ETV Bharat / state

ಮಹಾರಾಷ್ಟ್ರದಲ್ಲಿ ಅಥಣಿ ಮೂಲದ ಕ್ರೂಸರ್ ಪಲ್ಟಿ: ಮೂವರು ಮಹಿಳೆಯರ ಸಾವು - Accident - ACCIDENT

ಸಾಂಗೋಲ ಪಟ್ಟಣದ ಜತ್ತ ಪಂಡರಾಪುರ ರಸ್ತೆಯಲ್ಲಿ ನಡೆದ ವಾಹನ ಅಪಘಾತದಲ್ಲಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.

Maharashtra accident
ಮಹಾರಾಷ್ಟ್ರ ಅಪಘಾತದಲ್ಲಿ ಅಥಣಿಯ ಮೂವರು ಮೃತ (ETV Bharat)
author img

By ETV Bharat Karnataka Team

Published : May 11, 2024, 4:22 PM IST

ಮಹಾರಾಷ್ಟ್ರ ಅಪಘಾತದಲ್ಲಿ ಅಥಣಿಯ ಮೂವರು ಮೃತ (ETV Bharat)

ಬೆಳಗಾವಿ: ಮಹಾರಾಷ್ಟ್ರ ಸಾಂಗೋಲ ಪಟ್ಟಣದ ಜತ್ತ ಪಂಡರಾಪುರ ರಸ್ತೆಯಲ್ಲಿ ಅಥಣಿ ಮೂಲದ ಕ್ರೂಸರ್ ವಾಹನ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ನಿವಾಸಿಗಳಾದ ಮಹಾದೇವಿ ಚೌಗಲಾ (37) ಗೀತಾ ದೊಡಮನಿ (30) ಕಸ್ತೂರಿ (40) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಇಂದು (ಶನಿವಾರ, ಮೇ. 11) ಮುಂಜಾನೆ ಬಳ್ಳಿಗೇರಿಯ ಕೂಲಿ ಕಾರ್ಮಿಕರು ಮಹಾರಾಷ್ಟ್ರದ ಸಾಂಗೋಲ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಎಂದು ತೆರಳಿದ್ದರು. ಕ್ರೂಸರ್ ಎಡಬದಿಯ ಟೈರ್ ಬ್ಲ್ಯಾಸ್ಟ್ ಆದ ಹಿನ್ನೆಲೆ ರಸ್ತೆಯಲ್ಲಿ ವಾಹನ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮತ್ತೋರ್ವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಆರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಸಮೀಪದ ಜತ್ತ ಪಟ್ಟಣದ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಾರೆ. ಜತ್ತ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ವರುಣನ ಆರ್ಭಟ: ಧರೆಗುರುಳಿದ ಮರ, ನೆಲಕಚ್ಚಿದ ಬಾಳೆ - heavy rain

ETV Bharat Logo

Copyright © 2024 Ushodaya Enterprises Pvt. Ltd., All Rights Reserved.