡದಿಂದ ಇಬ್ಬರು ಆಯ್ಕೆಯಾಗಿದ್ದಾರೆ.
ಕುಸ್ತಿ ವಿಭಾಗದಲ್ಲಿ 9ನೇ ತರಗತಿಗೆ ಸರೋಜಾ ಅಶೋಕ ಚಿಲ್ಲಣ್ಣವರ ಮತ್ತು ರಾಹುಲ ಚವ್ಹಾಣ ಹಾಗೂ 7ನೇ ತರಗತಿಗೆ ಗಂಗೋತ್ರಿ ಚವ್ಹಾಣ ಆಯ್ಕೆಯಾಗಿದ್ದಾರೆ. ಇವರು ಸರೋಜಾ ಮತ್ತು ಗಂಗೋತ್ರಿ ಉಣಕಲ್‌ನ ವಾಯುಪುತ್ರ ಸ್ಪೋರ್ಟ್ಸ್ ಫೌಂಡೇಶನ್‌ನಲ್ಲಿಯೂ ತರಬೇತಿ ಪಡೆದಿದ್ದರು. ಅಲ್ಲದೇ ಗಂಗೋತ್ರಿ ಚವ್ಹಾಣ ಮತ್ತು ರಾಹುಲ ಚವ್ಹಾಣ ಸಧ್ಯ ಧಾರವಾಡದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವಸತಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.
ದೆಹಲಿ ಸ್ಫೋರ್ಟ್ಸ್ ಯುನಿವರ್ಸಿಟಿಯಲ್ಲಿ ಓದುವ ವಿದ್ಯಾರ್ಥಿಗಳನ್ನು ಒಲಿಪಿಂಕ್‌ಗೆ ಸಜ್ಜುಗೊಳಿಸಲಾಗುತ್ತದೆ. ಕುಸ್ತಿಯಲ್ಲಿ ಅದಾಗಲೇ ಹೆಸರು ಮಾಡಿರುವ ಧಾರವಾಡದ ಈ ಮೂವರು ಗ್ರಾಮೀಣ ಪ್ರತಿಭೆಗಳು ದೇಶವನ್ನು ಪ್ರತಿನಿಧಿಸುವ ಅವಕಾಶ ದೆಹಲಿ ಸ್ಪೋರ್ಟ್ಸ್ ಯುನಿವರ್ಸಿಟಿ (ಸ್ಕೂಲ್) ಮುಖೇನ ಸಿಕ್ಕಂತಾಗಿದೆ ಎಂದು ಮೂವರು ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು, ದೆಹಲಿ ಸ್ಪೋರ್ಟ್ಸ್ ಯುನಿವರ್ಸಿಟಿಗೆ ನೇಮಕ ಅಗಿದ್ದಕ್ಕೆ ಸರೋಜಾ ಚಿಲ್ಲಣ್ಣವರ ಹರ್ಷ ವ್ಯಕ್ತಪಡಿಸಿದರು. ತಂದೆಯವರಾದ ಅಶೋಕ ಚಿಲ್ಲಣ್ಣವರ್ ಹಾಗೂ ಶಿವಪ್ಪ ಅವರು ಕೋಚ್ ನೀಡಿದ್ದು, ಇದೇ 13ನೇ ತಾರೀಕು ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಮಾಡುವ ಕನಸು ಹೊಂದಿರುವುದಾಗಿ ಸರೋಜಾ ತಿಳಿಸಿದ್ದಾರೆ.