ETV Bharat / state

ದಾವಣಗೆರೆ: ಒಂದೇ ಕುಟುಂಬದ ಮೂವರು ನಿಗೂಢವಾಗಿ ನಾಪತ್ತೆ! - family missing

ದಾವಣಗೆರೆಯ ವಿನೋಬ ನಗರದಲ್ಲಿ ನೆಲೆಸಿದ್ದ ಒಂದೇ ಕುಟುಂಬದ ಮೂವರು ಕಾಣೆಯಾಗಿದ್ದಾರೆ.

ಒಂದೇ ಕುಟುಂಬದ ಮೂವರು ನಿಗೂಢವಾಗಿ ನಾಪತ್ತೆ
ಒಂದೇ ಕುಟುಂಬದ ಮೂವರು ನಿಗೂಢವಾಗಿ ನಾಪತ್ತೆ (ETV Bharat)
author img

By ETV Bharat Karnataka Team

Published : May 21, 2024, 8:07 PM IST

ದಾವಣಗೆರೆ: ಇಲ್ಲಿನ ವಿನೋಬಾ ನಗರದಲ್ಲಿ ನೆಲೆಸಿದ್ದ ಇಡೀ ಕುಟುಂಬ ನಾಪತ್ತೆಯಾಗಿರುವ ಘಟನೆ ನಡೆದಿದೆ. ವಿನೋಬ ನಗರದ ನಿವಾಸಿಗಳಾದ ಪತಿ ಅಂಜನ್ ಬಾಬು (34), ಪತ್ನಿ ನಾಗವೇಣಿ (30) ಮತ್ತು 1 ವರ್ಷದ ಮಗು ನಾಪತ್ತೆಯಾಗಿದ್ದಾರೆ.

ಏಪ್ರಿಲ್​ 12ರಿಂದ ಮನೆಯಿಂದ ಹೊರ ಹೋದವರು ಇನ್ನೂ ವಾಪಸ್​​ ಬಂದಿಲ್ಲ. ಯಾವ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದಾರೆ ಎನ್ನುವ ನಿಖರ ಕಾರಣ ತಿಳಿದು ಬಂದಿಲ್ಲ. ಅವರು ಸಂಬಂಧಿಕರಿಗೂ ಯಾವುದೇ ಸೂಚನೆ, ಮಾಹಿತಿ ನೀಡಿಲ್ಲ. ಯಾವುದೇ ಪತ್ರ ಬರೆದಿಟ್ಟಿಲ್ಲ. ಹೀಗಾಗಿ ಇವರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ಕುತೂಹಲ ಕೆರಳಿಸಿದೆ. ನಾಪತ್ತೆ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಮನೆಯ ಬಾತ್ ರೂಮ್​ನಲ್ಲಿ ಯುವತಿ ಶವ ಪತ್ತೆ, ಹತ್ಯೆ ಪ್ರಕರಣ ದಾಖಲು - Bengaluru Girl Murder Case

ಚಲಿಸುತ್ತಿದ್ದ ಕಾರುಗಳ ಮೇಲೆ ಬಿದ್ದ ಬೃಹತ್ ಮರ: ನಿನ್ನೆ (ಸೋಮವಾರ) ತಡರಾತ್ರಿ ದಾವಣಗೆರೆಯಲ್ಲಿ ಮಳೆ ಅಬ್ಬರಕ್ಕೆ ಮರವೊಂದು ಚಲಿಸುತ್ತಿದ್ದ ಎರಡು ಕಾರುಗಳ ಮೇಲೆ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ನಗರದ ಆಶೋಕ್ ಟಾಕೀಸ್ ರಸ್ತೆಯಲ್ಲಿ ಕಾರುಗಳ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಚಲಿಸುತ್ತಿದ್ದ ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಡಸ್ಟರ್ ಕಾರ್​ನಲ್ಲಿದ್ದ ಚಾಲಕ ಹಾಗೂ ಮಾಲೀಕ ಜನಾರ್ದನ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.