ETV Bharat / state

ಬಿಳಿಗಿರಿ ಬನ, ಹೆಸರಘಟ್ಟ ಹುಲ್ಲುಗಾವಲು ಸೇರಿ 3 ಕಡೆ ಹೊಸ ಪ್ರಭೇದದ ಜೀರುಂಡೆ ಪತ್ತೆ - Special Dung Beetle

author img

By ETV Bharat Karnataka Team

Published : Sep 14, 2024, 1:50 PM IST

ಹೊಸ ಪ್ರಭೇದದ ಮೂರು ಸಗಣಿ ಜೀರುಂಡೆಗಳನ್ನು ಪತ್ತೆ ಹಚ್ಚಲಾಗಿದೆ. ಈ ಮೂಲಕ 176 ಜಾತಿಯ ಜೀರುಂಡೆಗಳಿಗೆ ಈಗ ಮೂರು ಜಾತಿಯ ಜೀರುಂಡೆಗಳು ಸೇರ್ಪಡೆಯಾಗಿವೆ.

ಹೊಸ ಪ್ರಭೇದದ ಜೀರುಂಡೆ ಪತ್ತೆ
ಹೊಸ ಪ್ರಭೇದದ ಜೀರುಂಡೆ ಪತ್ತೆ (ETV Bharat)

ಚಾಮರಾಜನಗರ: ಜೀವ ವೈವಿಧ್ಯದ ತಾಣವಾಗಿರುವ ಚಾಮರಾಜನಗರದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಸೇರಿದಂತೆ 3 ಕಡೆ ಹೊಸ ಪ್ರಭೇದದ ಸಗಣಿ ಜೀರುಂಡೆ (DUNG BEETLE) ಗಳನ್ನು ಪತ್ತೆ ಹಚ್ಚಲಾಗಿದೆ. ಅಶೋಕ ಟ್ರಸ್ಟ್‌ ಫಾರ್‌ ರಿಸರ್ಚ್‌ ಇನ್‌ ಇಕಾಲಜಿ ಅಂಡ್‌ ಎನ್ವಿರಾನ್‌ಮೆಂಟ್‌ (ATREE)ನ ಕೀಟಶಾಸ್ತ್ರಜ್ಞರು 3 ಹೊಸ ಪ್ರಭೇದದ ಜೀರುಂಡೆಗಳನ್ನು ಪತ್ತೆ ಹಚ್ಚಿದ್ದಾರೆ. ಈ ಮೂಲಕ ಜಾಗತಿಕವಾಗಿ 176 ಜಾತಿಯ ಜೀರುಂಡೆಗಳಿಗೆ ಈಗ ಮೂರು ಜಾತಿಯ ಜೀರುಂಡೆಗಳು ಸೇರ್ಪಡೆಗೊಂಡಿದೆ.

ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶ, ಬೆಂಗಳೂರಿನ ಹೆಸರಘಟ್ಟ ಹುಲ್ಲುಗಾವಲು ಮತ್ತು ಅಸ್ಸೋಂನ ತೇಜ್‌ಪುರದಲ್ಲಿ ತಲಾ ಒಂದೊಂದು ಜೀರುಂಡೆ ಪತ್ತೆಯಾಗಿವೆ.

ಬಿಳಿಗಿರಿರಂಗನಾಥ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿ 'ಒನಿಟಿಸ್ ಕೆಥಾಯ್', ಅಸ್ಸಾಂನ ತೇಜ್‌ಪುರದಲ್ಲಿ 'ಒನಿಟಿಸ್ ಬೊಮೊರೆನ್ಸಿಸ್' ಹಾಗೂ ಬೆಂಗಳೂರಿನ ಹೆಸರಘಟ್ಟ ಹುಲ್ಲುಗಾವಲಿನಲ್ಲಿ 'ಒನಿಟಿಸ್' ಜಾತಿ ಜೀರುಂಡೆ ಕಂಡುಬಂದಿವೆ.

ಏಟ್ರಿಯಲ್ಲಿ ಕೀಟಶಾಸ್ತ್ರಜ್ಞರಾಗಿ ಸಂಶೋಧನೆಯಲ್ಲಿ ತೊಡಗಿರುವ ಪ್ರಿಯದರ್ಶನ್ ಧರ್ಮರಾಜನ್ ಮತ್ತು ಕರಿಂಬುಂಕರ ಅವರು ಈ ಹೊಸ ಜೀರುಂಡೆಗಳನ್ನು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನ ಹೆಸರಘಟ್ಟದಲ್ಲಿ ಪತ್ತೆಯಾದ ಜೀರುಂಡೆಗೆ ವಿಸ್ತಾರ, ಬಿಳಿಗಿರಿರಂಗನ ಬೆಟ್ಟದಲ್ಲಿ ಪತ್ತೆಯಾದುದಕ್ಕೆ ಕ್ಷೇತ್ರ ಸಹಾಯಕನಾಗಿದ್ದ ಕೇತಗೌಡ ಹೆಸರು ಹಾಗೂ ಅಸ್ಸೋಂನಲ್ಲಿ ಪತ್ತೆಯಾದ ಜೀರುಂಡೆಗೆ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿರುವ ಕೋಲಿಯಾ ಬೊಮೊರಾ ಎಂಬ ಸೇತುವೆ ಹೆಸರಿಸಲಾಗಿದೆ.

ಈ ಕುರಿತು ಕೀಟ ಶಾಸ್ತ್ರಜ್ಞ ಪ್ರಿಯದರ್ಶನ್ ಪ್ರತಿಕ್ರಿಯಿಸಿ, ಪೋಷಕಾಂಶಗಳ ಸೈಕ್ಲಿಂಗ್‌ನಲ್ಲಿ ಸಗಣಿ ಜೀರುಂಡೆಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಈ ಜೀರುಂಡೆಗಳು ಸಗಣಿಯಲ್ಲಿ ಆಹಾರ, ಸಂತಾನಾಭಿವೃದ್ಧಿ ಮತ್ತು ಗೂಡುಗಳನ್ನು ಮಾಡಿಕೊಳ್ಳಲ್ಲಿದ್ದು ಹವಾಮಾನ ಬದಲಾವಣೆಗೆ ಗಣನೀಯವಾಗಿ ಕೊಡುಗೆ ನೀಡುತ್ತವೆ. ಮಣ್ಣಿನ ಗಾಳಿಯನ್ನು ಸುಧಾರಿಸುತ್ತವೆ, ದ್ವಿತೀಯ ಬೀಜ ಪ್ರಸರಣದಲ್ಲಿ ಸಹಾಯ ಮಾಡುತ್ತವೆ ಮತ್ತು ಪರಾವಲಂಬಿಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮೊದಲ ಬಾರಿಗೆ ಸಿಂಗಳೀಕಗಳ ಸಂತಾನೋತ್ಪತ್ತಿ ಯಶಸ್ವಿ: ಸಿಂಹಬಾಲದ ಕೋತಿ ಮರಿ ಜನನ - Lion tailed macaque

ETV Bharat Logo

Copyright © 2024 Ushodaya Enterprises Pvt. Ltd., All Rights Reserved.