ಶಿರಸಿ (ಉತ್ತರ ಕನ್ನಡ): ಹಜ್ ಯಾತ್ರೆಗೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಸಾನ್ನಪ್ಪಿರುವ ದುರ್ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.
ಮುಂಡಗೋಡ ಪಟ್ಟಣದಿಂದ ಕುಟುಂಬಸ್ಥರು ಹಜ್ ಯಾತ್ರೆಗೆ ತೆರಳಿದ್ದರು. ಅವರಲ್ಲಿ ಫಯಾಜ್ ರೋಣ, ಪತ್ನಿ ಅಫ್ರೀನಾ ಬಾನು ಹಾಗೂ ಅವರ ಅಣ್ಣನ ಮಗ ಅಯಾನ್ ರೋಣ ಮೃತ ದುರ್ದೈವಿಗಳು. ಫಯಾಜ್ ರೋಣ ಅವರ ಇಬ್ಬರು ಮಕ್ಕಳಿಗೆ ಗಂಭೀರ ಗಾಯವಾಗಿದೆ.
ಮುಂಡಗೋಡ ಪಟ್ಟಣದ ರೋಣ ಮೆಡಿಕಲ್ಸ್ ಮಾಲೀಕರಾಗಿದ್ದ ಫಯಾಜ್, ಮಾರ್ಚ್ 26 ರಂದು ಮೆಕ್ಕಾ ಮದೀನಾ ದರ್ಶನಕ್ಕೆ ತೆರಳಿದ್ದರು. ಏಪ್ರಿಲ್ 6ರ ರಾತ್ರಿ ಮೆಕ್ಕಾ ಮದೀನಾ ಬಳಿ ಸಂಭವಿಸಿದ ರಸ್ತೆ ಅಪಘಾತದಿಂದ ಮೂವರು ಮೃತಪಟ್ಟಿದ್ದು, ಮಕ್ಕಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಲಬುರಗಿ: ಕಲ್ಲು ಎತ್ತಿ ಹಾಕಿ ಇಬ್ಬರು ಕೂಲಿ ಕಾರ್ಮಿಕ ಮಹಿಳೆಯರ ಬರ್ಬರ ಹತ್ಯೆ - Women Murder