ETV Bharat / state

ಶಿವಮೊಗ್ಗ: ಮನೆ ಬಳಿ ಬಂದು ಕಿರಿಕ್ ಮಾಡ್ತಾನೆಂದು ಬಾವನನ್ನೇ ಕೊಲೆ ಮಾಡಿಸಿದ ಬಾಮೈದ - BHADRAVATI MURDER CASE

ಬಾಮೈದನೇ ತನ್ನ ಬಾವನನ್ನು ಕೊಲೆ ಮಾಡಿಸಿದ ಪ್ರಕರಣ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

murder
ಪರಶುರಾಮ, ಮಹಾಂತೇಶ್ (ETV Bharat)
author img

By ETV Bharat Karnataka Team

Published : 3 hours ago

ಶಿವಮೊಗ್ಗ: ನಿತ್ಯ ಮದ್ಯ ಸೇವಿಸಿ ತನ್ನ ಮನೆ ಬಳಿ ಬಂದು ಗಲಾಟೆ ಮಾಡುವುದು ಹಾಗೂ ತನ್ನ ತಂದೆ, ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆಂದು ಬಾಮೈದನೇ ತನ್ನ ಬಾವನನ್ನು ಕೊಲೆ ಮಾಡಿಸಿದ್ದಾನೆ. ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾಂತೇಶ್ ಎಂಬಾತ ತನ್ನ ಸ್ನೇಹಿತರ ಮೂಲಕ ಹೆಂಡತಿಯ ಅಣ್ಣನನ್ನು ಕೊಲೆ ಮಾಡಿಸಿದ್ದ ಘಟನೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿತ್ತು. ಭದ್ರಾವತಿ ತಾಲೂಕು ಮೈದೊಳಲು - ಮಲ್ಲಪುರ ಗ್ರಾಮದ ನಿವಾಸಿ ಪರಶುರಾಮ (45) ಕೊಲೆಯಾದವ. ಹತ್ಯೆ ಮಾಡಿಸಿದ ಮಹಾಂತೇಶ್ ಭದ್ರಾವತಿ ತಾಲೂಕು ಗೊಂದಿ ಗ್ರಾಮದ ನಿವಾಸಿ.

ಸಹೋದರಿಯ ಮದುವೆ ಮಾಡಿದ ಕೆಲ ತಿಂಗಳವರೆಗೆ ಚೆನ್ನಾಗಿಯೇ ಇದ್ದ ಪರಶುರಾಮ, ಬಳಿಕ ಸಕಾರಣವಿಲ್ಲದೇ ತಂಗಿಯ ಮನೆಗೆ ಹೋಗಿ ಜಗಳ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮಾಡುತ್ತಿದ್ದನಂತೆ. ಮನೆ ಬಳಿ ಬಂದು ಗಲಾಟೆ ಮಾಡಬಾರದು ಎಂದು ಮಹಾಂತೇಶ್ ತನ್ನ ಬಾವನಿಗೆ ಸಾಕಷ್ಟು ಸಲ ಬುದ್ದಿ ಹೇಳಿದರೂ ಪರಶುರಾಮ ತನ್ನ ಚಾಳಿ ಮುಂದುವರೆಸಿದ್ದ. ಇದರಿಂದ ಬೇಸರಗೊಂಡ ಪರಶುರಾಮನನ್ನು ಕೊಲೆ ಮಾಡಿಸಲು ನಿರ್ಧರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆಗೆ ಸ್ನೇಹಿತರ ಸಹಾಯ: ಪರಶುರಾಮನನ್ನು ಮಹಾಂತೇಶ್ ಕೊಲೆ ಮಾಡಲು ತನ್ನ ಸ್ನೇಹಿತರಿಬ್ಬರನ್ನು ಬಳಸಿಕೊಂಡಿದ್ದಾನೆ. ಸ್ನೇಹಿತ ಸುದೀಪ್ ಎಂಬಾತನಿಗೆ ಕೊಲೆ ಮಾಡಲು ಹೇಳಿದ್ದ. ಸುದೀಪ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆದರೆ, ಅಲ್ಲಿಂದ ತೆಗೆದು ಹಾಕಲಾಗಿತ್ತು. ಹೀಗಾಗಿ, ಆತನಿಗೆ ಹಣದ ಅವಶ್ಯಕತೆ ಜಾಸ್ತಿ ಇತ್ತು. ಅಲ್ಲದೇ, ಕೊಲೆ ಮಾಡಿದರೆ ಹಣ ನೀಡುವುದಾಗಿ ಮಹಾಂತೇಶ್ ಹೇಳಿದ್ದನಂತೆ.

