ಮೈಸೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮ್ ಮಂಡಿಸಿರುವ ಕೇಂದ್ರ ಬಜೆಟ್ ಸಣ್ಣ ಹಾಗೂ ಮಾಧ್ಯಮ ವರ್ಗದ ಕೈಗಾರಿಕೆಗಳಿಗೆ ಬೂಸ್ಟರ್ ನೀಡುವ ಬಜೆಟ್ ಆಗಿದೆ ಎಂದು ಮೈಸೂರು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಹೇಳಿಕೆ ನೀಡಿದ್ದಾರೆ.
ಇಂದು ಕೇಂದ್ರದ ಬಜೆಟ್ ಬಗ್ಗೆ ಮೈಸೂರು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಮಾತನಾಡಿ, ಈ ಬಾರಿಯಾ ಬಜೆಟ್ ಸಣ್ಣ ಹಾಗೂ ಮಾಧ್ಯಮ ವರ್ಗದ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಬಜೆಟ್ ಆಗಿದೆ. ಬಜೆಟ್ ಪೂರ್ವದಲ್ಲಿ ಹಲವಾರು ಆಸ್ವಾಸನೆಗಳನ್ನ ನೀಡಿದ್ದು , ನಂತರ ಕಾರ್ಯಗತಗೊಂಡಿದೆ., ನೂರು ಕೋಟಿ ಭದ್ರತ ರಹಿತ ಫಂಡ್ ಇಟ್ಟಿದ್ದು, ಭದ್ರತೆ ಇಲ್ಲದೇ ಸಾಲ ತೆಗೆದು ಕೊಳ್ಳಬಹುದು. ಒಂದೊವರೇ ಲಕ್ಷ ಕೋಟಿ ರೂ ಉದ್ಯೋಗ ಸೃಷ್ಠಿ, ಕೌಸಲ್ಯ ಅಭಿವೃದ್ಧಿಗೆ ಹಣ ಮೀಸಲು ಇಟ್ಟಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಯುವ ಜನರಿಗೆ ಕೌಸಲ್ಯ ತರಬೇತಿ ನೀಡಿ, ಕೈಗಾರಿಕೆಗಳಲ್ಲಿ ಉದ್ಯೋಗ ಸೃಷ್ಟಿ ಮಾಡಲಿದ್ದಾರೆ. ಇದೊಂದು ಕೈಗಾರಿಕಾ ಬೂಸ್ಟ್ ನೀಡುವ ಬಜೆಟ್ ಆಗುದೆ ಎಂದರು.
ಒಟ್ಟಾರೆ ಈ ಬಜೆಟ್ ವಿಶೇಷವಾಗಿ ಮಹಿಳಾ ಕಾರ್ಮಿಕರಿಗೇ ಒತ್ತು ನೀಡುವ ಬಜೆಟ್ ಆಗಿದೆ. ಬೆಂಗಳೂರು - ಹೈದರಾಬಾದ್ ಕಾರಿಡಾರ್ ಯೋಜನೆ, ಕೈಗಾರಿಕಾ ಕ್ಲಸ್ಟರ್ಗಳು, ಕೈಗಾರಿಕಾ ಪಾರ್ಕ್ಗಳು ಸ್ಥಾಪನೆಗೆ ಒತ್ತು ನೀಡಿರುವುದರಿಂದ ಸಣ್ಣ ಕೈಗಾರಿಕೆಗಳಿಗೆ ಆಶಾದಾಯಕ ಆಗಿದೆ. ಇನ್ನೂ ಕರ್ನಾಟಕಕ್ಕೆ ಜೋಡಣೆ ಆಗುವಂತೆ ಹಾಗೂ ಮೈಸೂರುಗೆ ಜೋಡಣೆಯಾಗುವಂತೆ ಹಲವಾರು ಒಳ್ಳೆಯ ಯೋಜನೆ ಘೋಷಣೆ ಮಾಡಿದ್ದು, ಇದೊಂದು ಒಳ್ಳೆಯ ಬಜೆಟ್ ಎಂದು ಸುರೇಶ್ ಕುಮಾರ್ ಜೈನ್ ಹರ್ಷ ವ್ಯಕ್ತಪಡಿಸಿದ್ದಾರೆ .
ಕೃಷಿ ಸಮಸ್ಯಗೆ ಪೂರಕ ಅಲ್ಲದ ಬಜೆಟ್: ಕೇಂದ್ರ ಬಜೆq್ನಲ್ಲಿ ಕೃಷಿ ಕ್ಷೇತ್ರದ ಅನುದಾನ ಹೆಚ್ಚಳ ಮಾಡಿದ್ದು, ರೈತರ ನೈಜ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಧಿಕ್ಕಿನಲ್ಲಿ ಯಾವುದೇ ಕಾರ್ಯ ಯೋಜನೆ ಇಲ್ಲ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಕಾತಿರಿ ಮಾಡುವ ಪ್ರಸ್ತಾವ ಇಲ್ಲ. ಕೃಷಿ ಕ್ಷೇತ್ರ ಶ್ರಮಿಕರ ಕ್ಷೇತ್ರವಾಗಿದ್ದು, ಡಿಜಿಟಲ್ ಕಾರಣದಿಂದ ಆಹಾರ ಉತ್ಪಾದನೆ ಮಾಡುವುದಿಲ್ಲ ಎಂಬುದನ್ನ ಕೇಂದ್ರ ಸರ್ಕಾರ ಮರೆತಿದೆ. ರೈತರಿಗೆ ಜಾಮೀನು ಮೌಲ್ಯದ 75% ರಷ್ಟು ಸಾಲ ನೀಡುವ ನೀತಿ ಜಾರಿಯಾಗಿಲ್ಲ. ಕಿಸನ್ ಕ್ರೆಡಿಟ್ ಕಾರ್ಡ್ ರೈತರಿಗೆ ಉಪಯೋಗವಾಗಿಲ್ಲ. ಇದೊಂದು ರೈತರ ಮೂಗಿಗೆ ತುಪ್ಪ ಸವರುವ ಬಜೆಟ್ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಓದಿ: ಎಲ್ಲ ವರ್ಗಕ್ಕೂ ಶಕ್ತಿ ತುಂಬುವ ಕೆಲಸವಾಗಿದೆ: ಬಜೆಟ್ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ - PM Modi on Budget