ETV Bharat / state

ನಕಲಿ ಕೀ ಬಳಸಿ ಪಕ್ಕದ ಮನೆಯಿಂದ ನಗದು, ಚಿನ್ನ ಕಳ್ಳತನ; ಕದ್ದ ಮಾಲಿನಲ್ಲಿ ದೇವರಿಗೂ ಪಾಲು! - Bengaluru Theft Case - BENGALURU THEFT CASE

ನಕಲಿ ಕೀ ಬಳಸಿ ಚಿನ್ನಾಭರಣ, ನಗದು ದೋಚುತ್ತಿದ್ದ ಮೂವರನ್ನು ಬೆಂಗಳೂರಿನ ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

three-acused-arrested
ಮೂವರು ಕಳ್ಳರ ಬಂಧನ
author img

By ETV Bharat Karnataka Team

Published : Apr 12, 2024, 3:49 PM IST

ಬೆಂಗಳೂರು: ಪಕ್ಕದ ಮನೆಯ ನಕಲಿ ಕೀ ಬಳಸಿ ಚಿನ್ನಾಭರಣ ಹಾಗೂ ನಗದು ದೋಚಿದ್ದ ಮೂವರು ಕಳ್ಳರನ್ನು ಕೆಂಪೇಗೌಡ ನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಕಿರಣ್, ಆನಂದ್ ಹಾಗೂ ನಾನಿ ಬಂಧಿತರು.

ಮಾರ್ಚ್ 29ರಂದು ನಕಲಿ ಕೀ ಕೈ ಬಳಸಿ ಆರೋಪಿಗಳು ಚಾಮರಾಜಪೇಟೆಯ ಅಪ್ಪುರಾವ್ ರಸ್ತೆಯಲ್ಲಿರುವ ತಮ್ಮ ಮನೆ ಪಕ್ಕದಲ್ಲಿರುವ ಉಮಾ ಎಂಬವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದರು. ಹಗಲು ಹೊತ್ತಲ್ಲೇ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ 6 ಲಕ್ಷ ನಗದು ಮತ್ತು 3.22 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದರು. ಬಳಿಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ, ಕದ್ದ ಹಣದಲ್ಲಿ ಸ್ವಲ್ಪ ಪಾಲನ್ನು ದೇವಸ್ಥಾನದ ಹುಂಡಿಗೆ ಹಾಕಿದ್ದರು ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.

ಇದನ್ನೂ ಓದಿ: ನಕಲಿ ಕೀ ಬಳಸಿ ವಾಹನ ಕಳ್ಳತನ: ಮೂವರು ಸೆರೆ, ₹10 ಲಕ್ಷದ ಮಾಲು ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.