ಬಳಿಕ ಸುದೀಪ್ ತನ್ನ ಸ್ನೇಹಿತನಾದ ಅರುಣ್ ಎಂಬಾತನ ಜೊತೆ ಸೇರಿಕೊಂಡು ಕೊಲೆ ಮಾಡಿದ್ದ. ಮಹಾಂತೇಶ್ ಪರಶುರಾಮನಿಗೆ ಸುದೀಪ್ ಹಾಗೂ ಅರುಣ್​​ರನ್ನು ಪರಿಚಯ ಮಾಡಿಸಿ, ಒಂದೆರಡು ಸಲ ಪಾರ್ಟಿ ಮಾಡಿಸಿದ್ದ. ಆ ಬಳಿಕ ಕೊಲೆ ಮಾಡಲು ಸ್ಕೆಚ್​ ಹಾಕಿದ್ದ ದಿನ ಸುದೀಪ್ ಹಾಗೂ ಅರುಣ್ ಸೇರಿ ಪರಶುರಾಮನಿಗೆ ಪೋನ್ ಮಾಡಿ ಕುಡಿಯಲು ಬರುವಂತೆ ಎಂ.ಸಿ.ಹಳ್ಳಿ ಬಳಿಯ ಭದ್ರಾ ಕಾಲುವೆ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮದ್ಯ ಕುಡಿಸಿ, ಆತನ ಕುತ್ತಿಗೆಗೆ ಟವಲ್​ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಅಲ್ಲೇ ಪೊದೆಯಲ್ಲಿ ಶವವನ್ನು ಬಿಟ್ಟು ಬಂದಿದ್ದರು. ಈ ಬಗ್ಗೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಮಹಾಂತೇಶ್, ಸುದೀಪ್ ಹಾಗೂ ಅರುಣ್​ರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಎಸ್​​ಪಿ ಮಾಹಿತಿ: ಕೊಲೆ ಕುರಿತು ಮಾಹಿತಿ ನೀಡಿದ ಎಸ್​​ಪಿ ಮಿಥುನ್ ಕುಮಾರ್, ''ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಶುರಾಮ ಎಂಬಾತನನ್ನು ಮಹಾಂತೇಶ್ ತನ್ನ ಸ್ನೇಹಿತರಾದ ಸುದೀಪ್ ಹಾಗೂ ಅರುಣ್ ಎಂಬವರಿಂದ ಕೊಲೆ ಮಾಡಿಸಿದ್ದ. ಸದ್ಯ ಮೂವರೂ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಗೆ ಕಾರಣ ಕೇಳಲಾಗಿ ಅವರು ಹೇಳಿದ್ದು, ಪರಶುರಾಮ ಕುಡಿದು ಮನೆ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ. ಇದರಿಂದ ಮಹಾಂತೇಶ್​ಗೆ ಪರಶುರಾಮನ ಮೇಲೆ ತುಂಬಾ ಕೋಪ ಇತ್ತು. ಹೀಗಾಗಿ, ಆತನನ್ನು ಕೊಲೆ ಮಾಡುವಂತೆ ಸುದೀಪ್​ಗೆ ಹೇಳಿದ್ದ. ಹಣದ ಅವಶ್ಯಕತೆ ಇದ್ದ ಸುದೀಪ್ ತನ್ನ ಸ್ನೇಹಿತ ಅರುಣ್ ಜೊತೆ ಸೇರಿ ಕೃತ್ಯ ಎಸಗಿದ್ದರು. ಶವವನ್ನು ಎಂ.ಸಿ.ಹಳ್ಳಿ ಬಳಿಯ ಭದ್ರಾ ಕಾಲುವೆ ಬಳಿಯೇ ಬಿಟ್ಟು ಬಂದಿದ್ದರು. ಮನೆ ಬಳಿ ಬಂದು ತೊಂದರೆ ಕೊಡುತ್ತಿದ್ದನೆಂದೇ ಪರಶುರಾಮನ ಕೊಲೆ ನಡೆದಿದೆ. ಕೃತ್ಯಕ್ಕೆ ಹಣ ನೀಡಿರುವ ಕುರಿತು ತನಿಖೆ ನಡೆಸಲಾಗುತ್ತಿದೆ'' ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಯಚೂರು: ಅತ್ಯಾಚಾರಕ್ಕೆ ವಿರೋಧಿಸಿದ ಸೊಸೆಯನ್ನು ಕೊಂದ ಮಾವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.